ETV Bharat / sports

ಆರಂಭಿಕನಾದ ಮೊದಲ ಪಂದ್ಯದಲ್ಲೇ ಹಲವು ದಾಖಲೆ ಬರೆದು ವಿಕೆಟ್​ ಒಪ್ಪಿಸಿದ ರೋಹಿತ್​ ಶರ್ಮಾ - ರೋಹಿತ್​-ಮಯಾಂಕ್​ ಅಗರ್​ವಾಲ್​

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಆಕರ್ಷಕ ಶತಕ ಸಿಡಿಸಿದ ರೋಹಿತ್​ ಶರ್ಮಾ ಹಲವಾರು ದಾಖಲೆಗಳಿಗೆ ಪಾತ್ರರಾಗಿದ್ದಾರೆ.

ರೋಹಿತ್​
author img

By

Published : Oct 3, 2019, 12:08 PM IST

ವಿಶಾಖಪಟ್ಟಣ: ದಕ್ಷಿಣ ಅಫ್ರಿಕಾ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ರೋಹಿತ್​ ಶರ್ಮಾ 176 ರನ್​ಗಳಿಗೆ ವಿಕೆಟ್​ ಒಪ್ಪಿಸುವ ಮೂಲಕ ನಿರಾಶೆ ಅನುಭವಿಸಿದ್ದಾರೆ.

ಬುಧವಾರ 115 ರನ್ ​ಗಳಿಸಿದ್ದ ರೋಹಿತ್​ ಇಂದು ಕೂಡ ತಮ್ಮ ಆರ್ಭಟ ಮುಂದುವರಿಸಿದ್ದರು. 224ನೇ ಎಸೆತದಲ್ಲಿ 150 ರನ್​ ಪೂರ್ತಿಗೊಳಿಸಿದರು. ಒಟ್ಟಾರೆ 244 ಎಸೆತಗಳಲ್ಲಿ 23 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್​ ಸಿಡಿಸಿ ರೋಹಿತ್​ ಔಟಾದರು. ಕೇಶವ್​ ಮಹಾರಾಜ್​ ಬೌಲಿಂಗ್​ನಲ್ಲಿ ಸಿಕ್ಸರ್​ ಹಾಗೂ ಬೌಂಡರಿ ಸಿಡಿಸಿದ ರೋಹಿತ್​ ನಂತರದ ಎಸೆತದಲ್ಲಿ ಬೌಲ್ಡ್​ ಆದರು.

Rohit Sharma
ರೋಹಿತ್​ ಶರ್ಮಾ- ಮಯಾಂಕ್​ ಅಗರ್​ವಾಲ್​

ರೋಹಿತ್​ ದಾಖಲೆಗಳು: ಆರಂಭಿಕನಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ರೋಹಿತ್​ ಶರ್ಮಾ ಮಯಾಂಕ್​ ಜೊತೆಗೂಡಿ ಹಲವು ದಾಖಲೆಗಳಿಗೆ ಪಾತ್ರರಾದರು.

  • ಟೆಸ್ಟ್​ ಕ್ರಿಕೆಟ್​ನಲ್ಲಿ ಒಂದೇ ಇನ್ನಿಂಗ್ಸ್​ನಲ್ಲಿ ಹೆಚ್ಚು ಸಿಕ್ಸರ್​ ಸಿಡಿಸಿದ ಮೂರನೇ ಭಾರತೀಯ
  • ರೋಹಿತ್​-ಮಯಾಂಕ್​ ಜೋಡಿಯಿಂದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೊದಲ ವಿಕೆಟ್​ಗೆ ಅತಿ ಹೆಚ್ಚು ರನ್​ಗಳ​ ಜೊತೆಯಾಟ(317).
  • ಮೊದಲ ವಿಕೆಟ್​ ಜೊತೆಯಾಟದಲ್ಲಿ ಹೆಚ್ಚು ರನ್​ ಗಳಿಸಿದ 3ನೇ ಜೋಡಿ ಎಂಬ ದಾಖಲೆ. ಪಂಕಜ್​ ರಾಯ್​-ವೀನೂ ಮಂಕಡ್​(413), ಸೆಹ್ವಾಗ್​-ದ್ರಾವಿಡ್​(419) ಮೊದಲೆರಡು ಸ್ಥಾನದಲ್ಲಿದ್ದಾರೆ.
  • ಅತಿಹೆಚ್ಚು ಸಿಕ್ಸರ್ ಸಿಡಿಸಿದ ಭಾರತದ​ ಆರಂಭಿಕ ಜೋಡಿ ರೋಹಿತ್​(6) ಮಯಾಂಕ್​(3)
  • ಮೊದಲ ಬಾರಿಗೆ ಆರಂಭಿಕ ಜೋಡಿಯಾಗಿ ಅತಿ ಹೆಚ್ಚು ರನ್​ ಗಳಿಸಿ 2ನೇ ಭಾರತೀಯ ಜೋಡಿ(317), ಮೊದಲ ಸ್ಥಾನದಲ್ಲಿ ಸೆಹ್ವಾಗ್​-ದ್ರಾವಿಡ್(410)​ ಇದ್ದಾರೆ.
  • ದ. ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಂತರ ಭಾರತ ತಂಡದ ಆರಂಭಿಕರಿಬ್ಬರಿಂದಲೂ ಶತಕ ದಾಖಲು​
  • ರೋಹಿತ್​ (176) ಆರಂಭಿಕನಾಗಿ ಪಾದಾರ್ಪಣೆ ಮಾಡಿದ ಹೆಚ್ಚು ರನ್ ​ಗಳಿಸಿದ 2ನೇ ಭಾರತೀಯ ಹಾಗೂ ವಿಶ್ವದ ನಾಲ್ಕನೇ ಬ್ಯಾಟ್ಸ್​ಮನ್​. ಧವನ್​ (187) ಮೊದಲ ಸ್ಥಾನದಲ್ಲಿದ್ದಾರೆ.
  • ಭಾರತ ತಂಡದ ಆರಂಭಿಕನಾಗಿ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ ಶತಕ ಗಳಿಸಿದ ಮೊದಲ ಬ್ಯಾಟ್ಸ್​ಮನ್​

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.