ETV Bharat / sports

ನನ್ನನ್ನು ತಪ್ಪಾಗಿ ಅರ್ಥೈಸಬೇಡಿ, ಮುಂದೆ ಯಾರೂ ಈ ತಪ್ಪು ಮಾಡಬಾರದೆಂಬುದು ನನ್ನ ಆಶಯ: ​ ಸಾಮಿ - ಕಾಲು

ಐಪಿಎಲ್​ನಲ್ಲಿ ಸನ್ ರೈಸರ್ಸ್​ ಹೈದರಾಬಾದ್ ಪರ ಆಡುತ್ತಿದ್ದ ವಿಂಡೀಸ್​ಗೆ ಎರಡು ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದ ಡೇರೆನ್​​ ಸಾಮಿ ಕೂಡ ತಮ್ಮ ತಂಡದ ಆಟಗಾರರು ತಮ್ಮನ್ನು ಕಲು(ಕರಿಯ) ಎಂದು ಪಂದ್ಯದ ವೇಳೆ ಕರೆಯುತ್ತಿದ್ದರು.ಕಲು ಪದದ ಅರ್ಥ ಇದೀಗ ಅವರಿಗೆ ಅರ್ಥವಾಗಿದ್ದು, ಹಾಗೆ ಕರೆದಿದ್ದವರೆಲ್ಲ ನನ್ನನ್ನು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.

darren sammy
ಡೇರನ್​ ಸಾಮಿ
author img

By

Published : Jun 13, 2020, 9:26 AM IST

ನವದೆಹಲಿ: ಅಮೆರಿಕದಲ್ಲಿ ಕರಿಯ ಜನಾಂಗದ ವ್ಯಕ್ತಿ, ಪೊಲೀಸ್​ರಿಂದ ಹತ್ಯೆಯಾದ ನಂತರ ವಿಶ್ವದೆಲ್ಲೆಡೆ ಕಪ್ಪು ಜನಾಂಗದ ಜನರು ತಮ್ಮ ಮೇಲೆ ಆಗುತ್ತಿರುವ ನ್ಯಾಯಾಂಗ ನಿಂದನೆಯ ವಿರುದ್ಧ ನ್ಯಾಯಕ್ಕಾಗಿ ಬೃಹತ್​ ಪ್ರತಿಭಟನೆ ನಡೆಸಿದ್ದಾರೆ. ಫುಟ್ಬಾಲ್​ ಆಟಗಾರರು, ಕ್ರಿಕೆಟಿಗರು ಹಾಗೂ ಅಥ್ಲೀಟ್​ಗಳು ಕೂಡ ಕ್ರೀಡಾ ಕ್ಷೇತ್ರದಲ್ಲಿ ಆಗುತ್ತಿರುವ ವರ್ಣಭೇದದ ಬಗ್ಗೆ ಧ್ವನಿಯತ್ತಿದ್ದಾರೆ.

ಐಪಿಎಲ್​ನಲ್ಲಿ ಸನ್ ರೈಸರ್ಸ್​ ಹೈದರಾಬಾದ್ ಪರ ಆಡುತ್ತಿದ್ದ ವಿಂಡೀಸ್​ಗೆ ಎರಡು ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದ ಡೇರೆನ್​ ಸಾಮಿ ಕೂಡ ತಮ್ಮ ತಂಡದ ಆಟಗಾರರು ತಮ್ಮನ್ನು ಕಲು(ಕರಿಯ) ಎಂದು ಪಂದ್ಯದ ವೇಳೆ ಕರೆಯುತ್ತಿದ್ದರು. ಕಲು ಎಂಬ ಪದದ ಅರ್ಥ ಇದೀಗ ಅವರಿಗೆ ಅರ್ಥವಾಗಿದ್ದು, ಹಾಗೆ ಕರೆದಿದ್ದವರೆಲ್ಲ ನನ್ನನ್ನು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಇದೀಗ ಅವರ ಹೇಳಿಕೆಗೆ ಅಭಿಮಾನಿಗಳು ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.

  • Don’t get me wrong I’m not condoning what was done/said. I’m saying let’s use this opportunity to educate each other so it doesn’t happen again. One can only apologize if he/she feels wrong about something. I’m confident&proud to be black. That will never change 🙏🏾🙏🏾🙏🏾😂 https://t.co/HeA1Erwby3

    — Daren Sammy (@darensammy88) June 12, 2020 " class="align-text-top noRightClick twitterSection" data=" ">

ಡೇರೆನ್​​ ಸಾಮಿ 2013-14ರ ಐಪಿಎಲ್​ ಅವಧಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರವಾಗಿ ಆಡುತ್ತಿದ್ದಾಗ, ನಮ್ಮ ತಂಡದ ಕೆಲವು ಸದಸ್ಯರು ನನ್ನನ್ನು ಮತ್ತು ಶ್ರೀಲಂಕಾದ ತಿಸಾರಾ ಪೆರೆರಾರನ್ನು 'ಕಾಲು'(ಕರಿಯ) ಎಂದು ಕರೆಯುತ್ತಿದ್ದರು. ಅಂದು ಹಾಗೆಂದರೆ ಬಲಿಷ್ಠ ಕಪ್ಪು ಮನುಷ್ಯ ಎಂದಿರಬೇಕು ಅಂದುಕೊಂಡಿದ್ದೆ, ಆದರೆ ಆ ಪದದ ಅರ್ಥ ಇದೀಗ ನನಗೆ ತಿಳಿದಿದೆ. ಅಂದು ಹಾಗೆ ಕರೆದವರು ನನಗೆ ತಿಳಿದಿದೆ. ಅವರೆಲ್ಲರೂ ನನ್ನನ್ನು ಕ್ಷಮೆ ಕೇಳಬೇಕು ಎಂದು ಸಾಮಿ ಆರೋಪಿಸಿದ್ದರು.

ಪ್ರೀತಿಯ ಸಾಮಿ ‘ಒಂದು ವೇಳೆ ಇತರ ಆಟಗಾರರು ನಿಮ್ಮನ್ನು ಪ್ರೀತಿಯಿಂದ ಆ ರೀತಿಯಾಗಿ ಕರೆದಿದ್ದರೆ. ನೀವು ಏನು ಮಾಡುತ್ತೀರಾ? ಅಂತ ಕೇಳಿದ್ದಾರೆ. ಜೊತೆಗೆ ಸನ್​ಸೈರಸರ್ಸ್​ ಹೈದರಾಬಾದ್ ಆಟಗಾರರು ಶಿಸ್ತನ್ನು ತೋರಬೇಕಿತ್ತು. ಅವರ ಭಾವನೆಗಳನ್ನು ನೋಯಿಸಿದ್ದಕ್ಕೆ ಕ್ಷಮೆ ಯಾಚಿಸಬೇಕೆಂದು’ ಬಾಲಿವುಡ್​ ನಟಿ ಸ್ವರಾ ಬಾಸ್ಕರ್​ ಟ್ವೀಟ್​ ಮಾಡಿದ್ದಾರೆ.

ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಸಾಮಿ. ನನ್ನನ್ನು ತಪ್ಪಾಗಿ ತಿಳಿದುಕೊಳ್ಳಬೇಡಿ. ಈ ಅವಕಾಶವನ್ನು ಒಬ್ಬರಿಗೊಬ್ಬರು ಅರಿವು ಮೂಡಿಸಲು ಬಳಸಿಕೊಂಡು ಮುಂದೆ ಈ ತಪ್ಪನ್ನು ಯಾರು ಮಾಡಬಾರದೆಂದು ನನ್ನ ಆಶಯವಾಗಿದೆ. ಇದರ ಮೂಲಕ ಈ ತಪ್ಪು ಯಾರೊಬ್ಬರಿಗೆ ತಾವು ಮಾಡಿದ ತಪ್ಪಿನ ಅರಿವಾಗಿದ್ದರೆ ಮಾತ್ರ ಕ್ಷಮೆ ಯಾಚಿಸಬಹುದು. ನಾನು ಕಪ್ಪಾಗಿರುವುದಕ್ಕೆ ನನಗೆ ವಿಶ್ವಾಸ ಮತ್ತು ಹೆಮ್ಮೆ ಇದೆ, ಅದು ಎಂದಿಗೂ ಬದಲಾಗುವುದಿಲ್ಲ ಎಂದಿದ್ದಾರೆ.

ಸಾಮಿ ಈ ಆರೋಪ ಮಾಡುತ್ತಿದ್ದಂತೆ ವಿಂಡೀಸ್ ತಂಡದ ಮಾಜಿ ನಾಯಕರಾದ ಕ್ರಿಸ್​ ಗೇಲ್​, ಡ್ವೇನ್​ ಬ್ರಾವೋ ಕೂಡ ಸಾಮಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಸಮಿ ಆರೋಪಕ್ಕೆ ಪುಷ್ಠಿ ನೀಡುವಂತೆ ಇಶಾಂತ್ ಶರ್ಮಾರ ಇನ್​ಸ್ಟಾಗ್ರಾಂ ಪೋಸ್ಟ್​ ಇಂದು ವೈರಲ್​ ಆಗಿರುವುದುಕ್ಕೆ ಅಭಿಮಾನಿಗಳು ಇಶಾಂತ್​ಗೆ ಚೀಮಾರಿ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.