ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ಟೂರ್ನಮೆಂಟ್ ಮುಕ್ತಾಯಗೊಂಡಿದ್ದು, ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಮಧ್ಯೆ ಐಸಿಸಿ ನಿನ್ನೆ ವಿಶ್ವಕಪ್ ತಂಡ ಪ್ರಕಟ ಮಾಡಿ, ರೋಹಿತ್, ಬುಮ್ರಾಗೆ ಸ್ಥಾನ ನೀಡಿತ್ತು.
ಇದೀಗ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್ ತಮ್ಮ ಐಸಿಸಿ ಏಕದಿನ ವಿಶ್ವಕಪ್ ತಂಡ ಪ್ರಕಟಗೊಳಿಸಿದ್ದು, ಟೀಂ ಇಂಡಿಯಾದ ಐವರಿಗೆ ಸ್ಥಾನ ನೀಡಿದ್ದಾರೆ. ಆದರೆ ಟೀಂ ಇಂಡಿಯಾ ಬೆಸ್ಟ್ ಫಿನಿಷರ್ ಎಂಬ ಪಟ್ಟ ಕಟ್ಟಿಕೊಂಡಿರುವ ಎಂ.ಎಸ್.ಧೋನಿ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ.
ತಂಡ ಇಂತಿದೆ:
ರೋಹಿತ್ ಶರ್ಮಾ, ಜಾನ್ ಬೈರ್‌ಸ್ಟೋವ್(ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್(ಕ್ಯಾಪ್ಟನ್), ವಿರಾಟ್ ಕೊಹ್ಲಿ, ಶಕೀಬ್ ಅಲ್ ಹಸನ್, ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮಿಚೆಲ್ ಸ್ಟಾರ್ಕ್, ಜಸ್ಪ್ರೀತ್ ಬುಮ್ರಾ ಹಾಗೂ ಜೋಫರ್ ಆರ್ಚರ್ ಇದ್ದಾರೆ.
ಐಸಿಸಿ ವಿಶ್ವಕಪ್ನಲ್ಲಿ ಕೇನ್ ವಿಲಿಯಮ್ಸನ್ ಮ್ಯಾನ್ ಆಫ್ ದಿ ಸಿರೀಸ್ ಅವಾರ್ಡ್ ಪಡೆದುಕೊಂಡಿದ್ದರೆ, ಬೆನ್ ಸ್ಟೋಕ್ಸ್ ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಇನ್ನು ಟೂರ್ನಮೆಂಟ್ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಕೆ ಮಾಡಿರುವ ಆಟಗಾರನಾಗಿದ್ದಾರೆ.