ನವದೆಹಲಿ: ಮಹಾಮಾರಿ ಹಾಗೂ ಜಾಗತಿಕ ಪಿಡುಗು ಕೊರೊನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ದೇಶದಲ್ಲಿ ಲಾಕ್ಡೌನ್ ಆದೇಶ ಹೊರಹಾಕಲಾಗಿದೆ. ಇದರಿಂದ ತುರ್ತುಪರಿಸ್ಥಿತಿ ನಿರ್ಮಾಣಗೊಂಡಿದ್ದು, ಅದರ ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಗೆ ಹಣ ನೀಡುವಂತೆ ನಮೋ ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ನಮೋ ಮನವಿ ಮಾಡಿಕೊಳ್ಳುತ್ತಿದ್ದಂತೆ ಪಿಎಂ ಕೇರ್ಸ್ ನಿಧಿಗೆ ಕೋಟ್ಯಂತರ ರೂ ಹರಿದು ಬರುತ್ತಿದೆ. ಅನೇಕ ಸಂಘ-ಸಂಸ್ಥೆಗಳು, ಕಂಪನಿಗಳು, ಬಾಲಿವುಡ್ ಸ್ಟಾರ್ಸ್ ಇದೀಗ ತಮ್ಮ ಕೈಯಿಂದ ಆದ ಸಹಾಯ ನೀಡಿದ್ದು, ಇದೀಗ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ 1.25 ಕೋಟಿ ರೂ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ. ಕೊರೊನಾ ವೈರಸ್ನಿಂದ ಬಳಲುತ್ತಿರುವವರ ಸಹಾಯಕ್ಕೆ ನಿಂತಿರುವ ಟೆನ್ನಿಸ್ ಆಟಗಾರ್ತಿ ಇದೀಗ ತಮ್ಮ ಕೈಯಿಂದ ಆದ ಸಹಾಯ ನೀಡಿದ್ದಾರೆ. ಇದರ ಜತೆಗೆ ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ದೀಪ್ತಿ ಶರ್ಮಾ 50 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ.
-
The last week we have tried as a team to provide some help to the people in need..we provided food to thousands of families and raised 1.25 Crore in one week which will help close to 1 Lakh people.its an ongoing effort and we are in this together 🙏🏽@youthfeedindia @safaindia pic.twitter.com/WEtl1ebjVR
— Sania Mirza (@MirzaSania) March 30, 2020 " class="align-text-top noRightClick twitterSection" data="
">The last week we have tried as a team to provide some help to the people in need..we provided food to thousands of families and raised 1.25 Crore in one week which will help close to 1 Lakh people.its an ongoing effort and we are in this together 🙏🏽@youthfeedindia @safaindia pic.twitter.com/WEtl1ebjVR
— Sania Mirza (@MirzaSania) March 30, 2020The last week we have tried as a team to provide some help to the people in need..we provided food to thousands of families and raised 1.25 Crore in one week which will help close to 1 Lakh people.its an ongoing effort and we are in this together 🙏🏽@youthfeedindia @safaindia pic.twitter.com/WEtl1ebjVR
— Sania Mirza (@MirzaSania) March 30, 2020
ಈಗಾಗಲೇ ಸುರೇಶ್ ರೈನಾ 31 ಕೋಟಿ ಪಿಎಂ ಕೇರ್ಸ್ ನಿಧಿಗೆ ಹಾಗೂ 212 ಲಕ್ಷ ಯುಪಿ ಸಿಎಂ ನಿಧಿಗೆ ನೀಡಿದ್ದು, ಸಚಿನ್ ತೆಂಡೂಲ್ಕರ್ ಕೂಡ 25 ಲಕ್ಷ ಪಿಎಂ ಕೇರ್ಸ್ ನಿಧಿ ಹಾಗೂ 25 ಲಕ್ಷ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಉಳಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಹಿಮಾ ದಾಸ್, ಪಿವಿ ಸಿಧು, ಕುಸ್ತುಪಟು ಭಜರಂಗಿ ಪೂನಿಯಾ ಧನ ಸಹಾಯ ಮಾಡಿದ್ದಾರೆ. ದೇಶದಲ್ಲಿ 1071 ಕೋವಿಡ್ ಕೇಸ್ಗಳಿವೆ. ಅದರಲ್ಲಿ 99 ಜನರು ಗುಣಮುಖರಾಗಿದ್ದು, ಒಟ್ಟು 30 ಜನರು ಸಾವನ್ನಪ್ಪಿದ್ದಾರೆ.