ETV Bharat / sports

ಫೈನಲ್​​ನಲ್ಲಿ ಸೋಲು ಕಾಣುತ್ತಿದ್ದಂತೆ ಕಣ್ಣೀರು ಹಾಕಿದ ಸುಶಾಂತ್​ ಮಿಶ್ರಾ ಕುಟುಂಬ... ಭಾವುಕರಾದ ಕ್ರಿಕೆಟರ್​​ ಪೋಷಕರು! - ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಸೋಲು

ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ ಅಂಡರ್​-19 ವಿಶ್ವಕಪ್​ ಫೈನಲ್​​ ಪಂದ್ಯದಲ್ಲಿ ಸೋಲು ಕಂಡಿದೆ. ಇದು ಭಾರತೀಯ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

sad reaction of sushant family
sad reaction of sushant family
author img

By

Published : Feb 10, 2020, 8:09 AM IST

Updated : Feb 10, 2020, 9:06 AM IST

ರಾಂಚಿ: ಅಂಡರ್​​-19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ತಂಡ ಬಾಂಗ್ಲಾ ವಿರುದ್ಧ ವಿರೋಚಿತ ಸೋಲು ಕಂಡಿದ್ದು, ಈ ಮೂಲಕ ಮತ್ತೊಮ್ಮೆ ವಿಶ್ವಕಪ್​ ಎತ್ತಿ ಹಿಡಿಯುವ ಕನಸು ಕಾಣುತ್ತಿದ್ದ ಯಂಗ್​ ಇಂಡಿಯಾ ನಿರಾಸೆಗೊಳಗಾಗಿದೆ.

ಟೀಂ ಇಂಡಿಯಾ ಫೈನಲ್​​ನಲ್ಲಿ ಮುಗ್ಗರಿಸುತ್ತಿದ್ದಂತೆ ಭಾರತೀಯರು ನಿರಾಸೆಗೊಂಡಿದ್ದು, ಅಂಡರ್​-19 ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದ ಸುಶಾಂತ್​ ಮಿಶ್ರಾ ಕುಟುಂಬ ಬೇಸರದಲ್ಲೇ ತಮ್ಮ ಅಭಿಪ್ರಾಯ ಹೊರಹಾಕಿದೆ. ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುವಂತೆ ದೇವರ ಮೊರೆ ಹೋಗಿದ್ದ ಕುಟುಂಬ ಫೈನಲ್​ನಲ್ಲಿ ಸೋಲು ಕಾಣುತ್ತಿದ್ದಂತೆ ಆಘಾತಕ್ಕೊಳಗಾಗಿದ್ದು, ಈ ವೇಳೆ ಕಣ್ಣೀರು ಸಹ ಹಾಕಿದ್ದಾರೆ.

ಕಣ್ಣೀರು ಹಾಕಿದ ಸುಶಾಂತ್​ ಮಿಶ್ರಾ ಕುಟುಂಬ

ಈಟಿವಿ ಭಾರತ್​ ಜತೆ ತಮ್ಮ ಅಭಿಪ್ರಾಯ ಹೊರಹಾಕಿರುವ ಸುಶಾಂತ್​ ಮಿಶ್ರಾ ತಂದೆ-ತಾಯಿ ಗಳಗಳನೇ ಕಣ್ಣೀರು ಹಾಕಿ, ತಂಡ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸವಿತ್ತು ಎಂದಿದ್ದಾರೆ.

ನಿನ್ನೆಯ ಪಂದ್ಯದಲ್ಲಿ 7ಓವರ್​​ ಮಾಡಿದ್ದ ಶುಶಾಂತ್​​ ಮಿಶ್ರಾ 25ರನ್​ ನೀಡಿ 2ವಿಕೆಟ್​ ಪಡೆದುಕೊಂಡಿದ್ದರು. ಆದರೆ ಬ್ಯಾಟಿಂಗ್​​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿರಲಿಲ್ಲ.

Last Updated : Feb 10, 2020, 9:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.