ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಇದೇ ಸಂದರ್ಭದಲ್ಲಿ ರೋಹಿತ್ರಂತೆಯೇ ಮಧ್ಯಮ ಕ್ರಮಾಂಕದಿಂದ ಕೆಲಕಾಲ ಆರಂಭಿಕರಾಗಿ ಬಡ್ತಿ ಪಡೆದಿದ್ದ ಭಾರತದ ಮಾಜಿ ಆಟಗಾರ ಲಕ್ಷ್ಮಣ್ ಕೆಲವು ಸಲಹೆ ನೀಡಿದ್ದಾರೆ.
1996-98ರಲ್ಲಿ ಲಕ್ಷ್ಮಣ್ ಕೂಡ ಆರಂಭಿಕ ಸ್ಥಾನಕ್ಕೆ ಒತ್ತಾಯಪೂರ್ವಕವಾಗಿ ಬ್ಯಾಟಿಂಗ್ ಮಾಡಿಸಲಾಗಿತ್ತು. ಆದರೆ ಆ ವೇಳೆಗಾಗಲೆ ಅವರು ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದರು. ಆದರೆ ಕೆಲವು ಹಿರಿಯ ಆಟಗಾರರು ಹಾಗೂ ಕೋಚ್ ಮಾತಿಗೆ ಬೆಲೆಕೊಟ್ಟು ಆರಂಭಿಕ ಸ್ಥಾನದಲ್ಲಿ ಆಡಿದ್ದರು. ಆದರೆ 3 ಅಥವಾ 4ನೇ ಕ್ರಮಾಂಕದಲ್ಲಿ ಯಶಸ್ಸಿನ ಅಲೆಯಲ್ಲಿದ್ದ ಅವರನ್ನು ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಸಿದ್ದರಿಂದ ತಮ್ಮ ತಂತ್ರಗಾರಿಕೆಯಲ್ಲಿ ಅನಿವಾರ್ಯವಾಗಿ ಬದಲಾವಣೆ ಮಾಡಿಕೊಳ್ಳಬೇಕಾಯಿತು. ಆದರೆ ಅದು ನನ್ನ ಆಟಕ್ಕೆ ವಿರುದ್ಧವಾಗಿತ್ತು ಎಂದಿದ್ದಾರೆ.
ಆದರೆ ರೋಹಿತ್ ಆ ತಪ್ಪನ್ನು ಮಾಡಬಾರದು. ನಾನು ಆರಂಭಿಕನಾಗಿ ಬಡ್ತಿ ಪಡೆದ ಸಂದರ್ಭದಲ್ಲಿ ಕೇವಲ 4 ಟೆಸ್ಟ್ ಪಂದ್ಯಗಳನ್ನಾಡಿದ್ದೆ. ಆದರೆ ರೋಹಿತ್ ಸುದೀರ್ಘ 12 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಳೆದಿದ್ದಾರೆ. ಅವರು ಇಲ್ಲಿಯವರೆಗೆ ಕಾಯ್ದುಕೊಂಡು ಬಂದಿರುವ ನೈಸರ್ಗಿಕ ಆಟವನ್ನು ಟೆಸ್ಟ್ ಕ್ರಿಕೆಟ್ ಆರಂಭಿಕನಾಗಿಯೂ ಮುಂದುವರಿಸಬೇಕು. ತಮ್ಮ ಬ್ಯಾಟಿಂಗ್ ಕೌಶಲ್ಯ ಹಾಗೂ ತಂತ್ರಗಾರಿಕೆಯಲ್ಲಿ ಯಾವುದೇ ಬದಲಾವಣೆ ತರಬಾರದು ಎಂದು ವಿವಿಎಸ್ ಸಲಹೆ ನೀಡಿದ್ದಾರೆ.
ಇನ್ನು ಆಯ್ಕೆ ಸಮಿತಿ ಹಿರಿಯ ಆಟಗಾರ ರೋಹಿತ್ಗೆ ಸಂಪೂರ್ಣ 3 ಟೆಸ್ಟ್ ಪಂದ್ಯಗಳಲ್ಲೂ ಆರಂಭಿಕನಾಗಿರುತ್ತಾರೆ ಎಂದು ಖಚಿತಪಡಿಸಿದ್ದಾರೆ. ರೋಹಿತ್ ಮೇಲೆ ಹೊಸ ಜವಾಬ್ದಾರಿ ವಹಿಸಿ ಅವರ ಮೇಲೆ ತುಂಬಾ ನಂಬಿಕೆಯಿಟ್ಟಿದ್ದಾರೆ. ಉಪಖಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವುದು ತುಂಬಾ ಅನುಕೂಲವಾಗಿದ ಎಂದು ಲಕ್ಷ್ಮಣ್ ರೋಹಿತ್ ಟೆಸ್ಟ್ ಕ್ರಿಕೆಟ್ ಕುರಿತು ತಿಳಿಸಿದ್ದಾರೆ.
ವಿಂಡೀಸ್ ವಿರುದ್ಧ ಆರಂಭಿಕನಾಗಿ ಕನ್ನಡಿಗ ಕೆಎಲ್ ರಾಹುಲ್ ವಿಫಲರಾದ ಹಿನ್ನಲೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಮಯಾಂಕ್ ಜೊತೆಗೆ ರೋಹಿತ್ ಶರ್ಮಾರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇನ್ನು ರಾಹುಲ್ಗೆ ದೇಶಿ ಕ್ರಿಕೆಟ್ನಲ್ಲಿ ಪಾಲ್ಗೊಂಡು ತಮ್ಮ ಸಾಮರ್ಥ್ಯ ಸಾಭೀತು ಪಡಿಸುವಂತೆ ಸಲಹೆ ಕೂಡ ನೀಡಿದ್ದಾರೆ.
- " class="align-text-top noRightClick twitterSection" data="">