ಕ್ಯಾನ್ಬೆರಾ : ಬುಧವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ 13 ರನ್ಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ.
ಆದರೆ, ಈ ಸರಣಿಯಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್ಮನ್ ಶತಕಗಳಿಸುವಲ್ಲಿ ವಿಫಲರಾದರು. ಇದು ಈ ವರ್ಷದಲ್ಲಿ ಭಾರತದ ಕೊನೆಯ ಏಕದಿನ ಸರಣಿಯಾಗಿರುವುದರಿಂದ ಮಹತ್ವದ ದಾಖಲೆಯೊಂದು ಹಿಟ್ಮ್ಯಾನ್ ಹೆಸರಿನಲ್ಲಿ ಉಳಿದುಕೊಂಡಿದೆ.
ರೋಹಿತ್ ಶರ್ಮಾ ಈ ವರ್ಷ ಕೇವಲ 3 ಏಕದಿನ ಪಂದ್ಯವನ್ನು ಮಾತ್ರ ಆಡಿದ್ದಾರೆ. ಆದರೂ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಸಿಡಿಸಿದ್ದ 119 ರನ್ 2020ರಲ್ಲಿ ಭಾರತ ತಂಡದ ಬ್ಯಾಟ್ಸ್ಮನ್ಗಳು ದಾಖಲಿಸಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿ ಉಳಿದುಕೊಂಡಿದೆ.
2008ರ ಬಳಿಕ ಮೊದಲ ಬಾರಿಗೆ ಏಕದಿನ ಕ್ರಿಕೆಟ್ನಲ್ಲಿ ಶತಕವಿಲ್ಲದ ವರ್ಷ ಕಂಡ ಕೊಹ್ಲಿ
ಈ ವರ್ಷ ಭಾರತ ತಂಡದ ಪರ ಕೇವಲ 3 ಆಟಗಾರರು ಮಾತ್ರ ಶತಕ ಸಿಡಿಸಿದ್ದಾರೆ. ರೋಹಿತ್ 119, ರಾಹುಲ್ 112, ಶ್ರೆಯಸ್ ಅಯ್ಯರ್ 103 ರನ್ಗಳಿಸಿದ್ದಾರೆ. 2013ರಿಂದ 2020ರವರೆಗೆ ಭಾರತದ ಪರ ವೈಯಕ್ತಿಕ ರನ್ ದಾಖಲೆ ಅವರ ಹೆಸರಿನಲ್ಲೇ ಉಳಿದಿದೆ.
ರೋಹಿತ್ ಶರ್ಮಾ 2013 ರಿಂದ 2020ರವರೆಗೆ ಸತತ 8 ವರ್ಷಗಳಲ್ಲಿ ಕ್ರಮವಾಗಿ, 209, 264, 150, 171, 208, 162, 159 ಹಾಗೂ 119 ರನ್ ಗಳಿಸಿದ್ದಾರೆ.