ನವದೆಹಲಿ: ಭಾರತೀಯ ಕ್ರೀಡಾಲೋಕದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಕ್ರಿಕೆಟಿಗ ರೋಹಿತ್ ಶರ್ಮಾರ ಹೆಸರನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಿತಿ ಶಿಫಾರಸು ಮಾಡಿದೆ.
ಕ್ರೀಡಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಗುರತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ 5 ಶತಕ ಬಾರಿಸಿದ್ದ ರೋಹಿತ್ ಶರ್ಮಾ ಸೇರಿದಂತೆ, ಕುಸ್ತಿಪಟು ವಿನೇಶ್ ಪೋಗಟ್, ಟೇಬಲ್ ಟೆನ್ನಿಸ್ ಆಟಗಾರ್ತಿ ಮಾನಿಕ ಬಾತ್ರಾ ಹಾಗೂ 2016ರ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಅವರ ಹೆಸರನ್ನು ಸಮಿತಿ ಕ್ರೇಂದ್ರ ಸಚಿವಾಲಯಕ್ಕೆ ಶಿಪಾರಸ್ಸು ಮಾಡಿದೆ.
-
National Sports Awards Committee recommends cricketer Rohit Sharma, wrestler Vinesh Phogat, table tennis champion Manika Batra & Paralympian Mariappan Thangavelu for the Rajiv Gandhi Khel Ratna Award
— ANI (@ANI) August 18, 2020 " class="align-text-top noRightClick twitterSection" data="
">National Sports Awards Committee recommends cricketer Rohit Sharma, wrestler Vinesh Phogat, table tennis champion Manika Batra & Paralympian Mariappan Thangavelu for the Rajiv Gandhi Khel Ratna Award
— ANI (@ANI) August 18, 2020National Sports Awards Committee recommends cricketer Rohit Sharma, wrestler Vinesh Phogat, table tennis champion Manika Batra & Paralympian Mariappan Thangavelu for the Rajiv Gandhi Khel Ratna Award
— ANI (@ANI) August 18, 2020
ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಮತ್ತು ಇತರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಆಯ್ಕೆ ಸಮಿತಿ ಮಂಗಳವಾರ ಸಭೆ ಸೇರಿತ್ತು. ಇದೀಗ ನಾಲ್ವರ ಹೆಸರನ್ನು ಸಮಿತಿ ಶಿಫಾರಸು ಮಾಡಿದ್ದು, ಇದನ್ನು ಕ್ರೀಡಾ ಸಚಿವರ ಅನುಮೋದನೆಗೆ ಒಳಪಡಿಸಲಾಗುತ್ತದೆ. ಸಚಿವರು ಅಂಗೀಕರಿಸಿದ ನಂತರ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ.
ರೋಹಿತ್ ಶರ್ಮಾ ಅವರಿಗೆ ಪ್ರಶಸ್ತಿ ಬಂದರೆ, ಈ ಪುರಸ್ಕಾರಕ್ಕೆ ಪಾತ್ರರಾದ ನಾಲ್ಕನೇ ಕ್ರಿಕೆಟಿಗರಾಗುತ್ತಾರೆ. ಅವರಿಗೂ ಮೊದಲು ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಖೇಲ್ ರತ್ನವನ್ನು ಸ್ವೀಕರಿಸಿದ್ದಾರೆ.