ETV Bharat / sports

ರಾಷ್ಟ್ರೀಯ ತಂಡಕ್ಕೆ ಮರಳುವ ಅಭಿಲಾಷೆ ವ್ಯಕ್ತಪಡಿಸಿದ ರಾಬಿನ್​ ಉತ್ತಪ್ಪ - ರಾಜಸ್ಥಾನ್​ ರಾಯಲ್ಸ್​

ಭಾರತ ತಂಡಕ್ಕೆ 2006ರಲ್ಲಿ ಪದಾರ್ಪಣೆ ಮಾಡಿದ್ದ ಉತ್ತಪ್ಪ 46 ಏಕದಿನ ಹಾಗೂ 13 ಟಿ-20 ಪಂದ್ಯಗಳನ್ನಾಡಿದ್ದಾರೆ. 2007ರ ಟಿ-20 ವಿಶ್ವಕಪ್​ ಗೆದ್ದ ತಂಡದ ಭಾಗವಾಗಿದ್ದ ಉತ್ತಪ್ಪ ಒಂದೆರೆಡು ಟೂರ್ನಿಗಳಲ್ಲಿ ವಿಫಲರಾಗಿ ತಂಡದಿಂದ ಹೊರಬಿದ್ದವರು ಮತ್ತೆ ಟೀಂ​ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.

ರಾಬಿನ್​ ಉತ್ತಪ್ಪ
ರಾಬಿನ್​ ಉತ್ತಪ್ಪ
author img

By

Published : Aug 24, 2020, 6:29 PM IST

Updated : Aug 24, 2020, 7:31 PM IST

ದುಬೈ: ದೇಶಿ ಕ್ರಿಕೆಟ್​ನ ಅತ್ಯಂತ ಯಶಸ್ವಿ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ಕನ್ನಡಿಗ ರಾಬಿನ್​ ಉತ್ತಪ್ಪ 13ನೇ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಿ ಮತ್ತೆ ಭಾರತ ತಂಡಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸುಮಾರು 5 ವರ್ಷಗಳಿಂದ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲವಾದರೂ, ದೇಶಿ ಟೂರ್ನಿಗಳಲ್ಲಿ ಕಳಪೆಯಲ್ಲದಿದ್ದರೂ ಸರಾಸರಿ ಆಟವನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಕೇರಳ ತಂಡದ ಪರ ಪ್ರಥಮ ದರ್ಜೆ ಹಾಗೂ ಲಿಸ್ಟ್​ ಎ ತಂಡದ ನಾಯಕತ್ವ ವಹಿಸಿಕೊಂಡಿರುವ ಉತ್ತಪ್ಪ 2020ರ ಐಪಿಎಲ್​ನಲ್ಲಿ ರಾಜಸ್ಥಾನ್​ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಭಾರತ ತಂಡಕ್ಕೆ 2006ರಲ್ಲಿ ಪದಾರ್ಪಣೆ ಮಾಡಿದ್ದ ಉತ್ತಪ್ಪ 46 ಏಕದಿನ ಹಾಗೂ 13 ಟಿ20 ಪಂದ್ಯಗಳನ್ನಾಡಿದ್ದಾರೆ. 2007ರ ಟಿ20 ವಿಶ್ವಕಪ್​ ಗೆದ್ದ ತಂಡದ ಭಾಗವಾಗಿದ್ದ ಉತ್ತಪ್ಪ ಒಂದೆರಡು ಟೂರ್ನಿಗಳಲ್ಲಿ ವಿಫಲರಾಗಿ ತಂಡದಿಂದ ಹೊರಬಿದ್ದವರು ಮತ್ತೆ ಟೀಮ್​ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.

ರಾಜಸ್ಥಾನ್ ರಾಯಲ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿರುವ ಉತ್ತಪ್ಪ, " ಈ ಬಾರಿಯ ಐಪಿಎಲ್‌ನಲ್ಲಿ ನಾನು ಶ್ರೇಷ್ಠ ಪ್ರದರ್ಶನ ನೀಡಿದರೆ, ಅದ್ಭುತ ಸಂಗತಿಗಳು ಜರುಗಬಹುದು ಎಂದು ನಾನು ನಂಬಿದ್ದೇನೆ. ಆ ಪ್ರದರ್ಶನ ನನ್ನನ್ನು ಟೀಮ್ ಇಂಡಿಯಾಕ್ಕೆ ವಾಪಸ್​ ಸೇರುವಂತೆ ಮಾಡಬಹುದು. ಒಬ್ಬ ಮನುಷ್ಯನಾಗಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವವರಲ್ಲಿ ನಾನೂ ಕೂಡ ಒಬ್ಬ. ನಕಾರಾತ್ಮಕ ಪರಿಸ್ಥಿಗಳಿದ್ದರು ನಾನು ಬೆಳ್ಳಿ ಗೆರೆಗಳತ್ತ ನೋಡುವವನು. ಹೀಗಾಗಿ ದೇವರು ಇಚ್ಛಿಸಿದರೆ ನಾನು ಮತ್ತೆ ದೇಶವನ್ನು ಪ್ರತಿನಿಧಿಸಿ, ಪ್ರಶಸ್ತಿಗಳನ್ನು ತರಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ನಿಜವಾಗಿಯೂ ನನ್ನಲ್ಲಿ ಪ್ರಬಲವಾಗಿದೆ" ಎಂದಿದ್ದಾರೆ.

"ಅದು ಸಂಭವಿಸಬಹುದೆಂದು ನಾನು ಭಾವಿಸುತ್ತೇನೆ. ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಯಾರಾದರೂ ದೇಶಕ್ಕಾಗಿ ಆಡುತ್ತಾರೆ ಮತ್ತು ಪ್ರಶಸ್ತಿಗಳನ್ನು ದೇಶಕ್ಕೆ ತಂದುಕೊಡುತ್ತಾರೆ. ಆದ್ದರಿಂದ ಭಾರತ ತಂಡಕ್ಕೆ ಮರಳುವ ಕನಸು ಈಗಲೂ ಜೀವಂತವಾಗಿದೆ" ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

Last Updated : Aug 24, 2020, 7:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.