ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಕಿಂಗ್ಸ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಮುಂಬೈನ ವಾಖೆಂಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ರಾಹುಲ್ ನೇತೃತ್ವದ ಪಂಜಾಬ್ ಬ್ಯಾಟಿಂಗ್ ನಡೆಸುತ್ತಿದೆ.
ಪಂಜಾಬ್ ಕಿಂಗ್ಸ್ ಪರ ರಿಲೆ ಮೆರಿಡಿತ್, ಜೇ ರಿಚರ್ಡ್ಸನ್ ಮತ್ತು ಶಾರುಖ್ ಖಾನ್ ಪದಾರ್ಪಣೆ ಮಾಡಿದರೆ, ರಾಜಸ್ಥಾನ್ ರಾಯಲ್ಸ್ ಪರ ಮನನ್ ವೊಹ್ರಾ, ಮುಸ್ತಫಿಜುರ್ ರಹಮಾನ್, ಶಿವಂ ದುಬೆ, ಚೇತನ್ ಸಕಾರಿಯಾ ಪದಾರ್ಪಣೆ ಮಾಡಿದ್ದಾರೆ.
ಇಂದಿನ ಪಂದ್ಯದಲ್ಲಿ ಮನನ್ ವೊಹ್ರಾ ಇಂಗ್ಲೆಂಡ್ ಸ್ಟಾರ್ ಜೋಸ್ ಬಟ್ಲರ್ರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ವಿದೇಶಿ ಆಟಗಾರರಾಗಿ ಬಟ್ಲರ್ ಜೊತೆಗೆ ಬೆನ್ಸ್ಟೋಕ್ಸ್, ಕ್ರಿಸ್ ಮೋರಿಸ್ ಹಾಗೂ ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಅವಕಾಶ ಪಡೆದಿದ್ದಾರೆ.
-
.@rajasthanroyals Captain @IamSanjuSamson wins the toss and elects to bowl first against #PBKS.
— IndianPremierLeague (@IPL) April 12, 2021 " class="align-text-top noRightClick twitterSection" data="
Follow the game here - https://t.co/WNSqxT6ygL #RRvPBKS #VIVOIPL pic.twitter.com/YhjX2T9MKZ
">.@rajasthanroyals Captain @IamSanjuSamson wins the toss and elects to bowl first against #PBKS.
— IndianPremierLeague (@IPL) April 12, 2021
Follow the game here - https://t.co/WNSqxT6ygL #RRvPBKS #VIVOIPL pic.twitter.com/YhjX2T9MKZ.@rajasthanroyals Captain @IamSanjuSamson wins the toss and elects to bowl first against #PBKS.
— IndianPremierLeague (@IPL) April 12, 2021
Follow the game here - https://t.co/WNSqxT6ygL #RRvPBKS #VIVOIPL pic.twitter.com/YhjX2T9MKZ
ಪಂಜಾಬ್ ತಂಡದಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಲ್, ನಿಕೋಲಸ್ ಪೂರನ್ ಹಾಗೂ ಆಸ್ಟ್ರೇಲಿಯಾದ ವೇಗಿಗಳಾದ ಜೇ ರಿಚರ್ಡ್ಸನ್ ಮತ್ತು ರಿಲೆ ಮೆರಿಡಿಟ್ ವಿದೇಶಿ ಕೋಟಾದಲ್ಲಿ ಅವಕಾಶ ಪಡೆದಿದ್ದಾರೆ.
ಎರಡು ತಂಡಗಳು ಒಟ್ಟಾರೆ ಐಪಿಎಲ್ನಲ್ಲಿ 21 ಪಂದ್ಯಗಳನ್ನಾಡಿದ್ದು, 12ರಲ್ಲಿ ರಾಜಸ್ಥಾನ್, 9ರಲ್ಲಿ ಪಂಜಾಬ್ ಗೆಲುವು ಸಾಧಿಸಿದೆ.
ಪಂಜಾಬ್ ಕಿಂಗ್ಸ್ : ಕೆಎಲ್ ರಾಹುಲ್(ನಾಯಕ/ವಿಕೀ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರುಖ್ ಖಾನ್, ಜೇ ರಿಚರ್ಡ್ಸನ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್
ರಾಜಸ್ಥಾನ್ ರಾಯಲ್ಸ್ : ಜೋಸ್ ಬಟ್ಲರ್ (ವಿಕೀ), ಮನನ್ ವೊಹ್ರಾ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಶಿವಮ್ ದುಬೆ, ರಾಹುಲ್ ತೇವಟಿಯಾ, ಕ್ರಿಸ್ ಮೋರಿಸ್, ಶ್ರೇಯಾಸ್ ಗೋಪಾಲ್, ಚೇತನ್ ಸಕರಿಯಾ, ಮುಸ್ತಫಿಜುರ್ ರೆಹಮಾನ್