ಅಬುಧಾಬಿ: ಬೌಲರ್ಗಳ ಅತ್ಯುತ್ತಮ ಪ್ರದರ್ಶನ ಮತ್ತು ರುತುರಾಜ್ ಗಾಯಕ್ವಾಡ್ ಅವರ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ 9 ವಿಕೆಟ್ಗಳ ಭರ್ಜರಿ ಜಯದೊಂದಿಗೆ ಟೂರ್ನಿಯಿಂದ ಹೊರಹೋಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ದೀಪಕ್ ಹೂಡ(62) ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್ಗಳಿಸಿತ್ತು. 154 ರನ್ಗಳ ಗುರಿ ಪಡೆದ ಸಿಎಸ್ಕೆ 18.5 ಓವರ್ಗಳಲ್ಲಿ ತಲುಪುವ ಮೂಲಕ ಪಂಜಾಬ್ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಿದೆ.
-
#CSK end their #Dream11IPL 2020 campaign on a winning note.
— IndianPremierLeague (@IPL) November 1, 2020 " class="align-text-top noRightClick twitterSection" data="
Beat #KXIP by 9 wickets who are now out of the Playoffs race.#Dream11IPL pic.twitter.com/Pt512ByZat
">#CSK end their #Dream11IPL 2020 campaign on a winning note.
— IndianPremierLeague (@IPL) November 1, 2020
Beat #KXIP by 9 wickets who are now out of the Playoffs race.#Dream11IPL pic.twitter.com/Pt512ByZat#CSK end their #Dream11IPL 2020 campaign on a winning note.
— IndianPremierLeague (@IPL) November 1, 2020
Beat #KXIP by 9 wickets who are now out of the Playoffs race.#Dream11IPL pic.twitter.com/Pt512ByZat
ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಹಾಗೂ ಪ್ಲೆಸಿಸ್ ಮೊದಲ ವಿಕೆಟ್ಗೆ 82 ರನ್ಗಳ ಜೊತೆಯಾಟ ನೀಡಿದರು.
ಪ್ಲೆಸಿಸ್ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 48 ರನ್ಗಳಿಸಿ ಔಟಾದರು. ಆದರೆ ರಾಯುಡು ಜೊತೆ ಸೇರಿಕೊಂಡ ಯುವ ಬ್ಯಾಟ್ಸ್ಮನ್ ಗಾಯಕ್ವಾಡ್ 2ನೇ ವಿಕೆಟ್ಗೆ ಮುರಿಯದ 72 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ರಾಯಡು 30 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದರೆ, ಗಾಯಕ್ವಾಡ್ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 62 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಈ ಪಂದ್ಯದ ಸೋಲಿನೊಂದಿಗೆ ಪಂಜಾಬ್ ಟೂರ್ನಿಯಿಂದ ಹೊರಬಿದ್ದ 2ನೇ ತಂಡವಾಯಿತು. ಈ ಮೊದಲು ಸಿಎಸ್ಕೆ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತ್ತು.