ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕೋಚ್ ಟಾಮ್ ಮೂಡಿ ತಮ್ಮ ನೆಚ್ಚಿನ, ಪ್ರಸ್ತುತ ಆಟವಾಡುತ್ತಿರುವ ವಿಶ್ವ ಟಿ-20 ಆಟಗಾರರ ತಂಡ ಆಯ್ಕೆ ಮಾಡಿದ್ದಾರೆ. 12 ಸದಸ್ಯರ ತಂಡದಲ್ಲಿ ಮೂವರು ಭಾರತೀಯರಿದ್ದಾರೆ.
ಮೂಡಿ ಆಯ್ಕೆಯ ಟೀಂನಲ್ಲಿ 12 ಮಂದಿ ಆಟಗಾರರಿದ್ದು, ಭಾರತೀಯ ಆಟಗಾರನಿಗೆ ನಾಯಕತ್ವ ಪಟ್ಟ ನೀಡಿದ್ದಾರೆ. ಅದು ಪ್ರಸ್ತುತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಲ್ಲ, ಬದಲಿಗೆ ಐಪಿಎಲ್ನಲ್ಲಿ 4 ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೋಫಿ ಗೆದ್ದು ಯಶಸ್ಸು ಸಾಧಿಸಿರುವ ರೋಹಿತ್ ಶರ್ಮಾರತ್ತ ಟಾಮ್ ಮೂಡಿ ಒಲವು ತೋರಿದ್ದಾರೆ.
ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲೊಬ್ಬರಾದ ಎಂ.ಎಸ್.ಧೋನಿಗೆ ಮೂಡಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಧೋನಿ ಬದಲು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ವಿಂಡೀಸ್ನ ಯುವ ಆಟಗಾರ ನಿಕೋಲಸ್ ಪೂರನ್ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ 12 ಸದಸ್ಯರ ತಂಡದಲ್ಲಿದ್ದಾರೆ.
ಟಾಮ್ ಮೂಡಿ ಪ್ರಕಟಿಸಿರುವ ಟಿ-20 ತಂಡ ಇಂತಿದೆ: ರೋಹಿತ್ ಶರ್ಮಾ(ನಾಯಕ), ಡೆವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿಡಿ ವಿಲ್ಲಿಯರ್ಸ್, ನಿಕೋಲಸ್ ಪೂರನ್, ಅಂಡ್ರೆ ರಸೆಲ್, ಸುನಿಲ್ ನರೇನ್, ಮಿಚೆಲ್ ಸ್ಟಾರ್ಕ್, ರಶಿದ್ ಖಾನ್, ಜಸ್ಪ್ರಿತ್ ಬುಮ್ರಾ, ಜೊಪ್ರಾ ಆರ್ಚರ್ ಹಾಗೂ ರವೀಂದ್ರ ಜಡೆಜಾ (12ನೇ ಆಟಗಾರ)