ನವದೆಹಲಿ: ಮುಲ್ತಾನ್ ಟೆಸ್ಟ್ನಲ್ಲಿ ವಿರೇಂದ್ರ ಸೆಹ್ವಾಗ್ ಸಿಡಿಸಿದ್ದ 309ರನ್ಗಳ ತ್ರಿಶತಕಕ್ಕಿಂತ ಸಚಿನ್ ತೆಂಡೂಲ್ಕರ್ ಚೆನ್ನೈ ಟೆಸ್ಟ್ನಲ್ಲಿ ಗಳಿಸಿದ 136 ರನ್ಗಳು ಹೆಚ್ಚಿನ ಮೌಲ್ಯ ಪಡೆದಿದೆ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧ ಭಾರತೀಯ ಕ್ರಿಕೆಟಿಗರ ಅತ್ಯುತ್ತಮ ಇನ್ನಿಂಗ್ಸ್ಗಳನ್ನು ನೋಡುವುದಾದರೆ 1999ರಲ್ಲಿ ಸಚಿನ್ ಎರಡನೇ ಇನ್ನಿಂಗ್ಸ್ನಲ್ಲಿ ಸಿಡಿಸಿದ್ದ 136 ರನ್ ಹಾಗೂ 2004ರಲ್ಲಿ ವಿರೇಂದ್ರ ಸೆಹ್ವಾಗ್ ಸಿಡಿಸಿ 309 ರನ್. ಈ ಎರಡು ಇನ್ನಿಂಗ್ಸ್ಗಳು ಎರಡು ದೇಶಗಳ ಹಣಾಹಣೆಯಲ್ಲಿ ನಾನು ಕಂಡ ಭಾರತೀಯ ಬ್ಯಾಟ್ಸ್ಮನ್ಗಳ ಶ್ರೇಷ್ಠ ಇನ್ನಿಂಗ್ಸ್ ಎಂದು ಸಕ್ಲೇನ್ ನೆನಪಿಸಿಕೊಂಡಿದ್ದಾರೆ.
ಆದರೆ ಆ ಎರಡು ಟೆಸ್ಟ್ ಪಂದ್ಯಗಳಲ್ಲೂ ಎರಡೂ ಇನಿಂಗ್ಸ್ ಬೌಲಿಂಗ್ ಮಾಡಿದ್ದ ಪಾಕಿಸ್ತಾನ ತಂಡದ ಮಾಜಿ ಆಫ್ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಸಚಿನ್ರ 136 ರನ್ಗೆ ನಾನು ಹೆಚ್ಚು ಮಹತ್ವ ನೀಡುತ್ತೇನೆ. ಏಕೆಂದರೆ ಈ ಪಂದ್ಯಕ್ಕಾಗಿ ನಾವು ಸಂಪೂರ್ಣ ತಯಾರಿ ನಡೆಸಿದ್ದೆವು. ಈ ಸರಣಿ ಭಾರಿ ಪೈಪೋಟಿಯಿಂದ ಒಂದು ರೀತಿ ಯುದ್ದದಂತಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಸಚಿನ್ 136 ರನ್ಗಳಿಸಿದ್ದರು.
ಆದರೆ ಮುಲ್ತಾನ್‌ನಲ್ಲಿ ವಿರೇಂದ್ರ ಸೆಹ್ವಾಗ್ ತ್ರಿಶತಕ ಸಿಡಿಸಿದ್ದು ಪಂದ್ಯ ಮೊದಲನೇ ಇನಿಂಗ್ಸ್ ಆಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಯಾವುದೇ ಒತ್ತಡವಿರಲಿಲ್ಲ. ನಾವು ಪೂರ್ವ ತಯಾರಿ ನಡೆಸಿರಲಿಲ್ಲ. ಪಿಚ್ ಕೂಡ ಫ್ಲಾಟ್ ಆಗಿದ್ದರಿಂದ ಸೆಹ್ವಾಗ್ ವೈಯಕ್ತಿಕ 300ರ ಗಡಿ ದಾಟಲು ಸಾಧ್ಯವಾಯಿತು ಎಂದಿದ್ದಾರೆ.
ಹಾಗಾಗಿ ಸೆಹ್ವಾಗ್ರ ತ್ರಿಶತಕಕ್ಕಿಂತ ಸಚಿನ್ ಗಳಿಸಿದ 136 ರನ್ಗಳಿಗೆ ನಾನು ಹೆಚ್ಚಿನ ಮಹತ್ವ ನೀಡುತ್ತೇನೆ. ಆಗಂತ ನಾನು ಸೆಹ್ವಾಗ್ರನ್ನು ಉತ್ತಮ ಬ್ಯಾಟ್ಸ್ಮನ್ ಅಲ್ಲ ಎಂದು ಹೇಳುತ್ತಿಲ್ಲ. ಆತನೊಬ್ಬ ಅತ್ಯುತ್ತಮ ಹಾಗೂ ಅದ್ಭುತ ಬ್ಯಾಟ್ಸ್ಮನ್. ಅವರು ತ್ರಿಶತಕ ಸಿಡಿಸಿದ ಸಂದರ್ಭದಲ್ಲಿ ನಾನು, ಅಖ್ತರ್ ಗಾಯಗೊಂಡಿದ್ದೆವು. ಪಿಚ್ ಫ್ಲಾಟ್ ಆಗಿತ್ತು.ಬೌಲರ್ಗಳಿಗೆ ಉತ್ತಮವಾಗಿರಲಿಲ್ಲ. ಹೀಗಾಗಿ ಸೆಹ್ವಾಗ್ ಅಂದು ಸಂಪೂರ್ಣ ಲಾಭ ಪಡೆದುಕೊಂಡು ತ್ರಿಶತಕ ಸಿಡಿಸಿದ್ದರು ಎಂದು ಹೇಳುತ್ತಿದ್ದೇನೆ. ಹಾಗಾಗಿ ಸಚಿನ್ ಶತಕಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದೇನೆ ಎಂದಿದ್ದಾರೆ.