ವಿಶಾಖಪಟ್ಟಣ: ಭಾರತದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಸತತ 7ನೇ ವರ್ಷ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಶ್ರೇಯಕ್ಕೆ ಪಾತ್ರಾಗಿದ್ದಾರೆ.
ವಿಂಡೀಸ್ ವಿರುದ್ಧ ಅಬ್ಬರದ ಶತಕಗಳಿಸಿರುವ ರೋಹಿತ್ 159 ರನ್ಗಳಿಸುತ್ತಿದ್ದಂತೆ ಶಿಖರ್ ಧವನ್(143)ರನ್ನು ಹಿಂದಿಕ್ಕಿ 2019ರಲ್ಲೂ ಭಾರತದ ಪರ ಹೆಚ್ಚು ವೈಯಕ್ತಿಕ ರನ್ಗಳಿಸಿದ ದಾಖಲೆಗೆ ಪಾತ್ರರಾದರು.
ರೋಹಿತ್ ಶರ್ಮಾ ಕಳೆದು 6 ವರ್ಷಗಳಿಂದಲೂ ವೈಯಕ್ತಿಕ ಗರಿಷ್ಠ ರನ್ ದಾಖಲೆಯನ್ನು ಪ್ರತಿ ವರ್ಷ ತಮ್ಮಲ್ಲೇ ಉಳಿಸಿಕೊಂಡಿದ್ದರು. 2013ರಲ್ಲಿ 209ರನ್, 2014ರಲ್ಲಿ 264ರನ್, 2015ರಲ್ಲಿ 150ರನ್, 2016ರಲ್ಲಿ171ರನ್, 2017ರಲ್ಲಿ 208ರನ್, 2018ರಲ್ಲಿ 162 ರನ್ ಹಾಗೂ 2019ರಲ್ಲಿ 159(ಇಂದಿನ ಪಂದ್ಯದಲ್ಲಿ) ರನ್ಗಳಿಸುವ ಮೂಲಕ ಸತತ 7ನೇ ವರ್ಷವೂ ಭಾರತದ ಪರ ವರ್ಷವೊಂದರಲ್ಲಿ ಗರಿಷ್ಠ ವೈಯಕ್ತಿಕ ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
- ' class='align-text-top noRightClick twitterSection' data=''>
2019ರ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚುರನ್ ಸಿಡಿಸಿದ ಬ್ಯಾಟ್ಸ್ಮನ್(1427)
2019ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 1427 ರನ್ಗಳಿಸುವ ಮೂಲಕ ಗರಿಷ್ಠ ರನ್ ಕೊಹ್ಲಿಯನ್ನು (1292)ಹಿಂದಿಕ್ಕಿ ಈ ವರ್ಷದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ವರ್ಷದಲ್ಲಿ ಹೆಚ್ಚು ಶತಕ (07)
2019ರಲ್ಲಿ ರೋಹಿತ್ ಶರ್ಮಾ 7ನೇ ಶತಕ ಸಿಡಿಸಿದರು. ಈ ಮೂಲಕ ವರ್ಷವೊಂದರಲ್ಲಿ ಹೆಚ್ಚು ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಗಂಗೂಲಿ(7) ಹಾಗೂ ಡೇವಿಡ್ ವಾರ್ನರ್(7) ಹಂಚಿಕೊಂಡರು. 1998ರಲ್ಲಿ ಸಚಿನ್ 9 ಶತಕ ದಾಖಲಿಸಿರುವ ಸಚಿನ್ ತೆಂಡೂಲ್ಕರ್ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಶತಕ ಸಿಡಿಸಿರುವ ದಾಖಲೆ ಹೊಂದಿದ್ದಾರೆ. ಇನ್ನು ರೋಹಿತ್ ಶರ್ಮಾ ವಿಶ್ವಕಪ್ನಲ್ಲೂ 5 ಶತಕಸಿಡಿಸಿ ದಾಖಲೆ ಬರೆದಿದ್ದರು.