ETV Bharat / sports

ಕೇವಲ 4 ರನ್​ಗಳಿಸಿದರೆ ಸಚಿನ್​, ಗಂಗೂಲಿ, ಲಾರಾ ದಾಖಲೆ ಮುರಿಯಲಿದ್ದಾರೆ ಹಿಟ್​ಮ್ಯಾನ್​... - ರೋಹಿತ್​ ಏಕದಿನ ಕ್ರಿಕೆಟ್​ನಲ್ಲಿ 9000 ರನ್​

ರೋಹಿತ್​ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಕೇವಲ 4 ರನ್​ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್​ನಲ್ಲಿ 9000 ಸಾವಿರ ರನ್​ ಪೂರೈಸಲಿದ್ದಾರೆ.

Rohit Sharma records
Rohit Sharma records
author img

By

Published : Jan 18, 2020, 7:43 PM IST

ಬೆಂಗಳೂರು: ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಕೇವಲ 4 ರನ್​ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್​ನಲ್ಲಿ 9000 ಸಾವಿರ ರನ್​ ಪೂರೈಸುವುದರ ಜೊತೆಗೆ, ವೇಗವಾಗಿ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್​ಮನ್​ ಎಂದ ದಾಖಲೆಗೂ ಪಾತ್ರರಾಗಲಿದ್ದಾರೆ.

32 ವರ್ಷದ ರೋಹಿತ್​ ಶರ್ಮಾ ಭಾರತ ತಂಡದ ಪರ 223 ಪಂದ್ಯಗಳನ್ನಾಡಿದ್ದು 216 ಇನ್ನಿಂಗ್ಸ್​ಗಳಿಂದ 8996 ರನ್​ಗಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕ ಕೊನೆಯ ಏಕದಿನ ಪಂದ್ಯದಲ್ಲಿ 4 ರನ್​ಗಳಿಸಿದರೆ 9000 ರನ್​ ಪೂರೈಸಲಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆಯನ್ನು ಮಾಡಿದ ಭಾರತದ 7 ನೇ ಬ್ಯಾಟ್ಸ್​ಮನ್​ ಹಾಗೂ ವೇಗವಾಗಿ ಈ ಸಾವಿರ ರನ್​ಗಳಿಸಿದ ಬಿಶ್ವದ 3 ಬ್ಯಾಟ್ಸ್​ಮನ್​ ಎನಿಸಿಕೊಳ್ಳಲಿದ್ದಾರೆ.

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಕೇವಲ 194 ಇನ್ನಿಂಗ್ಸ್​ಗಳಲ್ಲಿ 9000 ರನ್​ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಎಬಿ ಡಿ ವಿಲಿಯರ್ಸ್​ 205 ಇನ್ನಿಂಗ್ಸ್​ಗಳಲ್ಲಿ ಸಾಧಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ವೇಗವಾಗಿ 9000 ರನ್​ಗಳಿಸಿದ ಬ್ಯಾಟ್ಸ್​ಮನ್​

  • ವಿರಾಟ್​ ಕೊಹ್ಲಿ (194 ಇನ್ನಿಂಗ್ಸ್​)
  • ಎಬಿ ಡಿ ವಿಲಿಯರ್ಸ್​ (205 ಇನ್ನಿಂಗ್ಸ್​)
  • ಸೌರವ್​ ಗಂಗೂಲಿ (228 ಇನ್ನಿಂಗ್ಸ್)
  • ಸಚಿನ್​ ತೆಂಡೂಲ್ಕರ್​ (235 ಇನ್ನಿಂಗ್ಸ್)
  • ಬ್ರಿಯಾನ್​ ಲಾರ (239 ಇನ್ನಿಂಗ್ಸ್)
  • ರಿಕಿ ಪಾಂಟಿಂಗ್​ (242 ಇನ್ನಿಂಗ್ಸ್)

ಭಾರತದ ಪರ 9000ಕ್ಕಿಂತ ಹೆಚ್ಚು ರನ್​ಗಳಿಸಿದವರು

  • ಸಚಿನ್​ ತೆಂಡೂಲ್ಕರ್​(18426)
  • ವಿರಾಟ್​ ಕೊಹ್ಲಿ (11703)
  • ಸೌರವ್​ ಗಂಗೂಲಿ(11221)
  • ರಾಹುಲ್​ ದ್ರಾವಿಡ್​(10768)
  • ಮಹೇಂದ್ರ ಸಿಂಗ್​ ಧೋನಿ(10599)
  • ಮೊಹಮ್ಮದ್​ ಅಜರುದ್ದೀನ್​(9378)
  • ರೋಹಿತ್​ ಶರ್ಮಾ (8996*)

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.