ETV Bharat / sports

2017ರಲ್ಲಿ ದ್ವಿಶತಕ ಸಿಡಿಸಿದ ವೇಳೆ ರಿತಿಕಾ ಭಾವುಕ: ಕಾರಣ ಹೊರಹಾಕಿದ ಹಿಟ್​ಮ್ಯಾನ್​!

2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್​ ಶರ್ಮಾ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದರು. ಈ ವೇಳೆ ಹಿಟ್​ಮ್ಯಾನ್ ಪತ್ನಿ ರಿತಿಕಾ ಕಣ್ಣೀರು ಹಾಕಿದರು. ಅದರ ಬಗ್ಗೆ ಇದೀಗ ರೋಹಿತ್​​ ಮಾತನಾಡಿದ್ದಾರೆ.

Rohit Sharma wife
Rohit Sharma wife
author img

By

Published : Jun 7, 2020, 5:45 AM IST

ನವದೆಹಲಿ: ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸ್​​ಮನ್​ ರೋಹಿತ್​ ಶರ್ಮಾ 2017ರಲ್ಲಿ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದರು. ಈ ವೇಳೆ ಹಿಟ್​ಮ್ಯಾನ್​ ಪತ್ನಿ ರಿತಿಕಾ ಭಾವುಕರಾಗಿ ಕಣ್ಣೀರು ಸುರಿಸಿದ್ದ ಘಟನೆ ನಡೆದಿತ್ತು.

ಆ ದಿನ ತಮ್ಮ ಪತ್ನಿ ಯಾವ ಕಾರಣಕ್ಕಾಗಿ ಭಾವುಕರಾಗಿದ್ದರು ಎಂಬುದರ ಕುರಿತು ಮಾಹಿತಿ ಹಿಂಚಿಕೊಂಡಿರುವ ಹಿಟ್​ಮ್ಯಾನ್​, 'ಓಪನ್​ ನೆಟ್ಸ್​ ವಿಥ್​ ಮಯಾಂಕ್​' ಎಂಬ ಎಪಿಸೋಡ್​​ನಲ್ಲಿ ಮಯಾಂಕ್​, ಶಿಖರ್ ಧವನ್​​ ಜತೆ ಮಾತನಾಡಿದ್ದಾರೆ.Rohit Sharma

ರೋಹಿತ್​ ಶರ್ಮಾ

ನಾನು 195ರನ್​ಗಳಿಕೆ ಮಾಡಿದ್ದ ವೇಳೆ ಸಿಂಗಲ್​ ರನ್​ ಗಳಿಕೆ ಮಾಡಲು ಹೋಗಿ ಕೆಳಗೆ ಬಿದ್ದೆ. ಈ ವೇಳೆ ನನ್ನ ಕೈಗೆ ನೋವಾಗಿತ್ತು. ಅದೇ ಕಾರಣಕ್ಕಾಗಿ ಆಕೆ ಭಾವುಕಳಾಗಿದ್ದಳು ಎಂದಿರುವ ಅವರು, ಅದು ನಮ್ಮ ಮದುವೆ ವಾರ್ಷಿಕೋತ್ಸವ ಕೂಡ ಆಗಿತ್ತು ಎಂದಿದ್ದಾರೆ. ಅಂದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ 153 ಎಸೆತಗಳಲ್ಲಿ 208 ರನ್​ಗಳಿಕೆ ಮಾಡಿದ್ದರು. ರೋಹಿತ್​ ಶರ್ಮಾ ಪತ್ನಿ ಕಣ್ಣೀರು ಸುರಿಸಿದ್ದ ವಿಡಿಯೋ ಎಲ್ಲಡೆ ವೈರಲ್​ ಆಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.