ಮುಂಬೈ: ಭಾರತದ ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಪತ್ನಿ ರಿತಿಕಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ವಿಶೇಷ ಸಂದೇಶ ಕಳುಹಿಸುವ ಮೂಲಕ ಶುಭ ಕೋರಿದ್ದಾರೆ.
-
Many many happy returns my love, strength and game changer 😁 Samaira and I are proud to have such a leading light in our lives ❤️🥰🎂@ritssajdeh pic.twitter.com/yMKNB7sba2
— Rohit Sharma (@ImRo45) December 20, 2019 " class="align-text-top noRightClick twitterSection" data="
">Many many happy returns my love, strength and game changer 😁 Samaira and I are proud to have such a leading light in our lives ❤️🥰🎂@ritssajdeh pic.twitter.com/yMKNB7sba2
— Rohit Sharma (@ImRo45) December 20, 2019Many many happy returns my love, strength and game changer 😁 Samaira and I are proud to have such a leading light in our lives ❤️🥰🎂@ritssajdeh pic.twitter.com/yMKNB7sba2
— Rohit Sharma (@ImRo45) December 20, 2019
ನನ್ನ ಪ್ರೀತಿ, ಶಕ್ತಿ ಹಾಗು ಜೀವನವನ್ನೇ ಬದಲಿಸಿದ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಮ್ಮ ಜೀವನಕ್ಕೆ ಬೆಳಕಾಗಿ ಬಂದ ನಿನ್ನ ಬಗ್ಗೆ ಸಮೈರಾ ಹಾಗೂ ನಾನು ಹೆಮ್ಮೆ ಪಡುತ್ತೇವೆ ಎಂದು ಇನ್ಸ್ಟಾಗ್ರಾಂನಲ್ಲಿ ರೋಹಿತ್ ಶರ್ಮಾ ಬರೆದುಕೊಂಡಿದ್ದಾರೆ. 2015ರ ಡಿಸೆಂಬರ್ 13ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗೆ ಮುದ್ದಾದ ಹೆಣ್ಣು ಮಗುವಿದೆ.
ವೆಸ್ಟ್ ಇಂಡೀಸ್ ವಿರುದ್ಧ ನಾಳೆ ಕಟಕ್ನಲ್ಲಿ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿರುವ ಕಾರಣ ರೋಹಿತ್ ಶರ್ಮಾ ತನ್ನ ಅರ್ಧಾಂಗಿಯಿಂದ ದೂರ ಉಳಿದುಕೊಂಡಿದ್ದಾರೆ. ಈ ಹಿಂದೆಯೂ ಸಹ ಆಕೆ ನನ್ನ ಪಾಲಿಗೆ ಪತ್ನಿ, ಸ್ನೇಹಿತೆ, ಮ್ಯಾನೇಜರ್ ಹಾಗೂ ಎಲ್ಲವೂ ಆಗಿದ್ದಳು. ಆಕೆ ನನ್ನ ಜೊತೆ ಇರುವುದರಿಂದಲೇ ಮೈದಾನದಲ್ಲಿ ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ಕ್ರಿಕೆಟ್ ಆಡಲು ಸಾಧ್ಯವಾಗುತ್ತಿದೆ ಎಂದು ಹೇಳಿಕೊಂಡಿದ್ದರು.