ಬರ್ಲಿನ್: ಬರ್ಲಿನ್‌ನಲ್ಲಿ ನಡೆದ ವರ್ಣರಂಜಿತ 'ಲಾರೆಸ್ ವಿಶ್ವ ಸ್ಪೋರ್ಟ್ಸ್ ಪ್ರಶಸ್ತಿ'ಗೆ ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾಜನರಾಗಿದ್ದಾರೆ.
ಸ್ಪೋರ್ಟ್ ವಿಭಾಗದಲ್ಲಿ 'ಆಸ್ಕರ್' ಎಂದು ಕರೆಯಲಾಗುವ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಯು 20ನೇ ವರ್ಷಕ್ಕೆ ಕಾಲಿರಿಸಿದೆ. ಕ್ರೀಡಾ ಪ್ರಪಂಚದ ವ್ಯಕ್ತಿಗಳು ಹಾಗೂ ತಂಡಗಳ ಕ್ರೀಡಾ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿಕೊಂಡು ಬರಲಾಗುತ್ತಿದೆ. ಕಳೆದೆರಡು ದಶಕಗಳಲ್ಲಿನ ಸ್ಫೂರ್ತಿದಾಯಕ ಆಟವಾಡಿದ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿದೆ. ಈ ವರ್ಷದ 'ಸ್ಪೋರ್ಟಿಂಗ್ ಮೊಮೆಂಟ್ 2000-2020 ಪ್ರಶಸ್ತಿ'ಯು ಸಚಿನ್ ರಮೇಶ್ ತೆಂಡೂಲ್ಕರ್ಗೆ ಒಲಿದಿದೆ.
-
Tendulkar's victory lap post 2011 World Cup win named Laureus Sporting Moment of past 2 decades
— ANI Digital (@ani_digital) February 17, 2020 " class="align-text-top noRightClick twitterSection" data="
Read @ANI Story | https://t.co/BpbFFVg58y pic.twitter.com/Ju3fJcKbyy
">Tendulkar's victory lap post 2011 World Cup win named Laureus Sporting Moment of past 2 decades
— ANI Digital (@ani_digital) February 17, 2020
Read @ANI Story | https://t.co/BpbFFVg58y pic.twitter.com/Ju3fJcKbyyTendulkar's victory lap post 2011 World Cup win named Laureus Sporting Moment of past 2 decades
— ANI Digital (@ani_digital) February 17, 2020
Read @ANI Story | https://t.co/BpbFFVg58y pic.twitter.com/Ju3fJcKbyy
ಲಿಯೋನೆಲ್ ಮೆಸ್ಸಿ ಲೂಯಿಸ್ ಅವರು ರೇಸರ್ ಹ್ಯಾಮಿಲ್ಟನ್ ಜೊತೆಗೆ ವರ್ಷದ ಲಾರೆಸ್ ವರ್ಲ್ಡ್ ಸ್ಪೋರ್ಟ್ಮ್ಯಾನ್ ಪ್ರಶಸ್ತಿ ಗೆದ್ದಿದ್ದಾರೆ. ಲಿಯೋನೆಲ್ ಮೆಸ್ಸಿ ಈ ಪ್ರಶಸ್ತಿ ಗೆದ್ದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದು ಕ್ರೀಡೆಯು ಎಷ್ಟು ಶಕ್ತಿಯುತವಾಗಿದೆ ಮತ್ತು ಇದು ನಮ್ಮೆಲ್ಲರ ಜೀವನಕ್ಕೆ ಯಾವ ಮ್ಯಾಜಿಕ್ ಮಾಡುತ್ತದೆ ಎಂಬುದನ್ನು ನೆನಪಿಸುತ್ತದೆ. ರಾಷ್ಟ್ರಕ್ಕಾಗಿ ದೇವರು. ವಿಶ್ವಾದ್ಯಂತ ಸ್ಫೂರ್ತಿ ಎಂದು ಸಚಿನ್ ಕುರಿತು ಲಾರೆಸ್ ಟ್ವೀಟ್ ಮಾಡಿದೆ.
ನಿಜವಾಯ್ತು ಗೆಳೆಯ ಗಂಗೂಲಿ ಭವಿಷ್ಯ:
ಸಚಿನ್ ಅವರು ಜರ್ಮನಿಯ ಬರ್ಲಿನ್‌ನಲ್ಲಿ ಸುತ್ತಾಡುತ್ತಿರುವ ಕೆಲವೊಂದು ಚಿತ್ರಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ಲಾರೆಸ್ ಸ್ಪೋರ್ಟ್ ವರ್ಲ್ಡ್ ಸ್ಪೋರ್ಟ್ ಅವಾರ್ಡ್ಸ್ 2020ಗಾಗಿ ಬರ್ಲಿನ್ನಲ್ಲಿದ್ದೇನೆ, ಖುಷಿಯಾಗುತ್ತಿದೆ’ ಎಂದು ಬರೆದುಕೊಂಡಿದ್ದರು.
-
Happy to be in Berlin for the @LaureusSport World Sports Awards 2020! #Laureus20 #SportsUnitesUs pic.twitter.com/aDo0Dtm3nn
— Sachin Tendulkar (@sachin_rt) February 17, 2020 " class="align-text-top noRightClick twitterSection" data="
">Happy to be in Berlin for the @LaureusSport World Sports Awards 2020! #Laureus20 #SportsUnitesUs pic.twitter.com/aDo0Dtm3nn
— Sachin Tendulkar (@sachin_rt) February 17, 2020Happy to be in Berlin for the @LaureusSport World Sports Awards 2020! #Laureus20 #SportsUnitesUs pic.twitter.com/aDo0Dtm3nn
— Sachin Tendulkar (@sachin_rt) February 17, 2020
ಇದಕ್ಕೆ ಕಮೆಂಟ್ ಮಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು, ‘ತೆಂಡುಲ್ಕರ್, ನಾನು ಹೇಳಿದ್ದು ಸುಳ್ಳಲ್ಲ’ ಎಂದು ಸಚಿನ್ ಕಾಲೆಳೆದಿದ್ದರು. ಭವಿಷ್ಯ ಅವರು ಈ ಪ್ರಶಸ್ತಿ ಕುರಿತು ಹೇಳಿರಬೇಕು ಎಂಬುದು ಇದರಿಂದ ದಟ್ಟವಾಗುತ್ತಿದೆ.