ನವದೆಹಲಿ: ಮೈದಾನದ ಮೂಲೆ ಮೂಲೆಗಳಿಗೂ ಬೌಂಡರಿ ಸಿಕ್ಸರ್ ಸಿಡಿಸುವ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಅವರನ್ನು ಕ್ರಿಕೆಟ್ನ ಮಿಸ್ಟರ್ 360 ಎಂದು ಕರೆಯಲಾಗುತ್ತದೆ. ಆದರೆ, ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ, ಕನ್ನಡಿಗ ಕೆ.ಎಲ್ ರಾಹುಲ್ ಭಾರತದ ಮಿಸ್ಟರ್ 360 ಬ್ಯಾಟ್ಸ್ಮನ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿರುವಾಗ ಕೆಎಲ್ ರಾಹುಲ್, ಪ್ರಸ್ತುತ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಅವರು 4 ಪಂದ್ಯಗಳಿಂದ 239 ರನ್ಗಳಿಸಿ, ಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳಿಸಿರುವ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇವರ ಬ್ಯಾಟಿಂಗ್ ನೋಡಿರುವ ಬಂಗಾರ, ರಾಹುಲ್ ಕೂಡ ಮೈದಾನದ ಎಲ್ಲಾ ಭಾಗಕ್ಕೂ ಹೊಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
" ಎಲ್ಲರೂ ಎಬಿ ಡಿ ವಿಲಿಯರ್ಸ್ ಅವರನ್ನು ಮಿ . 360 ಎಂದು ಕರೆಯುತ್ತಾರೆ . ನಾನು ಕೆಎಲ್ ರಾಹುಲ್ ಅವರನ್ನು ಭಾರತದ ಮಿ . 360 ಎಂದು ಕರೆಯುತ್ತೇನೆ . ಮೈದಾನದ ಉದ್ದಗಲಕ್ಕೂ ಬೌಂಡರಿ , ಸಿಕ್ಸರ್ ಸಿಡಿಸಬಲ್ಲ ಸಾಮರ್ಥ್ಯ ರಾಹುಲ್ ಅವರಿಗಿದೆ "ಎಂದು ಬಂಗಾರ ಹೇಳಿದ್ದಾರೆ.
2020ರ ಐಪಿಎಲ್ನಲ್ಲಿ ಕೆಎಲ್ ರಾಹುಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆರ್‌ಸಿಬಿ ವಿರುದ್ಧ ಅವರು ಅಜೇಯ 132 ರನ್ ಗಳಿಸಿದರು. ಇದು ಭಾರತೀಯ ಬ್ಯಾಟ್ಸ್ಮನ್ ಒಬ್ಬರ ಹಾಗೂ ನಾಯಕನೊಬ್ಬನ ಅತ್ಯಧಿಕ ಸ್ಕೋರ್ ಆಗಿದೆ.