ETV Bharat / sports

ಕೋಟಿ ಕೋಟಿ ಬೆಲೆಯ ಕಾರಿದ್ದರೂ ತಮ್ಮ ಹಳೆಯ ಮಾರುತಿ 800 ಹುಡುಕುತ್ತಿರುವ ಸಚಿನ್​! - Mudit dani

ಟೇಬಲ್ ಟೆನ್ನಿಸ್​ ಆಟಗಾರ ಮುದಿತ್​ ದಾನಿ ಅವರ ಯೂಟ್ಯೂಬ್​ ಚಾನೆಲ್​ ಮಾತನಾಡುವ ವೇಳೆ ತಮಗಿರುವ ಕಾರಿನ ಪ್ರೇಮವನ್ನು ಸಚಿನ್​ ಬಿಚ್ಚಿಟ್ಟಿದ್ದಾರೆ. 'ನಾನು ಮೊದಲು ಖರೀದಿಸಿದ್ದ ಕಾರು ಇದೀಗ ನನ್ನ ಬಳಿ ಇಲ್ಲ. ಭಾವನಾತ್ಮಕ ಕಾರಣಗಳಿಂದ ಆ ಕಾರನ್ನು ಮತ್ತೆ ಪಡೆಯಬೇಕೆಂದಿದ್ದೇನೆ' ಎಂದು ಮಾಜಿ ಕ್ರಿಕೆಟಿಗ ಹೇಳಿಕೊಂಡಿದ್ದಾರೆ.

ಸಚಿನ್​  ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​
author img

By

Published : Aug 19, 2020, 3:04 PM IST

ಮುಂಬೈ: ಭಾರತ ತಂಡದ ಲೆಜೆಂಡ್​ ಕ್ರಿಕೆಟಿಗ ಸಚಿನ್ ಕಾರುಗಳ ಪ್ರಿಯ. ಅವರ ಬಳಿ ಕೋಟಿ ಬೆಲೆಬಾಳುವ ಕಾರುಗಳಿದ್ದರೂ, ತಮ್ಮ ಮೊದಲ ಸಂಪಾದನೆಯಲ್ಲಿ ಕೊಂಡಿದ್ದ ಮಾರುತಿ 800 ಕಾರನ್ನು ಮತ್ತೆ ಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಟೇಬಲ್ ಟೆನ್ನಿಸ್​ ಆಟಗಾರ ಮುದಿತ್​ ದಾನಿ ಅವರ ಯೂಟ್ಯೂಬ್​ ಚಾನೆಲ್​ ಮಾತನಾಡುವ ವೇಳೆ ತಮಗಿರುವ ಕಾರಿನ ಪ್ರೇಮವನ್ನು ಸಚಿನ್​ ಬಿಚ್ಚಿಟ್ಟಿದ್ದಾರೆ. 'ನಾನು ಮೊದಲು ಖರೀದಿಸಿದ್ದ ಕಾರು ಇದೀಗ ನನ್ನ ಬಳಿ ಇಲ್ಲ. ಭಾವನಾತ್ಮಕ ಕಾರಣಗಳಿಂದ ಆ ಕಾರನ್ನು ಮತ್ತೆ ಪಡೆಯಬೇಕೆಂದಿದ್ದೇನೆ' ಎಂದು ಮಾಜಿ ಕ್ರಿಕೆಟಿಗ ಹೇಳಿಕೊಂಡಿದ್ದಾರೆ.

ಸಚಿನ್​  ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​

ನನ್ನ ಮೊದಲ ಕಾರು ಮಾರುತಿ 800, ದುರದೃಷ್ಟವಶಾತ್, ಈಗ ಆ ಕಾರು ನನ್ನ ಬಳಿ ಇಲ್ಲ. ನಾನು ಅದನ್ನು ಮತ್ತೆ ಪಡೆದುಕೊಳ್ಳಲು ಬಯಸಿದ್ದೇನೆ. ಹಾಗಾಗಿ ನನ್ನ ಈ ಮಾತನ್ನು ಕೇಳುತ್ತಿರುವ ಜನರಲ್ಲಿ ಯಾರಿಗಾದರೂ ತಿಳಿದಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಶೋ ಮೂಲಕ ಸಚಿನ್​ ಮನವಿ ಮಾಡಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಕಾರುಗಳ ಬಗ್ಗೆ ಆಸಕ್ತಿಯಿದ್ದ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ತಮ್ಮ ಸಹೋದರನ ಜೊತೆ ಕಾರುಗಳನ್ನು ಗಂಟೆಗಟ್ಟಲೆ ನೋಡುತ್ತಿದ್ದರು. ಕ್ರಿಕೆಟಿಗನಾದ ಮೇಲೆ ಕಾರುಗಳ ಸಂಗ್ರಹ ಮಾಡುವುದನ್ನು ಶುರು ಮಾಡಿದರು.

  • Wonderful talking to a talented sportsperson like you Mudit. Good to be on your show.

    Sports indeed has the unique ability to unite all of us together.

    Wishing you all the success in your future endeavours. https://t.co/oyMuNYFQ4H

    — Sachin Tendulkar (@sachin_rt) August 15, 2020 " class="align-text-top noRightClick twitterSection" data=" ">

ನಮ್ಮ ಮನೆಯ ಮುಂದೆ ಮೂವಿ ಹಾಲ್​ ಇತ್ತು. ಅಲ್ಲಿ ದೊಡ್ಡದಾದ ಜಾಗದಲ್ಲಿ ಜನರು ತಮ್ಮ ಕಾರುಗಳನ್ನು ನಿಲ್ಲಿಸಿ ಸಿನಿಮಾ ನೋಡಲು ತೆರಳುತ್ತಿದ್ದರು. ಆ ಸಂದರ್ಭದಲ್ಲಿ ನಾನು ನನ್ನ ಸಹೋದರನೊಂದಿಗೆ ಆ ಕಾರುಗಳನ್ನು ವೀಕ್ಷಿಸಲು ನಮ್ಮ ಬಾಲ್ಕನಿಯಲ್ಲಿ ಗಂಟೆಗಟ್ಟಲೇ ನಿಲ್ಲುತ್ತಿದ್ದೆ ಎಂದು ತಮ್ಮ ಹಳೆಯ ಕಥೆಯನ್ನು ಸಚಿನ್​ ಬಿಚ್ಚಿಟ್ಟಿದ್ದಾರೆ.

ಸಚಿನ್​  ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​

ಕಾರುಪ್ರಿಯನಾಗಿರುವ ಸಚಿನ್​ ಬಳಿ, ಫೆರಾರಿ 360 ಮೊಡೆನಾ, ನಿಸ್ಸಾನ್​ ಜಿಟಿ-ಆರ್​, ಬಿಎಮ್​ಡಬ್ಲ್ಯೂ ಎಕ್ಸ್​5ಎಮ್​, ಬಿಬಿಎಮ್​ಡಬ್ಲ್ಯೂ ಐ8, ಬಿಎಮ್​ಡಬ್ಲ್ಯೂ ಎಮ್6, ಬಿಎಮ್​ಡಬ್ಲ್ಯೂ7, ಬಿಎಮ್​ಡಬ್ಲ್ಯೂ5, ಮರ್ಸಿಡೀಸ್​​ ಬೆಂಜ್​​​ ಸೇರಿದಂತೆ ಹಲವಾರು ಕಾರುಗಳನ್ನು ಹೊಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.