ETV Bharat / sports

ರಸೆಲ್ ದಾಳಿಗೆ ಮುಂಬೈ ತತ್ತರ... ಕೆಕೆಆರ್​ಗೆ 153 ರನ್​ಗಳ ಸಾಧಾರಣ ಗುರಿ ನೀಡಿದ ರೋಹಿತ್ ಪಡೆ

ಸೂರ್ಯ ಕುಮಾರ್ ಯಾದವ್​ ಅರ್ಧಶತಕ ಮತ್ತು ರೋಹಿತ್ ಶರ್ಮಾ ಅವರ 42 ರನ್​ಗಳ ಹೊರೆತಾಗಿಯೂ ಮುಂಬೈ ಇಂಡಿಯನ್ಸ್ ಎದುರಾಳಿ ಕೆಕೆಆರ್​ಗೆ 153 ರನ್​ಗಳ ಸಾಧಾರಣ ಗುರಿ ನೀಡಿದೆ.

ಕೆಕೆಆರ್​ಗೆ 153 ರನ್​ಗಳ ಸಾಧಾರಣ ಗುರಿ ನೀಡಿದ ರೋಹಿತ್ ಪಡೆ

author img

By

Published : Apr 13, 2021, 9:28 PM IST

Updated : Apr 13, 2021, 10:41 PM IST

ಚೆನ್ನೈ: ಕೆಕೆಆರ್​ ವೇಗಿಗಳ ದಾಳಿಗೆ ರನ್​ಗಳಿಸಲು ಪರದಾಡಿದ ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್ ತನ್ನ ಎರಡನೇ ಪಂದ್ಯದಲ್ಲಿ 152 ರನ್​ಗಳಿಗೆ ಆಲೌಟ್ ಆಗಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್​ ಆರಂಭದಲ್ಲೇ ಇಂದೇ ಮೊದಲ ಪಂದ್ಯವನ್ನಾಡಿದ ಡಿಕಾಕ್​(2) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.

ಆದರೆ 2ನೇ ವಿಕೆಟ್​ಗೆ ಒಂದಾದ ಸೂರ್ಯಕುಮಾರ್ ಯಾದವ್​ ಮತ್ತು ರೋಹಿತ್ ಶರ್ಮಾ 76 ರನ್​ಗಳ ಜೊತೆಯಾಟ ನೀಡಿದರು. ಸೂರ್ಯ 36 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 56 ರನ್​ಗಳಿಸಿ ಔಟಾದರು. ಇವರ ಬೆನ್ನಲ್ಲೇ ಇಶಾನ್ ಕಿಶನ್(1) ಮತ್ತು ರೋಹಿತ್ ಶರ್ಮಾ ಕೂಡ ವಿಕೆಟ್ ಒಪ್ಪಿಸಿದರು. ಅವರು 32 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 42 ರನ್​ಗಳಿಸಿ ತಂಡದ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ರೋಹಿತ್ ವಿಕೆಟ್ ನಂತರ ಮುಂಬೈ ಇಂಡಿಯನ್ಸ್​ ಪೆವಿಲಿಯನ್ ಪರೇಡ್ ನಡೆಸಿತು. ಹಾರ್ದಿಕ್ ಪಾಂಡ್ಯ(15) ಮತ್ತು ಕೀರನ್ ಪೊಲಾರ್ಡ್​(5) ಮತ್ತೊಮ್ಮೆ ವಿಫಲರಾದರು. ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಮತ್ತು ಬುಮ್ರಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ರಾಹುಲ್ ಚಹರ್ 8ರನ್​ಗಳಿಸಿ ರಸೆಲ್​ಗೆ 5ನೇ ಬಲಿಯಾದರು.

ಕೋಲ್ಕತ್ತಾ ಪರ ಆ್ಯಂಡ್ರೆ ರಸೆಲ್ 2 ಓವರ್​ಗಳಲ್ಲಿ 15 ರನ್​ ನೀಡಿ 5 ವಿಕೆಟ್​ ಪಡೆದರು. ಪ್ಯಾಟ್ ಕಮ್ಮಿನ್ಸ್ 24ಕ್ಕೆ 2, ಶಕಿಬ್ 23ಕ್ಕೆ 1,ಚಕ್ರವರ್ತಿ 27ಕ್ಕೆ1 ಮತ್ತು ಪ್ರಸಿಧ್ 42ಕ್ಕೆ 1 ವಿಕೆಟ್ ಪಡೆದು ಬಲಿಷ್ಠ ಮುಂಬೈ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.

Last Updated : Apr 13, 2021, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.