ETV Bharat / sports

ಸಾಂಪ್ರದಾಯಿಕ ಉಡುಗೆಯಲ್ಲಿ ಧೋನಿ, ಸಾಕ್ಷಿ ಮಿಂಚು; ದೇಶಿ ಸ್ಟೈಲ್​ ಬಟ್ಟೆ ಹಾಕಿದ್ಯಾಕೆ!?

ಮಹೇಂದ್ರ ಸಿಂಗ್ ಧೋನಿ ಹಾಗೂ ಪತ್ನಿ ಸಾಕ್ಷಿ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಫೋಟೋ ಇನ್​​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

Sakshi
Sakshi
author img

By

Published : Feb 16, 2021, 5:26 PM IST

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಇನ್​​ಸ್ಟಾಗ್ರಾಂನಲ್ಲಿ ಹೊಸದೊಂದು ಚಿತ್ರ ಶೇರ್ ಮಾಡಿದ್ದು, ಅದರಲ್ಲಿ ಪತಿ ಎಂಎಸ್ ಹಾಗೂ ಕೆಲ ಸ್ನೇಹಿತರು ದೇಶಿ ಉಡುಗೆಯಲ್ಲಿ ಮಿಂಚು ಹರಿಸಿದ್ದಾರೆ.

ಸಿಂಗರ್​ ಕಮ್​​​ ನಟ​​ ಜಾಸ್ಸಿ ಗಿಲ್​, ಧೋನಿ, ಸಾಕ್ಷಿ ಹಾಗೂ ಕೆಲ ಸ್ನೇಹಿತರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರೂ ಸಾಂಪ್ರದಾಯಿಕ ಬಟ್ಟೆ ಹಾಕಿಕೊಂಡಿದ್ದಾರೆ. ಚಿತ್ರದಲ್ಲಿ ಧೋನಿ ಕುರ್ತಾ-ಪೈಜಾಮ್ ಹಾಕಿಕೊಂಡಿದ್ರೆ, ಸಾಕ್ಷಿ ಬೇಬಿ ಪಿಂಕ್​ ಲೆಹೆಂಗಾ ಧರಿಸಿದ್ದಾರೆ. ಖಾಸಗಿ ಸಮಾರಂಭದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ತೆಗೆಯಿಸಿಕೊಂಡಿರುವ ಫೋಟೋ ಇದಾಗಿದ್ದು, ಸದ್ಯ ಸಾಕ್ಷಿ ಶೇರ್ ಮಾಡಿಕೊಂಡಿದ್ದಾರೆ.

ಕಳೆದ ವರ್ಷ ಆಗಸ್ಟ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಧೋನಿ ಐಪಿಎಲ್​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಸಿಎಸ್​ಕೆ ತಂಡ ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷದ ಐಪಿಎಲ್​ನಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕಾರಣ ಮೊದಲ ಸಲ ಫ್ಲೇಆಫ್​ ರೇಸ್​ನಿಂದ ಹೊರಬಿದ್ದಿತ್ತು.

ಇದೇ ಕಾರಣಕ್ಕಾಗಿ ಸಿಎಸ್​ಕೆ ಅನೇಕ ಪ್ಲೇಯರ್ಸ್​ಗೆ ಕೈಬಿಟ್ಟಿದ್ದು, ಅದರಲ್ಲಿ ಹರ್ಭಜನ್​ ಸಿಂಗ್​, ಮುರುಳಿ ವಿಜಯ್​, ಕೇದಾರ್​ ಜಾಧವ್​ ಹಾಗೂ ಪಿಯೂಷ್​ ಚಾವ್ಹಾ ಸೇರಿಕೊಂಡಿದ್ದಾರೆ. ಇನ್ನು ಹರಾಜು ಪ್ರಕ್ರಿಯೆ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಸಿಎಸ್​ಕೆ ರಾಬಿನ್​ ಉತ್ತಪ್ಪ ಅವರನ್ನ ತಂಡಕ್ಕೆ ಸೇರಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.