ETV Bharat / sports

ರಸೆಲ್​ ಟಿ-20 ಕ್ರಿಕೆಟ್​ನ ಮೈಕಲ್​ ಜೋರ್ಡಾನ್​ ಇದ್ದಂತೆ: ಕೆಕೆಆರ್​ ಸಿಇಒ ವೆಂಕಿ ಮೈಸೂರು

author img

By

Published : Jul 28, 2020, 12:38 PM IST

ಮೈಕಲ್​ ಜೋರ್ಡಾನ್​ ಬಾಸ್ಕೆಟ್​ ಬಾಲ್​ ಜಗತ್ತಿನ ಅದ್ಭುತ ಪ್ರತಿಭೆ. ಎನ್​ಬಿಎನಲ್ಲಿ ಆರು ಬಾರಿ ಚಾಂಪಿಯನ್ ಆಗಿರುವ ಇವರು ಪ್ರಸ್ತುತ ವಿಶ್ವ ಕ್ರಿಕೆಟ್​ನ ಶ್ರೀಮಂತ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ. ಇವರು ಆಡುತ್ತಿದ್ದ ಕಾಲದಲ್ಲಿ ಇವರ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದರಿಂದ ವೆಂಕಿ ರಸೆಲ್​ರನ್ನು ಜೋರ್ಡಾನ್​ಗೆ ಹೋಲಿಸಿದ್ದಾರೆ.

Russell is the Michael Jordan
ಆ್ಯಂಡ್ರೆ ರಸೆಲ್​

ಕೋಲ್ಕತ್ತಾ: ವೆಸ್ಟ್​ ಇಂಡೀಸ್​ನ ದೈತ್ಯ ಆಲ್​ರೌಂಡರ್​ ಆ್ಯಂಡ್ರೆ ರಸೆಲ್​ ಟಿ-20 ಕ್ರಿಕೆಟ್​​ನ ಮೈಕಲ್​ ಜೋರ್ಡಾನ್​ ಇದ್ದಂತೆ ಎಂದು ಕೋಲ್ಕತ್ತಾ ನೈಟ್​ ರೈಡರ್ಸ್​ ಫ್ರಾಂಚೈಸಿ ಸಿಇಒ ವೆಂಕಿ ಮೈಸೂರು ಅಭಿಪ್ರಾಯಪಟ್ಟಿದ್ದಾರೆ.

ಮೈಕಲ್​ ಜೋರ್ಡಾನ್​ ಬಾಸ್ಕೆಟ್​ ಬಾಲ್​ ಜಗತ್ತಿನ ಅದ್ಭುತ ಪ್ರತಿಭೆ. ಎನ್​ಬಿಎನಲ್ಲಿ ಆರು ಬಾರಿ ಚಾಂಪಿಯನ್ ಆಗಿರುವ ಇವರು ಪ್ರಸ್ತುತ ವಿಶ್ವ ಕ್ರಿಕೆಟ್​ನ ಶ್ರೀಮಂತ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ. ಇವರು ಆಡುತ್ತಿದ್ದ ಕಾಲದಲ್ಲಿ ಇವರ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದರಿಂದ ವೆಂಕಿ ರಸೆಲ್​ರನ್ನು ಜೋರ್ಡಾನ್​ಗೆ ಹೋಲಿಸಿದ್ದಾರೆ.

ರಸೆಲ್​ 2019ರ ಆವೃತ್ತಿಯಲ್ಲಿ 4 ಅರ್ಧಶತಕದ ಸಹಿತ 510 ರನ್ ​ಗಳಿಸಿದ್ದರು. ಇವರು​ 204.81 ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿದ್ದರು. ಆದರೆ ತಂಡದ ಇತರೆ ಆಟಗಾರರ ಬೆಂಬಲದ ಕೊರತೆಯಿಂದ ಇವರ ತಂಡ ಪ್ಲೇ ಆಫ್​ ತಲುಪುದರಲ್ಲಿ ವಿಫಲವಾಗಿತ್ತು. ಬ್ಯಾಟಿಂಗ್​ ಹೊರತುಪಡಿಸಿ ರಸೆಲ್​ ಬೌಲಿಂಗ್​ನಲ್ಲೂ 11 ವಿಕೆಟ್​ ಪಡೆದಿದ್ದರು. ಕೆಕೆಆರ್​ ಲೀಗ್​ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

ವೆಂಕಿ ಮೈಸೂರು
ವೆಂಕಿ ಮೈಸೂರು

"ಆ್ಯಂಡ್ರೆ ರಸೆಲ್ ವಿಶ್ವದ ನಂಬರ್​ ಒನ್​ ಟಿ-20 ಆಟಗಾರನಾಗಿರುವುದು ನಮ್ಮ ಅದೃಷ್ಟ. ಅವರು ಬ್ಯಾಟ್ಸ್​ಮನ್​, ಬೌಲರ್,​ ಆಲ್​ರೌಂಡರ್​ ಎಂದು ನೀವು ಹೇಳಬಹುದು. ಆದರೆ ಅವರು ವಿಶ್ವದ ನಂಬರ್​ ಒನ್​ ಟಿ-20 ಆಟಗಾರ. ಅವರು ಟಿ-20 ಕ್ರಿಕೆಟ್​ನ ಮೈಕಲ್​ ಜೋರ್ಡಾನ್​. ಇದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ" ಎಂದು ವೆಂಕಿ ಮೈಸೂರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವೆಂಕಿ ಮೈಸೂರು ರಸೆಲ್​ ಜೊತೆಗೆ ಮತ್ತೊಬ್ಬ ವಿಂಡೀಸ್ ಆಟಗಾರ ಸುನಿಲ್ ನರೈನ್​ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನರೈನ್​ ಕೂಡ ಒಬ್ಬ ಆಲ್​ರೌಂಡರ್​ ಇದ್ದಹಾಗೆ. ಕಳೆದ ಕೆಲವು ಋತುಗಳಿಂದ ಅವರು ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕೆಕೆಆರ್​ ಈ ಬಾರಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​, ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್​ ಅವರನ್ನು ಖರೀದಿಸಿರುವುದು ಶಾರುಖ್​ ಪಡೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ವೆಂಕಿ ಮೈಸೂರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.