ಆಕ್ಲೆಂಡ್: ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾ ಬೆಸ್ಟ್ ಡೆತ್ ಓವರ್ ಬೌಲರ್ ಎಂದು ನ್ಯೂಜಿಲ್ಯಾಂಡ್‌ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಾಸ್ ಟೇಲರ್ ಹೇಳಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿದೆ. ತಮಗಿರುವ ಎಲ್ಲಾ ಅವಕಾಶಗಳನ್ನ ಬಳಸಿಕೊಂಡು 220 ರನ್ ಗಳಿಸಬೇಕೆಂದು ಕಿವೀಸ್ ಸಜ್ಜಾಗಿತ್ತು. ಆದರೆ ಅಂತಿಮ ಓವರ್‌ಗಳಲ್ಲಿ ಕಿವೀಸ್ ತಂಡಕ್ಕೆ ರನ್ ಗಳಿಸಲು ಬುಮ್ರಾ ಅವಕಾಶ ನೀಡಲಿಲ್ಲ. 203 ರನ್ಗಳಿಗೆ ಕಿವೀಸ್ ಆಟವನ್ನ ನಿಯಂತ್ರಿಸಲಾಯಿತು.
ಕಳೆದ ಹಲವು ದಿನಗಳಿಂದ ಬುಮ್ರಾ ಒಬ್ಬ ಕ್ಲಾಸ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅತ್ಯುತ್ತಮವಾಗಿ ದಾಳಿ ನಮಡೆಸಬಲ್ಲ ಶಕ್ತಿ ಬುಮ್ರಾಗಿದೆ. ಅವರ ಬೌಲಿಂಗ್ನಿಂದ ನಾವು ಕಲಿಯುವುದು ಸಾಕಷ್ಟಿದ್ದು, ಆದಷ್ಟು ಶೀಘ್ರದಲ್ಲೇ ತಿಳಿದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದ ಟೇಲರ್ ಅರ್ಧಶತಕ ಸಿಡಿಸಿದ್ರು.
ಮೊದಲ ಟಿ-20 ಪಂದ್ಯದಲ್ಲಿ ಅಬ್ಬರಿಸಿದ್ದ ಕಿವೀಸ್ ಆಟಗಾರರು, 20 ಓವರ್‌ಗಳಲ್ಲಿ 203 ರನ್ ಗಳಿಸಿ ಭಾರತಕ್ಕೆ ಬೃಹತ್ ಗುರಿ ನೀಡಿದ್ರು. ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಬಿರುಸಿನ ಆಟದ ನೆರವಿನಿಂದ ಟೀಂ ಇಂಡಿಯಾ ಇನ್ನು ಒಂದು ಓವರ್ ಬಾಕಿ ಇರುವಂತೆ ಜಯ ಸಾಧಿಸಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.