ETV Bharat / sports

ತಂದೆಯ ಹುಟ್ಟುಹಬ್ಬದ ದಿನವೇ ಕರ್ನಾಟಕ ತಂಡಕ್ಕೆ ಆಯ್ಕೆಯಾದ ದ್ರಾವಿಡ್​​​​​​​ ಮಗ!

author img

By

Published : Jan 11, 2020, 3:11 PM IST

ಶಾಲಾಮಟ್ಟದ ಹಾಗೂ ಅಂಡರ್​ 14 ಕ್ಲಬ್​ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಸಮಿತ್ ದ್ರಾವಿಡ್​ ದಕ್ಷಿಣ ವಲಯದ ಅಂಡರ್​ 19 ಟೂರ್ನಿಗೆ ಆಯ್ಕೆಯಾಗಿದ್ದಾರೆ. ಸಮಿತ್​ ಕೂಡ ತಂದೆಯಂತೆ ಬಲಗೈ ಬ್ಯಾಟ್ಸ್​​ಮನ್ ಆಗಿದ್ದು, ಅಪ್ಪನ ಹಾದಿಯಲ್ಲೇ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

Samit Dravid selected Karnataka Tea
Samit Dravid selected Karnataka Tea

ಬೆಂಗಳೂರು: ವಿಶ್ವಕಂಡ ಶ್ರೇಷ್ಠ ಟೆಸ್ಟ್​ ಕ್ರಿಕೆಟರ್​ ರಾಹುಲ್​ ದ್ರಾವಿಡ್​ ಶನಿವಾರ ತಮ್ಮ 47ನೇ ಜನುಮ ದಿನವನ್ನಾಚರಿಸಿಕೊಳ್ಳುತ್ತಿದ್ದು, ಈ ದಿನವೇ ಅವರ ಮಗ ಕರ್ನಾಟಕ ಅಂಡರ್​ 14 ತಂಡಕ್ಕೆ ಆಯ್ಕೆಯಾಗುವ ಮೂಲಕ ಅಪ್ಪನಿಗೆ ಅತ್ಯುತ್ತಮ ಉಡುಗೊರೆ ನೀಡಿದ್ದಾರೆ.

ಈಗಾಗಲೇ ಶಾಲಾಮಟ್ಟದ ಹಾಗೂ ಅಂಡರ್​ 14 ಕ್ಲಬ್​ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಸಮಿತ್ ದ್ರಾವಿಡ್​ ದಕ್ಷಿಣ ವಲಯದ ಅಂಡರ್​ 19 ಟೂರ್ನಿಗೆ ಆಯ್ಕೆಯಾಗಿದ್ದಾರೆ. ಸಮಿತ್​ ಕೂಡ ತಂದೆಯಂತೆ ಬಲಗೈ ಬ್ಯಾಟ್ಸ್​​ಮನ್ ಆಗಿದ್ದು, ಅಪ್ಪನ ಹಾದಿಯಲ್ಲೇ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಇತ್ತೀಚೆಗೆ ಕೆಎಸ್‍ಸಿಎ ನಡೆಸಿದ ಸೆಲೆಕ್ಷನ್​ ಪಂದ್ಯದಲ್ಲಿ ಸಮಿತ್ ದ್ರಾವಿಡ್​ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಸಮಿತ್​ ಒಂದೇ ಪಂದ್ಯದಲ್ಲಿ ದ್ವಿಶತಕ ಮತ್ತು 94 ರನ್ ಗಳಿಸಿ ಆಯ್ಕೆಗಾರರ ಗಮನ ಸೆಳೆದಿದ್ದರು. ಇದೀಗ ಕರ್ನಾಟಕ ತಂಡದಲ್ಲಿ ಅವಕಾಶ ಸಿಕ್ಕಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ಜನವರಿ 16ರಿಂದ 18ರವರೆಗೆ ಬೆಂಗಳೂರಿನಲ್ಲಿ ದಕ್ಷಿಣ ವಲಯದ ಟೂರ್ನಮೆಂಟ್ ನಡೆಯಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.