ಲಂಡನ್: ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾರನ್ನು ವಿಶ್ವ ಕ್ರಿಕೆಟ್ನ ಅತ್ಯುತ್ತಮ ಆಟಗಾರ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸೆಮಿಫೈನಲ್ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ರೋಹಿತ್ ಶರ್ಮಾರನ್ನು ಹೊಗಳಿದ್ದಾರೆ. ವಿಶ್ವಕಪ್ನಂತಹ ಮಹಾಟೂರ್ನಿಯಲ್ಲಿ ಎಂತಹ ಬ್ಯಾಟ್ಸ್ಮನ್ ಆದರೂ ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ ರೋಹಿತ್ ಶರ್ಮಾ ಎಲ್ಲಾ ಟಾಪ್ ತಂಡಗಳ ವಿರುದ್ಧವೇ ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಿದ್ದಾರೆ. ವಿಶ್ವಕಪ್ನಲ್ಲಿ 5 ಶತಕ ಸಿಡಿಸುವುದು ಸುಲಭದ ಮಾತಲ್ಲ. ಹಾಗಾಗಿ ಪ್ರಸ್ತುತ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನ ಅತ್ಯುತ್ತಮ ಆಟಗಾರ ಎಂದು ತಿಳಿಸಿದ್ದಾರೆ.
ಭಾರತ ತಂಡ ವಿಶ್ವಕಪ್ನಲ್ಲಿ ಇನ್ನು ಎರಡು ಪಂದ್ಯಗಳನ್ನಾಡಲಿದೆ. ಆ ಪಂದ್ಯಗಳಲ್ಲಿ ರೋಹಿತ್ರಿಂದ ಮತ್ತೆರಡು ಶತಕ ಹೊರಬರಲಿದೆ. ಏಕದಿನ ಸರಣಿಗಳಲ್ಲಿ 500 ಕ್ಕೂ ಹೆಚ್ಚು ರನ್ಗಳಿಸುವುದೆಂದರೆ ತುಂಬಾ ಕಷ್ಟ ಅಂತಹದರಲ್ಲಿ ರೋಹಿತ್ ವಿಶ್ವಕಪ್ನಲ್ಲಿ 600ಕ್ಕೂ ಹೆಚ್ಚು ರನ್ಗಳಿಸಿದ್ದಾರೆ. ಅವರು ನಮ್ಮ ತಂಡದಲ್ಲಿರುವುದು ತಂಡದ ಇತರ ಆಟಗಾರರಿಗೂ ಸ್ಪೂರ್ತಿಯಾಗಲಿದ್ದಾರೆ ಎಂದು ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಔಟಾಗದೇ 122, ಪಾಕಿಸ್ತಾನದ ವಿರುದ್ಧ 140, ಇಂಗ್ಲೆಂಡ್ ವಿರುದ್ಧ 102, ಬಾಂಗ್ಲಾದೇಶದ ವಿರುದ್ಧ 104 ಹಾಗೂ ಶ್ರೀಲಂಕಾ ವಿರುದ್ಧ 103 ರನ್ಗಳಿಸಿದ್ದರು. ಒಟ್ಟಾರೆ ಟೂರ್ನಿಯಲ್ಲಿ 647 ರನ್ಗಳಿಸಿ ವಿಶ್ವಕಪ್ನ ಲೀಡ್ ಸ್ಕೋರರ್ ಆಗಿದ್ದಾರೆ.