ಲಂಡನ್: ಭಾರತ ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಎದುರಾಳಿ ತಂಡದ ಆಟಗಾರರನ್ನು ತುಂಬಾ ಸುಲಭವಾಗಿ ಶ್ರಮವಿಲ್ಲದೇ ಮಣಿಸಿ ಶತಕ ಸಿಡಿಸುತ್ತಾರೆ ಎಂದು ಇಂಗ್ಲೆಂಡ್ನ ವಿಕೆಟ್ ಕೀಪರ್ ಜೋಸ್ ಬಟ್ಲರ್ ವಿವರಿಸಿದ್ದಾರೆ.
"ರೋಹಿತ್ ಶರ್ಮಾ ನನ್ನ ಪ್ರಕಾರ ಒಬ್ಬ ಅದ್ಭುತ ಬ್ಯಾಟ್ಸ್ಮನ್ ", ಎಂದು ಬಟ್ಲರ್ ರಾಜಸ್ಥಾನ ರಾಯಲ್ಸ್ನ ಇನ್ಸ್ಟಾಗ್ರಾಂ ಲೈವ್ ವೇಳೆ ಹೇಳಿದ್ದಾರೆ.
"ಶ್ರಮಪಡದೆ ಆಡುವ ಉತ್ತಮ ಶೈಲಿಯನ್ನು ಹಲವಾರು ಭಾರತೀಯ ಆಟಗಾರರು ಹೊಂದಿದ್ದಾರೆ. ರೋಹಿತ್ ಶರ್ಮಾ ಹಲವು ವರ್ಷಗಳಿಂಧ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುವ ಹಾಗೂ ಶ್ರಮಪಡದೇ ಎದುರಾಳಿ ಆಟಗಾರರನ್ನು ಮಣಿಸಬಲ್ಲರು ಎಂದು ತಿಳಿಸಿದ್ದಾರೆ.
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನ ಶ್ರೇಷ್ಠ ಏಕದಿನ ಆಟಗಾರನಾಗಿದ್ದಾರೆ. ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 3 ಧ್ವಿಶತಕ ಸಿಡಿಸಿದ ವಿಶ್ವದ ಏಕೈಕ ಆಟಗಾರನಾಗಿದ್ದಾರೆ. 32 ವರ್ಷದ ರೋಹಿತ್ ಶರ್ಮಾ 2019ರ ವಿಶ್ವಕಪ್ನಲ್ಲಿ 5 ಶತಕದ ಸಹಿತ 648 ರನ್ಗಳಿಸಿ ದಾಖಲೆ ಬರೆದಿದ್ದರು.
ರೋಹಿತ್ ಅವರಲ್ಲಿ ನಾನು ನೋಡಿದ ಪ್ರಮುಖ ವಿಷಯವೆಂದರೆ ಅವರು ಕ್ರೀಸ್ಗೆ ಆಗಮಿಸಿದರೆ ದೊಡ್ಡ ಮೊತ್ತ ಗಳಿಸುತ್ತಾರೆ. ಅದು ಇಡೀ ಪಂದ್ಯದ ಮೇಲೆ ಪರಿಣಾಮ ಬೀರುತ್ತಾದೆ. ವಿಶ್ವಕಪ್ನಲ್ಲು 4-5 ಶತಕಗಳಿಸಿದ್ದರು ಎಂದು 2016-17 ರ ಐಪಿಎಲ್ಗಳಲ್ಲಿ ರೋಹಿತ್ ಶರ್ಮಾರ ಟೀಮ್ ಮೇಟ್ ಆಗಿದ್ದ ಬಟ್ಲರ್ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಕೆಲವು ಬೌಲರ್ಗಳು ಭಾರತೀಯ ಬ್ಯಾಟ್ಸ್ಮನ್ಗಳನ್ನು ಶಾರ್ಟ್ ಬಾಲ್ಗಳ ಮೂಲಕ ದಾಳಿ ನಡೆಸುತ್ತಿದ್ದರು. ಆದರೆ ಅಂತಹ ಬೌಲರ್ಗಳನ್ನು ದಂಡಿಸಿ ಬೆಚ್ಚಿಸುತ್ತಿದ್ದಾರೆ ಎಂದು ರೋಹಿತ್ ಶರ್ಮಾರನ್ನು ಮೆಚ್ಚಿಕೊಂಡಿದ್ದಾರೆ.