ದುಬೈ: ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸದ್ಯ ದುಬೈನಲ್ಲಿದ್ದು, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗಲು ಸಜ್ಜಾಗುತ್ತಿದ್ದಾರೆ. ಇದರ ಮಧ್ಯೆ ಪತ್ನಿ ರಿತಿಕಾ ಜತೆ ವರ್ಕೌಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ.
-
Stronger together 💙 pic.twitter.com/fMlGiRWoHG
— Rohit Sharma (@ImRo45) August 25, 2020 " class="align-text-top noRightClick twitterSection" data="
">Stronger together 💙 pic.twitter.com/fMlGiRWoHG
— Rohit Sharma (@ImRo45) August 25, 2020Stronger together 💙 pic.twitter.com/fMlGiRWoHG
— Rohit Sharma (@ImRo45) August 25, 2020
ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲು ಎದುರಿಸುವ ಸಾಧ್ಯತೆ ಇದೆ. ಇದೀಗ ಸಾಮಾಜಿಕ ಅಂತರ ಕಡ್ಡಾಯವಾಗಿರುವ ಕಾರಣ ತಮಗೆ ನೀಡಿರುವ ಹೋಟೆಲ್ ರೂಂ ವೊಂದರಲ್ಲಿ ವರ್ಕೌಟ್ ನಡೆಸಿದ್ದಾರೆ.
ವಿಡಿಯೋ ಶೇರ್ ಮಾಡಿರುವ ರೋಹಿತ್ ಶರ್ಮಾ ಸ್ಟ್ರಾಂಗರ್ ಟುಗೆದರ್ ಎಂದ ಶಿರ್ಷಿಕೆ ನೀಡಿದ್ದಾರೆ. ಪತ್ನಿ ರಿತಿಕಾ ಹಾಗೂ ಮಗಳು ಸಮೀರಾ ಜತೆ ರೋಹಿತ್ ಅಬುದಾಭಿಯಲ್ಲಿದ್ದಾರೆ.
ಇಲ್ಲಿಯವರೆಗೆ 188 ಐಪಿಎಲ್ ಪಂದ್ಯಗಳನ್ನಾಡಿರುವ ಹಿಟ್ಮ್ಯಾನ್ 130ರ ಸರಾಸರಿಯಲ್ಲಿ 4,898 ರನ್ಗಳಿಕೆ ಮಾಡಿದ್ದಾರೆ. ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದ್ದು, ನವೆಂಬರ್ 10ರಂದು ಮುಕ್ತಾಯವಾಗಲಿದೆ.