ಮುಂಬೈ : ಭಾರತ ತಂಡದ ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ತಮ್ಮ ನಿವೃತ್ತಿ ವಯಸ್ಸನ್ನು ಬಹಿರಂಗಗೊಳಿಸಿದ್ದಾರೆ.
ಪ್ರಸ್ತುತ ಸೀಮಿತ ಓವರ್ಗಳ ಕ್ರಿಕೆಟ್ನ ಟಾಪ್ ಬ್ಯಾಟ್ಸ್ಮನ್ಗಳ ಸಾಲಿನಲ್ಲಿರುವ ರೋಹಿತ್ ಇನ್‌ಸ್ಟಾಗ್ರಾಮ್ ಲೈವ್ನಲ್ಲಿ ತಾವು 38-39ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಹಿಟ್ಮ್ಯಾನ್ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈವರೆಗೆ ಭಾರತ ತಂಡದ ಪರ 32 ಟೆಸ್ಟ್, 224 ಏಕದಿನ ಪಂದ್ಯ ಹಾಗೂ 108 ಟಿ20 ಪಂದ್ಯಗಳನ್ನಾಡಿದ್ದಾರೆ. ಒಟ್ಟಾರೆ 39 ಶತಕಗಳ ನೆರವಿನಿಂದ 14 ಸಾವಿರ ಅಂತಾರಾಷ್ಟ್ರೀಯ ರನ್ಗಳಿಸಿದ್ದಾರೆ.
33ನೇ ವಯಸ್ಸಿನ ರೋಹಿತ್ ಇನ್ನೂ 5 ವರ್ಷ ಕ್ರಿಕೆಟ್ನಲ್ಲಿ ಸಕ್ರಿಯರಾಗಿರುವುದಾಗಿ ಅಭಿಮಾನಿಗಳಿಗೆ ಹೇಳಿದ್ದಾರೆ. 2019ರ ವಿಶ್ವಕಪ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ರೋಹಿತ್ ವಿಶ್ವದಾಖಲೆಯ 5 ಶತಕಗಳ ನೆರವಿನಿಂದ 648 ರನ್ಗಳಿಸಿದ್ದರು.