ETV Bharat / sports

ಲಾರಾಗಿಂತ ಸಚಿನ್​​ ಬೆಸ್ಟ್​ ಬ್ಯಾಟ್ಸ್​ಮನ್​, ಕಾಲೀಸ್​ ಕ್ರಿಕೆಟ್​ನ ಪರಿಪೂರ್ಣ ಬ್ಯಾಟ್ಸ್​ಮನ್​: ಬ್ರೆಟ್​ ಲೀ - ಬ್ರೆಟ್​ ಲೀ

ಸಚಿನ್ ತೆಂಡೂಲ್ಕರ್​ ಲಾರಾಗಿಂತ ಉತ್ತಮ ಬ್ಯಾಟ್ಸ್​ಮನ್. ಆದರೆ, ತನ್ನ ಪ್ರಕಾರ ಜಾಕ್ ಕಾಲೀಸ್​ ಪರಿಪೂರ್ಣ ಬ್ಯಾಟ್ಸ್​ಮನ್​ ಎಂದು ಬ್ರೆಟ್​ ಲೀ ಹೇಳಿದ್ದಾರೆ.

ಸಚಿನ್​-ಲಾರಾ- ಕಾಲೀಸ್​
ಸಚಿನ್​-ಲಾರಾ- ಕಾಲೀಸ್​
author img

By

Published : May 27, 2020, 2:03 PM IST

ಸಿಡ್ನಿ(ಆಸ್ಟ್ರೇಲಿಯಾ): ಭಾರತದ ಮಾಜಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್ ಹಾಗೂ​ ವಿಂಡೀಸ್​ನ ಬ್ರಿಯಾನ್​ ಲಾರಾ ಇಬ್ಬರ ನಡುವಿನ ಸ್ಪರ್ಧೆಯಲ್ಲಿ ಸಚಿನ್​ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದು ಆಸೀಸ್​ ಮಾಜಿ ವೇಗಿ ಬ್ರೆಟ್​ ಲೀ ಅಭಿಪ್ರಾಯಪಟ್ಟಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಜಾಕ್​ ಕಾಲೀಸ್ ಪರಿಪೂರ್ಣ ಕ್ರಿಕೆಟರ್​ ಎಂದು ಲೀ ಹೇಳಿದ್ದಾರೆ.

ಜಿಂಬಾಬ್ವೆಯ ಪಾಮ್ಮಿ ಎಂಬಾಗ್ವ ನಡೆಸಿದ ಸಂದರ್ಶನದಲ್ಲಿ ಬ್ರೆಟ್​ ಲೀ ತಾವು ಬೌಲಿಂಗ್ ಮಾಡಿದ ಬ್ಯಾಟ್ಸ್​ಮನ್​ಗಳಲ್ಲಿ ಸಚಿನ್​ ಅತ್ಯುತ್ತಮ ಬ್ಯಾಟ್ಸ್​ಮನ್ ಎಂದು ತಿಳಿಸಿದ್ದಾರೆ.

ನೀವು ಕೂಡ ಸಚಿನ್​ ತೆಂಡೂಲ್ಕರ್​ ಎಂದು ಆಲೋಚಿಸುತ್ತೀರ, ಏಕೆಂದರೆ ಸಚಿನ್​ ರಿಟರ್ನ್​ ಕ್ರೀಸ್​ನಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದರು. ಹಾಗೆಯೇ ಸ್ಟಂಪ್​ ಪಕ್ಕದಲ್ಲೂ ಬ್ಯಾಟಿಂಗ್ ನಡೆಸುತ್ತಿದ್ದರು. ಅವರು ನನ್ನ ವಿರುದ್ಧ ಬ್ಯಾಟಿಂಗ್​ ನಡೆಸಲು ಭಯಸುತ್ತಿದ್ದರು. ನನ್ನ ಪ್ರಕಾರ ಅವರೊಬ್ಬ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದು ಹೇಳಿದ್ದಾರೆ.

Sachin Tendulkar best batsman
ಬ್ರೆಟ್ ಲೀ

ಆದರೆ ಬ್ರಿಯಾನ್​ ಲಾರಾ ತೆಗೆದುಕೊಳ್ಳಿ, ಅವರು ತುಂಬಾ ಅಬ್ಬರದ ಬ್ಯಾಟಿಂಗ್​ ನಡೆಸುತ್ತಿದ್ದರು. ಅವರಿಗೆ ಎಷ್ಟು ಬೇಗನೇ ಬೌಲ್​ ಮಾಡಿದರೂ ಅವರು ಮೈದಾನದ ಯಾವುದೇ ಮೂಲೆಗಾದರು ಸಿಕ್ಸ್ ಹೊಡೆಯಲು ಸಮರ್ಥರಾಗಿದ್ದರು. ಲಾರಾ ಮತ್ತು ಸಚಿನ್​ ನಡುವೆ ಬೆಸ್ಟ್ ಬ್ಯಾಟ್ಸ್​ಮನ್​ ಯಾರು ಎಂಬ ಸ್ಪರ್ಧೆಯಲ್ಲಿ ನಾನು ಸಚಿನ್ ಅವರನ್ನು ಗ್ರೇಟೆಸ್ಟ್ ಬ್ಯಾಟ್ಸ್​ಮನ್​ ಎಂದು ಆಯ್ಕೆ ಮಾಡುತ್ತೇನೆ. ಆದರೆ ನನ್ನ ಪ್ರಕಾರ ಜಾಕ್ ಕಾಲೀಸ್ ಪರಿಪೂರ್ಣ ಕ್ರಿಕೆಟರ್ ಎಂದು ಲೀ ಹೇಳಿದ್ದಾರೆ.

ಮಾಜಿ ದಕ್ಷಿಣ ಅಫ್ರಿಕಾ ಆಲ್​ರೌಂಡರ್ ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ ಎರಡರಲ್ಲೂ 250 ಕ್ಕೂ ಹೆಚ್ಚು ವಿಕೆಟ್​ ಹಾಗೂ 10,000 ರನ್​ ಗಳಿಸಿರುವ ವಿಶ್ವದ ಏಕೈಕ ಬ್ಯಾಟ್ಸ್​ಮನ್​ ಆಗಿದ್ದಾರೆ. ಇದಕ್ಕೂ ಮೊದಲು ಪ್ರಸ್ತುತ ಕೊಹ್ಲಿ ಹಾಗೂ ಸ್ಮಿತ್ ನಡುವೆ ಉತ್ತಮ ಬ್ಯಾಟ್ಸ್​ಮನ್​ ಯಾರು ಎಂಬ ಪ್ರಶ್ನೆಗೆ ಸ್ಟಿವ್​ ಸ್ಮಿತ್​ರನ್ನು ಆಯ್ಕೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.