ETV Bharat / sports

ಪ್ರಾಯೋಗಿಕವಾಗಿ ರೋಹಿತ್ ಫಿಟ್: ಕಣಕ್ಕಿಳಿಯುವ ಮುನ್ನ ಮತ್ತೊಮ್ಮೆ ಪರೀಕ್ಷೆ ಎದುರಿಸಬೇಕು ಎಂದ ಬಿಸಿಸಿಐ

author img

By

Published : Dec 12, 2020, 8:29 PM IST

ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ರೋಹಿತ್ ಶರ್ಮಾ ಡಿ. 14ರಂದು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ. ಡಿ. 17ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಪಂದ್ಯ ಪ್ರಾರಂಭವಾಗಲಿದೆ.

Rohit fit to join Indian team
ಪ್ರಾಯೋಗಿಕವಾಗಿ ರೋಹಿತ್ ಫಿಟ್

ನವದೆಹಲಿ: ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಸೇರಲು "ಪ್ರಾಯೋಗಿಕವಾಗಿ ಯೋಗ್ಯರು" ಎಂದು ಬಿಸಿಸಿಐ ಘೋಷಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯುವ ಬಗ್ಗೆ ತಂಡದ ವೈದ್ಯಕೀಯ ತಂಡ ಮರು ಮೌಲ್ಯಮಾಪನ ನಡೆಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಹೇಳಿದೆ.

ಐಪಿಎಲ್ ಸಮಯದಲ್ಲಿ ರೋಹಿತ್ ಶರ್ಮಾ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರು. ಹೀಗಾಗಿ ನವೆಂಬರ್ 19ರಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದರು.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ, "ರೋಹಿತ್ ಶರ್ಮಾ ಅವರು ಬೆಂಗಳೂರಿನ ಎನ್‌ಸಿಎಯಲ್ಲಿ ಚೇತರಿಕೆ ಕಂಡಿದ್ದು, ಈಗ ಪ್ರಾಯೋಗಿಕವಾಗಿ ಸದೃಢರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅವಧಿಯಲ್ಲಿ ಎಡ ಮಂಡಿರಜ್ಜು ಗಾಯದ ಹಿನ್ನೆಲೆಯಲ್ಲಿ ಅವರು ನವೆಂಬರ್ 19ರಿಂದ ಎನ್‌ಸಿಎದಲ್ಲಿ ತರಬೇತಿ ಪಡೆಯುತ್ತಿದ್ದರು".

"ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ವಿಕೆಟ್‌ಗಳ ನಡುವೆ ಓಟಕ್ಕೆ ಸಂಬಂಧಿಸಿದ ಅವರ ಕೌಶಲ್ಯಗಳನ್ನು ಪರೀಕ್ಷಿಸಿ ನಿರ್ಣಯಿಸಿದ ನಂತರ ಎನ್‌ಸಿಎ ವೈದ್ಯಕೀಯ ತಂಡವು ರೋಹಿತ್ ಶರ್ಮಾ ಅವರ ದೈಹಿಕ ಸಾಮರ್ಥ್ಯದ ಬಗ್ಗೆ ತೃಪ್ತಿ ಹೊಂದಿದೆ. ಆದರೂ ತರಬೇತಿಯನ್ನು ಮುಂದುವರೆಸಬೇಕು" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸದ್ಯ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ರೋಹಿತ್ ಶರ್ಮಾ ಡಿ. 14 ರಂದು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದು, 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ. ಡಿ. 17ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಪಂದ್ಯ ಪ್ರಾರಂಭವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.