ಮುಂಬೈ: ರೋಹಿತ್ ಹಾಗೂ ಕೊಹ್ಲಿ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಬ್ಬರ ನಡುವೆ ಮೇಲುನೋಟಕ್ಕೆ ಎಲ್ಲ ಸರಿಯಿದೆ ಎಂದು ಕಂಡುಬಂದರೂ ಒಳಗೆ ಬೂದಿ ಮುಚ್ಚಿದ ಕೆಂಡದಂತಾಗಿದೆ.
ವಿಂಡೀಸ್ ಪ್ರವಾಸಕ್ಕೆ ಮುನ್ನ ಮಾಧ್ಯಮ ಗೋಷ್ಠಿ ನಡೆಸಿದ್ದ ಕೊಹ್ಲಿ, ರೋಹಿತ್ ಹಾಗೂ ತಮ್ಮ ನಡುವೆ ಭಿನ್ನಾಬಿಪ್ರಾಯವಿದೆ ಎನ್ನುವ ಸುದ್ದಿಯೇ ಹಾಸ್ಯಸ್ಪದ ಎಂದು ವರದಿಗಳ ಬಗ್ಗೆ ಕಿಡಿಕಾಡಿದ್ದರು. ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲರೂ ಒಂದೇ, ಹಿರಿಯ ಕಿರಿಯ ಎನ್ನದೇ ಎಲ್ಲರಿಗೂ ಒಂದೇ ಸಮನಾದ ಗೌರವ, ಪ್ರಾಶಸ್ತ್ಯ ಇದೆ ಎಂದು ತಿಳಿಸಿದ್ದರು.
ಇದೇ ಗೋಷ್ಠಿಯಲ್ಲಿ ಮಾತನಾಡಿದ್ದ ಕೋಚ್ ರವಿಶಾಸ್ತ್ರಿ , ಪ್ರತಿಯೊಬ್ಬ ಆಟಗಾರನೂ ತಂಡಕ್ಕೋಸ್ಕರ ಆಡಬೇಕಿದೆ. ತಂಡಕ್ಕಿಂತ ದೊಡ್ಡವರಿಲ್ಲ ಎಂದು ತಿಳಿಸಿದ್ದರು.
-
I don’t just walk out for my Team. I walk out for my country. pic.twitter.com/S4RFkC0pSk
— Rohit Sharma (@ImRo45) July 31, 2019 " class="align-text-top noRightClick twitterSection" data="
">I don’t just walk out for my Team. I walk out for my country. pic.twitter.com/S4RFkC0pSk
— Rohit Sharma (@ImRo45) July 31, 2019I don’t just walk out for my Team. I walk out for my country. pic.twitter.com/S4RFkC0pSk
— Rohit Sharma (@ImRo45) July 31, 2019
ಇದೀಗ ರೋಹಿತ್ ಶರ್ಮ ವಿಂಡೀಸ್ ಪ್ರವಾಸದಲ್ಲಿದ್ದು, ತಮ್ಮ ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ನಲ್ಲಿ ಡ್ರೆಸ್ಸಿಂಗ್ ರೂಮ್ನಿಂದ ಬ್ಯಾಟ್ ಹಿಡಿದು ಹೊರಬರುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ " ನಾನು ಹೊರ ಬರುವುದು ತಂಡಕ್ಕಾಗಿ ಮಾತ್ರವಲ್ಲ, ನಾನು ಹೊರ ಬರುವುದು ದೇಶಕ್ಕಾಗಿ" ಎಂದು ಟ್ವೀಟ್ ಮಾಡಿದ್ದಾರೆ.
ಒಟ್ಟಾರೆ ಕೊಹ್ಲಿ ಈಗಾಗಲೇ ತಮ್ಮ ನಡುವೆ ಏನೂ ಇಲ್ಲ ಎಂದು ತಿಳಿಸಿದ್ದರೂ, ರೋಹಿತ್ ಟ್ವೀಟ್ನಿಂದ ಇನ್ನೂ ಮನಸ್ತಾಪ ಇರಬೇಕು ಎನ್ನುವ ಅರ್ಥದಲ್ಲಿ ರೋಹಿತ್ ಟ್ವೀಟ್ ಹೇಳಿದಂತಿದೆ ಎಂಬ ವಿಶ್ಲೇಷಣೆಗಳು ಜೋರಾಗಿ ನಡೆಯುತ್ತಿವೆ.