ETV Bharat / sports

ಕುಟಂಬಸ್ಥರ ಸಾವು: 3 ಟಿಸಿ ಸಾಲಿಡಾರಿಟಿ ಕಪ್​ನಿಂದ ಹೊರಬಂದ ಕಗಿಸೋ ರಬಾಡ

ಕ್ರಿಕೆಟ್​ ದಕ್ಷಿಣ ಆಫ್ರಿಕಾ ಬುಧವಾರ ಈ ವಿಚಾರವನ್ನು ಖಚಿತಪಡಿಸಿದ್ದು, ಮೊದಲ ಪಂದ್ಯದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದನ್ನು​ ಘೋಷಣೆ ಮಾಡಿದೆ.

TC Solidarity Cup
ಕಗಿಸೋ ರಬಾಡ
author img

By

Published : Jul 16, 2020, 3:26 PM IST

ಕೇಪ್‌ಟೌನ್ : 8 ಆಟಗಾರರ 3 ತಂಡಗಳು ಒಂದೇ ಪಂದ್ಯದಲ್ಲಿ ಆಡುವ ವಿಶೇಷ 3ಟಿಸಿ ಕಪ್​(ತ್ರೀ ಟೀಮ್​ ಕ್ರಿಕೆಟ್​) ಸಾಲಿಡಾರಿಟಿ ಕಪ್​ನಿಂದ ವೇಗಿ ರಬಾಡ ಮತ್ತು ಆಲ್​ರೌಂಡರ್ ಕ್ರಿಸ್ ಮೋರಿಸ್ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದಾರೆ.

ಕ್ರಿಕೆಟ್​ ದಕ್ಷಿಣ ಆಫ್ರಿಕಾ ಬುಧವಾರ ಈ ವಿಚಾರವನ್ನು ಖಚಿತಪಡಿಸಿದ್ದು, ಮೊದಲ ಪಂದ್ಯದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದನ್ನು​ ಘೋಷಣೆ ಮಾಡಿದೆ.

ಕುಟಂಬದವರ ದುರಂತ ಸಾವಿನಿಂದಾಗಿ ರಬಾಡ ಮತ್ತು ಸಿಸದಾ ಮಗಾಲ ಸಾಲಿಡಾರಿಟಿ ಪ್ರಥಮ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಇನ್ನು ಕ್ರಿಸ್​ ಮೋರಿಸ್​ ವೈಯಕ್ತಿಕ ಕಾರಣದಿಂದ ಟೂರ್ನಿಯಲ್ಲಿ ಆಡುತ್ತಿಲ್ಲ ಎಂದು ಸಿಎಸ್​ಎ ತಿಳಿಸಿದೆ.

ರಬಾಡ ಹಾಗೂ ಮಗಾಲ ಜಾಗಕ್ಕೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಮಖಾಯ್​ ಎನ್‌ಟಿನಿ ಅವರ ಪುತ್ರ ಥಾಂಡೋ ಎನ್​ಟಿನಿ ಹಾಗೂ ಜೆರಾಲ್ಡ್ ಕೊಯೆಟ್ಜಿ ಕಿಂಗ್‌ಫಿಶರ್ಸ್​ ತಂಡಕ್ಕೆ ಆಯ್ಕೆ ಮಾಡಲಾಗಿದೆ. ರಬಾಡ ಬದಲಿಗೆ ವಿಕೆಟ್​ ಕೀಪರ್​ ಹೆನ್ರಿಚ್​ ಕ್ಲಾಸನ್​ ಕಿಂಗ್​ ಫೀಶರ್​ ನಾಯಕತ್ವ ವಹಿಸಲಿದ್ದಾರೆ. ಇನ್ನು ಆಲ್​ರೌಂಡರ್​ ಕ್ರಿಸ್​ ಮೋರಿಸ್​ ಬದಲಿಗೆ ಜಾರ್ನ್ ಫಾರ್ಚುಯಿನ್‌ ಟೇಕ್​ಲೋಟ್​ ಈಗಲ್ಸ್‌ ತಂಡ ಸೇರಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ನಿಂದ ಸ್ಥಗಿತಗೊಂಡಿರುವ ಕ್ರಿಕೆಟ್, '3 ಟಿಸಿ ಸಾಲಿಡಾರಿಟಿ ಕಪ್‘ ಮೂಲಕ ಜುಲೈ 18ರಿಂದ ಪುನರಾರಂಭಗೊಳ್ಳುತ್ತಿದೆ. ಇದರಲ್ಲಿ ಎಬಿಡಿ, ಡಿಕಾಕ್​ ಫಾಫ್​ ಡು ಫ್ಲೆಸಿಸ್​, ಪೆಹ್ಲುಕ್ವಾಯೋ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕ್ರಿಕೆಟಿಗರು ಆಡುತ್ತಿದ್ದಾರೆ .

ETV Bharat Logo

Copyright © 2024 Ushodaya Enterprises Pvt. Ltd., All Rights Reserved.