ETV Bharat / sports

ಖೇಲ್​ ರತ್ನ ಪ್ರಶಸ್ತಿಯ ಖುಷಿ.. ಮತ್ತಷ್ಟು ಸಾಧನೆಯ ಭರವಸೆ ನೀಡಿದ ರೋಹಿತ್ ಶರ್ಮಾ ​! - ಇಂಡಿಯನ್​ ಪ್ರೀಮಿಯರ್​ ಲೀಗ್​

ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿರುವ ರೋಹಿತ್​ ಶರ್ಮಾ ಹಾಗೂ ಅರ್ಜುನ ಅವಾರ್ಡ್​ ವಿಜೇತ ಇಶಾಂತ್​ ಶರ್ಮಾಗೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅಭಿನಂದನೆ ಸಲ್ಲಿಸಿ ಟ್ವೀಟ್​ ಮಾಡಿದ್ದು, ಬಿಸಿಸಿಐ ಕೂಡ ಶುಭ ಹಾರೈಸಿದೆ.

Rohit Sharma
Rohit Sharma
author img

By

Published : Aug 22, 2020, 8:53 PM IST

ದುಬೈ: ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್​ ಶರ್ಮಾ ರಾಜೀವ್ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಗೆ ಸಿಕ್ಕಿರುವ ಗೌರವದ ಬಗ್ಗೆ ಅಭಿಮಾನಿಗಳಿಗೆ ಹಿಟ್​ಮ್ಯಾನ್​​ ಧನ್ಯವಾದ ಅರ್ಪಿಸಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಭಾಗಿಯಾಗಲು ಸದ್ಯ ದುಬೈನಲ್ಲಿರುವ ರೋಹಿತ್​ ಶರ್ಮಾ ಅಲ್ಲಿಂದಲೇ ವಿಡಿಯೋ ಹರಿಬಿಟ್ಟಿದ್ದಾರೆ. ನಿಮ್ಮ ಶುಭಾಶಯ ಹಾಗೂ ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. ಇದು ಅದ್ಭುತ ಜರ್ನಿಯಾಗಿದೆ ಎಂದು ಟ್ವಿಟರ್​ನಲ್ಲಿ ವಿಡಿಯೋ ಸಂದೇಶ ರವಾನಿಸಿದ್ದಾರೆ. ಭಾರತದಲ್ಲಿ ಇಂತಹ ಉನ್ನತ ಕ್ರೀಡಾ ಗೌರವ ಪಡೆದುಕೊಳ್ಳುವುದು ಒಂದು ದೊಡ್ಡ ಸವಾಲು. ಅದರ ಬಗ್ಗೆ ನನಗೆ ಸಂತೋಷವಿದೆ. ನಿಮ್ಮೆಲ್ಲರಿಗೂ ನಾನು ಋಣಿ. ನಿಮ್ಮ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಯಾವಾಗಲೂ ನಿಮ್ಮ ಬೆಂಬಲ ಹೀಗೇ ಇರಲಿ ಎಂದಿರುವ ರೋಹಿತ್​​ ಶರ್ಮಾ, ದೇಶಕ್ಕಾಗಿ ಮತ್ತಷ್ಟು ಪ್ರಶಸ್ತಿ ತಂದುಕೊಡುವ ಭರವಸೆ ನೀಡಿದ್ದಾರೆ.

ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿರುವ ರೋಹಿತ್​ ಶರ್ಮಾ ಹಾಗೂ ಅರ್ಜುನ್​ ಅವಾರ್ಡ್​ ವಿಜೇತ ಇಶಾಂತ್​ ಶರ್ಮಾಗೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅಭಿನಂದನೆ ಸಲ್ಲಿಸಿ ಟ್ವೀಟ್​ ಮಾಡಿದ್ದು, ಬಿಸಿಸಿಐ ಕೂಡ ಶುಭ ಹಾರೈಸಿದೆ.

  • Congratulations @ImIshant and @ImRo45 for your respective Arjuna and Khel Ratna Awards 👏 and to @Deepti_Sharma06 for her Arjuna Award as well. 💪 Big congratulations to all the other winners across different sports. Proud moment to remember for each sportsperson.

    — Virat Kohli (@imVkohli) August 22, 2020 " class="align-text-top noRightClick twitterSection" data=" ">

ಈಗಾಗಲೇ ಟೀಂ ಇಂಡಿಯಾದ ಸಚಿನ್​ ತೆಂಡೂಲ್ಕರ್​, ಮಹೇಂದ್ರ ಸಿಂಗ್​ ಧೋನಿ ಹಾಗೂ ವಿರಾಟ್​​ ಕೊಹ್ಲಿಗೆ ರಾಜೀವ್​ ಗಾಂಧಿ ಖೇಲ್​ ರತ್ನ ಅವಾರ್ಡ್​ ನೀಡಲಾಗಿದ್ದು, ಈ ಪ್ರಶಸ್ತಿ ಪಡೆದುಕೊಂಡಿರುವ ನಾಲ್ಕನೇ ಕ್ರಿಕೆಟಿಗ ಎಂಬ ಗೌರವಕ್ಕೆ ರೋಹಿತ್​ ಪಾತ್ರರಾಗಿದ್ದಾರೆ.

2019ರಲ್ಲಿ ರೋಹಿತ್​​ ಶರ್ಮಾ ಐಸಿಸಿ ಏಕದಿನ ಕ್ರಿಕೆಟರ್​​ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಇದೇ ವರ್ಷ ನಡೆದ ಏಕದಿನ ವಿಶ್ವಕಪ್​ನಲ್ಲಿ 5 ಸೆಂಚುರಿ ಸಿಡಿಸಿ ದಾಖಲೆ ನಿರ್ಮಾಣ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.