ETV Bharat / sports

’’ಐಪಿಎಲ್​​​​​​ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಆತನಿಗೆ 2021 ವಿಶ್ವಕಪ್​​​​ ತಂಡದಲ್ಲಿ ಸ್ಥಾನ ಖಚಿತ’’ - ಟಿ 20 ವಿಶ್ವಕಪ್ 2021

ಐಪಿಎಲ್ 2020 ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಕೊರೊನಾದಿಂದ ಮುಂದೂಡಲ್ಪಟ್ಟಿದೆ. ಮತ್ತು ರದ್ದಾದ ಟೂರ್ನಿ ಮುಂದಿನ ವರ್ಷ ಭಾರತ ಅಥವಾ ಆಸ್ಟ್ರೇಲಿಯಾದಲ್ಲಿ ನಡೆಯುವ ಸಾಧ್ಯತೆ ಇದೆ.

ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್
author img

By

Published : Jul 31, 2020, 1:44 PM IST

ನವದೆಹಲಿ: ಈ ಬಾರಿ ಐಪಿಎಲ್​​​ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್ ಗೆ 2021ರ ವಿಶ್ವಕಪ್ ತಂಡದಲ್ಲಿ ಸ್ಥಾನ ಗಳಿಸುವ ಸುವರ್ಣಾವಕಾಶವಿದೆ ಎಂದು ಸಂಜು ಸ್ಯಾಮ್ಸನ್ ತರಬೇತುದಾರ ಬಿಜು ಜಾರ್ಜ್ ಹೇಳಿದ್ದಾರೆ.

ತಿರುವನಂತಪುರಂನಲ್ಲಿ ತರಬೇತುದಾರ ಬಿಜು ಜಾರ್ಜ್ ಅವರ ಅಡಿ ತರಬೇತಿ ಪ್ರಾರಂಭಿಸಿದಾಗ ಸ್ಯಾಮ್ಸನ್ ಕೇವಲ 11 ವರ್ಷ. ಆ ಸಮಯದಲ್ಲಿ ಜಾರ್ಜ್ ಅವರು ಕ್ರೀಡಾ ಪ್ರಾಧಿಕಾರದ ಭಾರತದ ಕ್ರಿಕೆಟ್ ತರಬೇತಿ ಕೇಂದ್ರದಲ್ಲಿ ಕ್ರಿಕೆಟ್ ತರಬೇತುದಾರರಾಗಿದ್ದರು.

ಸಂಜು ಸ್ಯಾಮ್ಸನ್ ತರಬೇತುದಾರ ಬಿಜು ಜಾರ್ಜ್
ಸಂಜು ಸ್ಯಾಮ್ಸನ್ ತರಬೇತುದಾರ ಬಿಜು ಜಾರ್ಜ್

ಐಪಿಎಲ್ 2020 ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಕೊರೊನಾದಿಂದ ಮುಂದೂಡಲ್ಪಟ್ಟಿದೆ. ಮತ್ತು ಅದು ಮುಂದಿನ ವರ್ಷ ಭಾರತ ಅಥವಾ ಆಸ್ಟ್ರೇಲಿಯಾದಲ್ಲಿ ನಡೆಯುವ ಸಾಧ್ಯತೆ ಇದೆ.

"ಹೌದು, ಟಿ- 20 ವಿಶ್ವಕಪ್ 2021ರ ತಂಡದಲ್ಲಿ ಸ್ಥಾನ ಗಳಿಸಲು ಇದು ಒಂದು ಸುವರ್ಣಾವಕಾಶ ಎಂದು ನಾನು ಭಾವಿಸುತ್ತೇನೆ. ನೀವು ಅವರ ವೈಟ್ - ಬಾಲ್ ವೃತ್ತಿಜೀವನವನ್ನು ನೋಡಿದರೆ, ಅವರು ಅದರಲ್ಲಿ ಸ್ಥಿರವಾಗಿದ್ದಾರೆ ಮತ್ತು ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ, ಐಪಿಎಲ್‌ನಲ್ಲಿ ಪದಾರ್ಪಣ ಮಾಡಿದಾಗಿನಿಂದಲೂ ಅವನು ಸ್ಥಿರ ಪ್ರದರ್ಶನ ನೀಡುತ್ತಿದ್ದಾನೆ "ಎಂದು ಜಾರ್ಜ್ ಶಿಷ್ಯನನ್ನು ಸಮರ್ಥಿಸಿಕೊಂಡಿದ್ದಾರೆ.

"ಐಪಿಎಲ್ ಆಡಲು ಹೋದಾಗ ಸ್ಯಾಮ್ಸನ್ ಮೇಲೆ ಯಾವುದೇ ಒತ್ತಡ ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಈ ವರ್ಷ, ಅವರು ಬಲಿಷ್ಠ ತಯಾರಿ ನಡೆಸಿದ್ದಾರೆ. ನಾನು ಅವನ ಬಗ್ಗೆ ಹೆಚ್ಚು ಗಮನಹರಿಸಿಲ್ಲ, ನಾವು ಲಾಕ್‌ಡೌನ್‌ನಲ್ಲಿದ್ದಾಗಲೂ ತಿರುವನಂತಪುರದಲ್ಲಿ ಉತ್ತಮ ಅಭ್ಯಾಸ ನಡೆಸುತ್ತಿದ್ದಾನೆ " ಎಂದರು.

ರಿಷಭ್ ಪಂತ್
ರಿಷಭ್ ಪಂತ್

ಮೊದಲನೆಯದಾಗಿ, ರಿಷಭ್ ಪಂತ್ ಒಬ್ಬ ಎಡಗೈ ಆಟಗಾರ ಎಂಬ ಕಾರಣಕ್ಕೆ ಉಳಿದ ವಿಕೆಟ್​ ಕಿಪರ್​ ಹಾಗೂ ಬ್ಯಾಟ್ಸ್​ಮನ್​ಗಳಿಗಿಂತ ಹೆಚ್ಚು ಅವಕಾಶವನ್ನು ಪಡೆಯುತ್ತಿದ್ದಾನೆ. ಭಾರತ ತಂಡಕ್ಕೆ ಯಾರು ವಿಕೆಟ್​ ಕಿಪರ್​ ಆಗಬೇಕು ಎಂದರೆ, ನನ್ನ ಪ್ರಕಾರ ಸ್ಯಾಮ್ಸನ್​ ಉತ್ತಮ ಆಯ್ಕೆ. ಅವರಿಗೆ ಹೆಚ್ಚು ಅವಕಾಶ ಸಿಗಬೇಕು ಎಂಬುದು ನನ್ನ ಅಭಿಪ್ರಾಯ. ಆದರೆ, ಟೀಮ್​ ಇಂಡಿಯಾ ಪ್ರಕಾರ ನೋಡಿದಾಗ ಪಂತ್​ಗೆ ಹೆಚ್ಚು ಅವಕಾಶ ಸಿಗುತ್ತಿದೆ. ಯಾಕೆಂದರೆ ಲೆಗ್​ಸ್ಪಿನ್ನರ್​ಗಳು ಹಾಗೂ ಎಡಗೈ ವೇಗದ ಬೌಲರ್​ಗಳ ಎದರು ಎಡಗೈ ಬ್ಯಾಟ್ಸ್​ಮನ್​ಗಳು ಪರಿಣಿಮಕಾರಿ ಹಾಗಾಗಿ ಅವರಿಗೆ ಅವಕಾಶಗಳು ಹೆಚ್ಚಾಗಿ ಸಿಗುತ್ತಿವೆ ಎಂದು ಇದೇ ವೇಳೆ ವಿಶ್ಲೇಷಿಸಿದರು.

25 ವರ್ಷದ ಸ್ಯಾಮ್ಸನ್​​ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಸ್ಯಾಮ್ಸನ್ ಈವರೆಗೆ ಐಪಿಎಲ್‌ನಲ್ಲಿ 93 ಪಂದ್ಯಗಳನ್ನು ಆಡಿದ್ದು, 27.61 ರ ಸರಾಸರಿಯಲ್ಲಿ 1,696 ರನ್ ಗಳಿಸಿದ್ದಾರೆ.

ಸ್ಯಾಮ್ಸನ್ ಈವರೆಗೆ ಟೀಮ್​ ಇಂಡಿಯಾ ಪರವಾಗಿ 4 ಟಿ- 20 ಪಂದ್ಯಗಳನ್ನಾಡಿದ್ದು, ಇದರಲ್ಲಿ 35 ರನ್ ದಾಖಲಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್​​​​ ವಿರುದ್ಧದ ಟಿ- 20 ಪಂದ್ಯದಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.