ಲಂಡನ್: ವಿಶ್ವಕಪ್ನಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಆಕರ್ಷಕ ಶತಕ ದಾಖಲಿಸಿದ ಭಾರತ ರೋಹಿತ್ ಶರ್ಮಾ ವೃತ್ತಿ ಜೀವನ 25 ನೇ ಶತಕ ದಾಖಲಿಸಿದರು.
ಹಿಟ್ ಮ್ಯಾನ್ ಎಂದೇ ಖ್ಯಾತರಾದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 25ನೇ ಶತಕ ದಾಖಲಿಸುವ ಮೂಲಕ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ರನ್ನು ಹಿಂದಿಕ್ಕಿ, ಆ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು.
ಇಂದು ವೃತ್ತಿ ಜೀವನದ 206ನೇ ಇನ್ನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ ರೋಹಿತ್ 15 ನೇ ಶತಕ ಪೂರೈಸಿದರು. ಈ ಮೂಲಕ 234 ಇನ್ನಿಂಗ್ಸ್ಗಳಲ್ಲಿ 25 ಶತಕ ಸಿಡಿಸಿದ್ದ ಎಬಿಡಿ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ 3 ನೇ ಬ್ಯಾಟ್ಸ್ಮನ್ ಎನಿಸಿದರು.
ಇನ್ನು 151 ಇನ್ನಿಂಗ್ಸ್ ಗಳಲ್ಲಿ 25 ಶತಕ ಸಿಡಿಸಿರುವ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್ ಮನ್ ಹಾಶಿಮ್ ಆಮ್ಲಾ ಮೊದಲ ಸ್ಥಾನದಲ್ಲಿದ್ದರೆ, 162 ಇನ್ನಿಂಗ್ಸ್ ಗಳಲ್ಲಿ 25 ಶತಕ ಸಿಡಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 25 ಶತಕಗಳಿಗೆ 206 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.
ವೇಗವಾಗಿ 25 ಶತಗಳಿಸಿದ ಟಾಪ್ 5 ಬ್ಯಾಟ್ಸಮನ್ಸ್:
151 ಇನ್ನಿಂಗ್ಸ್- ಹಾಶೀಮ್ ಆಮ್ಲಾ
162 ಇನ್ನಿಂಗ್ಸ್- ವಿರಾಟ್ ಕೊಹ್ಲಿ
206 ಇನ್ನಿಂಗ್ಸ್-ರೋಹಿತ್ ಶರ್ಮಾ
214 ಇನ್ನಿಂಗ್ಸ್ - ಎಬಿಡಿ ವಿಲಿಯರ್ಸ್
234 ಇನ್ನಿಂಗ್ಸ್- ಸಚಿನ್ ತೆಂಡೂಲ್ಕರ್