ETV Bharat / sports

ಮುಂದಿನ ಐಪಿಎಲ್​​​ ಪಂದ್ಯಕ್ಕೆ ರೋಹಿತ್​​ ಶರ್ಮಾ ಲಭ್ಯ: ಜಹೀರ್​ ಖಾನ್​​ - ಜಹೀರ್​ ಖಾನ್​​

ಅಭ್ಯಾಸದ ವೇಳೆ ಗಾಯಗೊಂಡಿದ್ದ ರೋಹಿತ್​ ಶರ್ಮಾ ಮುಂದಿನ ಪಂದ್ಯಕ್ಕಾಗಿ ಲಭ್ಯವಿದ್ದು, ವಿಶ್ವಕಪ್​ನಲ್ಲೂ ಬ್ಯಾಟ್​ ಬೀಸಲಿದ್ದಾರೆ.

ರೋಹಿತ್​ ಶರ್ಮಾ
author img

By

Published : Apr 12, 2019, 8:19 PM IST

ಮುಂಬೈ: ಕಳೆದ ಎಂಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಂಡಿಯನ್​ ಪ್ರೀಮಿಯರ್​ ಲೀಗ್​ನಿಂದ ಹೊರಗುಳಿದಿದ್ದ ರೋಹಿತ್​ ಶರ್ಮಾ ಮುಂದಿನ ಪಂದ್ಯಕ್ಕೆ ಲಭ್ಯವಿರುವುದಾಗಿ ಜಹೀರ್​ ಖಾನ್​ ಸ್ಪಷ್ಟಪಡಿಸಿದ್ದಾರೆ.

ಪಂಜಾಬ್​ ವಿರುದ್ಧದ ಪಂದ್ಯಕ್ಕಾಗಿ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ರೋಹಿತ್​ ಗಾಯಗೊಂಡಿದ್ದರು. ಹೀಗಾಗಿ ಹಿಂದಿನ ಪಂಜಾಬ್ ತಂಡದ ವಿರುದ್ಧದ ಪಂದ್ಯದಿಂದ ರೋಹಿತ್​ ಶರ್ಮಾ ಹೊರಗುಳಿದಿದ್ದರು. ಈ ವೇಳೆ ತಂಡವನ್ನ ವೆಸ್ಟ್​ ಇಂಡೀಸ್​ನ ಕಿರನ್​ ಪೊಲಾರ್ಡ್​ ಮುಂದುವರೆಸಿದ್ದರು.

ಇದೀಗ ಅವರ ಗಾಯದ ಬಗ್ಗೆ ಮಾತನಾಡಿರುವ ಜಹೀರ್​ ಖಾನ್​, ಮುಂದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ ಕಣಕ್ಕಿಳಿಯಲಿದ್ದು, ಅವರು ಸಂಪೂರ್ಣವಾಗಿ ಫಿಟ್​ ಆಗಿದ್ದಾರೆ. ಈಗಾಗಲೇ ನೆಟ್​ನಲ್ಲಿ ಅಭ್ಯಾಸ ಕೂಡ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಮುಂಬೈ ಇಂಡಿಯನ್ಸ್​ ರಾಜಸ್ಥಾನ ರಾಯಲ್ಸ್​ ವಿರುದ್ಧ ಮುಂದಿನ ಪಂದ್ಯವನ್ನಾಡಲಿದೆ.

ಇನ್ನು ರೋಹಿತ್​ ಶರ್ಮಾ ಗಾಯಗೊಂಡಿದ್ದರಿಂದ ವಿಶ್ವಕಪ್​ಗಾಗಿ ಅವರು ಆಯ್ಕೆಯಾಗುವರೇ ಎಂಬ ಗೊಂದಲ ಸಹ ಶುರುವಾಗಿತ್ತು. ಇದೀಗ ಅವರು ಫಿಟ್​ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದಂತಾಗಿದೆ.

Intro:Body:

ಮುಂದಿನ ಐಪಿಎಲ್​ ಪಂದ್ಯಕ್ಕೆ ರೋಹಿತ್​ ಶರ್ಮಾ ಲಭ್ಯ: ಜಹೀರ್​ ಖಾನ್​​ 

ಮುಂಬೈ: ಕಳೆದ ಎಂಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಂಡಿಯನ್​ ಪ್ರೀಮಿಯರ್​ ಲೀಗ್​ನಿಂದ ಹೊರಗುಳಿದಿದ್ದ ರೋಹಿತ್​ ಶರ್ಮಾ ಮುಂದಿನ ಪಂದ್ಯಕ್ಕೆ ಲಭ್ಯವಿರುವುದಾಗಿ ಜಹೀರ್​ ಖಾನ್​ ಸ್ಪಷ್ಟ ಪಡಿಸಿದ್ದಾರೆ. 

ಪಂಜಾಬ್​ ವಿರುದ್ಧದ ಪಂದ್ಯಕ್ಕಾಗಿ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ರೋಹಿತ್​ ಗಾಯಗೊಂಡಿದ್ದರು. ಹೀಗಾಗಿ ಹಿಂದಿನ ಪಂಜಾಬ್ ತಂಡದ ವಿರುದ್ಧದ ಪಂದ್ಯದಿಂದ ರೋಹಿತ್​ ಶರ್ಮಾ ಹೊರಗುಳಿದಿದ್ದರು. ಈ ವೇಳೆ ತಂಡವನ್ನ ವೆಸ್ಟ್​ ಇಂಡೀಸ್​ನ ಕಿರನ್​ ಪೊಲಾರ್ಡ್​ ಮುಂದುವರೆಸಿದ್ದರು.

 ಇದೀಗ ಅವರ ಗಾಯದ ಬಗ್ಗೆ ಮಾತನಾಡಿರುವ ಜಹೀರ್​ ಖಾನ್​, ಮುಂದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ ಕಣಕ್ಕಿಳಿಯಲಿದ್ದು, ಅವರು ಸಂಪೂರ್ಣವಾಗಿ ಫಿಟ್​ ಆಗಿದ್ದಾರೆ ಎಂದಿದ್ದು, ಈಗಾಗಲೇ ನೆಟ್​ನಲ್ಲಿ ಅಭ್ಯಾಸ ಕೂಡ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಮುಂಬೈ ಇಂಡಿಯನ್ಸ್​ ರಾಜಸ್ಥಾನ ರಾಯಲ್ಸ್​ ವಿರುದ್ಧ ಮುಂದಿನ ಪಂದ್ಯವನ್ನಾಡಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.