ಅಹಮದಾಬಾದ್: ಮೊದಲ ಪಂದ್ಯದ ಸೋಲಿನ ನಂತರ ಚೆನ್ನೈನಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ್ದು ಸರಣಿಯಲ್ಲಿ ನಮ್ಮ ತಂಡ ಕಮ್ಬ್ಯಾಕ್ ಮಾಡಿದ ಪ್ರಮುಖ ಕ್ಷಣವಾಗಿತ್ತು ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಮೊದಲ ಪಂದ್ಯದಲ್ಲಿ 227ರನ್ಗಳ ಸೋಲು ಕಂಡಿದ್ದ ನಂತರ ರೋಹಿತ್ರ ಎರಡನೇ ಟೆಸ್ಟ್ನಲ್ಲಿನ ಶತಕದಾಟ ಭಾರತದ ಕಡೆಗೆ ಸರಣಿ ತಿರುಗಲು ಕಾರಣವಾಯಿತು. ಜೊತೆಗೆ ಉಳಿದ ಪಂದ್ಯಗಳನ್ನು ಗೆಲ್ಲಲು ನೆರವಾಯಿತು ಎಂದು ಕೊಹ್ಲಿ ಪಂದ್ಯದ ಗೆಲುವಿನ ನಂತರ ಪ್ರಶಸ್ತಿ ವಿತರಣೆ ಸಮಾರಂಭದ ವೇಳೆ ತಿಳಿಸಿದ್ದಾರೆ.
" ರೋಹಿತ್ ಅವರ ಆಟ ನಾವು ಸರಣಿಯಲ್ಲಿ ಕಮ್ಬ್ಯಾಕ್ ಮಾಡಿದ ಅತ್ಯಂತ ನಿರ್ಣಾಯಕ ಕ್ಷಣವಾಗಿದೆ. ಆ ಪಿಚ್‌ನಲ್ಲಿ 150 (161) ಗಳಿಸುವುದು 250 ಪಡೆದಷ್ಟೇ ಉತ್ತಮ. ಅದು ನಮ್ಮನ್ನು ಸ್ಪರ್ಧೆಯಲ್ಲಿ ಉಳಿದುಕೊಳ್ಳುವಂತೆ ಮಾಡಿತು. ಅದಲ್ಲದೆ ಅವರು ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನದ ಜೊತೆಗೆ ಕೆಲವು ಪ್ರಮುಖ ಜೊತೆಯಾಟದಲ್ಲೂ ಪಾಲ್ಗೊಂಡರು" ಎಂದು ಹಿಟ್ಮ್ಯಾನ್ ಬಗ್ಗೆ ಕೊಹ್ಲಿ ಮೆಚ್ಚುಗೆ ಮಾತನಾಡಿದರು.
-
C.H.A.M.P.I.O.N.S! 🏆 👏 🇮🇳#TeamIndia @Paytm #INDvENG pic.twitter.com/i4KWDxx2Ml
— BCCI (@BCCI) March 6, 2021 " class="align-text-top noRightClick twitterSection" data="
">C.H.A.M.P.I.O.N.S! 🏆 👏 🇮🇳#TeamIndia @Paytm #INDvENG pic.twitter.com/i4KWDxx2Ml
— BCCI (@BCCI) March 6, 2021C.H.A.M.P.I.O.N.S! 🏆 👏 🇮🇳#TeamIndia @Paytm #INDvENG pic.twitter.com/i4KWDxx2Ml
— BCCI (@BCCI) March 6, 2021
ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರು. ಸರಣಿಯುದ್ದಕ್ಕೂ ಬೌಲರ್ಗಳು ಹಾಗೂ ಫೀಲ್ಡರ್ಗಳು ಉತ್ತಮ ಪ್ರದರ್ಶನ ನೀಡಿದರು. ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಆಟ ಗೇಮ್ ಚೇಂಜಿಂಗ್ ಕ್ಷಣವಾಗಿತ್ತು ಎಂದು ವಿರಾಟ್ ಹೇಳಿದ್ದಾರೆ.
ಅಲ್ಲದೆ ಸರಣಿಯಲ್ಲಿ 32 ವಿಕೆಟ್ ಪಡೆದ ಅನುಭವಿ ಅಶ್ವಿನ್ರನ್ನು ಸಹಾ ಕೊಹ್ಲಿ ಶ್ಲಾಘಿಸಿದ್ದಾರೆ. 'ಆಶ್ವಿನ್ ಕಳೆದ 6-7 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ನಲ್ಲಿ ನಮಗೆ ಬ್ಯಾಂಕರ್ ಆಗಿದ್ದಾರೆ' ಎಂದು ತಿಳಿಸಿದ್ದಾರೆ. ಆಶ್ವಿನ್ ಮತ್ತು ಅಕ್ಷರ್ ಜೋಡಿ ಸರಣಿಯಲ್ಲಿ ಎದುರಾಳಿಯ 80 ವಿಕೆಟ್ಗಳಲ್ಲಿ ಬರೋಬ್ಬರಿ 59 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ:ಸತತ 13ನೇ ಟೆಸ್ಟ್ ಸರಣಿ ಗೆದ್ದು ತವರಿನ ದಾಖಲೆ ಬಲಿಷ್ಠಗೊಳಿಸಿಕೊಂಡ ಟೀಂ ಇಂಡಿಯಾ