ETV Bharat / sports

ನಿಷೇಧದ ನಂತರ ಶ್ರೀಶಾಂತ್ ಕಂಬ್ಯಾಕ್​.. 7 ವರ್ಷಗಳ ನಂತರ ಮೈದಾನಕ್ಕಿಳಿಯಲು ಕಾತರ - ಏಳು ವರ್ಷಗಳ ನಂತರ ಶ್ರೀಶಾಂತ್ ಕಂಬ್ಯಾಕ್

ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಏಳು ವರ್ಷಗಳ ನಿಷೇಧವನ್ನು ಪೂರ್ಣಗೊಳಿಸಿದ ನಂತರ ವೇಗಿ ಎಸ್.ಶ್ರೀಶಾಂತ್ ಮೊದಲ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

S Sreesanth Returns After Seven-year Ban
ನಿಷೇಧದ ನಂತರ ಶ್ರೀಶಾಂತ್ ಕಂಬ್ಯಾಕ್​
author img

By

Published : Nov 27, 2020, 12:22 PM IST

ಕೊಚ್ಚಿ (ಕೇರಳ): ಕ್ರಿಕೆಟ್‌ನಿಂದ 7 ವರ್ಷಗಳ ನಿಷೇಧದ ನಂತರ, ಕೇರಳ ಕ್ರಿಕೆಟ್ ಅಸೋಸಿಯೇಷನ್ ​​ಆಯೋಜಿಸಿರುವ ಪ್ರೆಸಿಡೆಂಟ್ ಕಪ್ ಟಿ - 20 ಟೂರ್ನಮೆಂಟ್‌ನಲ್ಲಿ ಆಡಲು ವೇಗಿ ಎಸ್.ಶ್ರೀಶಾಂತ್ ಕೊಚ್ಚಿಯಲ್ಲಿ ತಯಾರಿ ನಡೆಸುತ್ತಿದ್ದಾರೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಶ್ರೀಶಾಂತ್, "ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಆಯ್ಕೆದಾರರಿಗೆ ಕೃತಜ್ಞನಾಗಿದ್ದೇನೆ. ಕಳೆದ 7 ವರ್ಷಗಳಿಂದ ನಾನು ಇದೇ ಸಮಯಕ್ಕಾಗಿ ಕಾಯುತ್ತಿದ್ದೇನೆ" ಎಂದಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಏಳು ವರ್ಷಗಳ ನಿಷೇಧವನ್ನು ಪೂರ್ಣಗೊಳಿಸಿದ ನಂತರ ಕೇರಳ ಕ್ರಿಕೆಟ್ ಅಸೋಸಿಯೇಷನ್ ​​ಆಯೋಜಿಸಿರುವ ಸ್ಥಳೀಯ ಟಿ-20 ಪಂದ್ಯಾವಳಿಯೊಂದಿಗೆ ಶ್ರೀಶಾಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ.

ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಿಷೇಧಕ್ಕೆ ಗುರಿಯಾಗಿದ್ದ ಶ್ರೀಶಾಂತ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶಿಕ್ಷೆ ಪೂರ್ಣಗೊಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಸಚಿನ್ ಬೇಬಿ ನಾಯಕತ್ವ ವಹಿಸಲಿರುವ ಕೆಸಿಎ ಟೈಗರ್ಸ್ ತಂಡದಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೆಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.