ದುಬೈ : ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಐಸಿಸಿಯ ಚೊಚ್ಚಲ 'ಪ್ಲೇಯರ್ ಆಫ್ ದಿ ಮಂತ್' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನೀಡಿದ ಪ್ರದರ್ಶನ ನೋಡಿ ಈ ಪ್ರಶಸ್ತಿಗೆ ಶಿಪಾರಸು ಮಾಡಲಾಗಿತ್ತು.
ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಪಂತ್ 97 ಮತ್ತು ಬ್ರಿಸ್ಬೇನ್ ಗಬ್ಬಾದಲ್ಲಿ ಅಜೇಯ 89 ರನ್ಗಳಿಸಿ ಐತಿಹಾಸಿಕ ಸರಣಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಟ್ಟಾರೆ 4 ಇನ್ನಿಂಗ್ಸ್ಗಳಲ್ಲಿ ಅವರು 245 ರನ್ ಗಳಿಸಿದ್ದರು.
-
A month to remember Down Under for @RishabhPant17 and India 🌏
— ICC (@ICC) February 8, 2021 " class="align-text-top noRightClick twitterSection" data="
Congratulations to the inaugural winner of the ICC Men’s Player of the Month award 👏
📝 https://t.co/aMWlU9Xq6H pic.twitter.com/g7SQbvukh6
">A month to remember Down Under for @RishabhPant17 and India 🌏
— ICC (@ICC) February 8, 2021
Congratulations to the inaugural winner of the ICC Men’s Player of the Month award 👏
📝 https://t.co/aMWlU9Xq6H pic.twitter.com/g7SQbvukh6A month to remember Down Under for @RishabhPant17 and India 🌏
— ICC (@ICC) February 8, 2021
Congratulations to the inaugural winner of the ICC Men’s Player of the Month award 👏
📝 https://t.co/aMWlU9Xq6H pic.twitter.com/g7SQbvukh6
ಯಾವುದೇ ಕ್ರೀಡಾಪಟು ತಂಡದ ಗೆಲುವಿಗಾಗಿ ನೀಡಿದ ಕೊಡುಗೆಯೇ ಅವನಿಗೆ ಸಿಗುವ ಅತ್ಯಂತ ದೊಡ್ಡ ಪ್ರಶಸ್ತಿಯಾಗಿದೆ. ಐಸಿಸಿ ಈ ರೀತಿಯ ಹೊಸ ಉಪಕ್ರಮ ಪ್ರಾರಂಭಿಸಿರುವುದರಿಂದ ಪ್ರತಿ ಬಾರಿಯೂ ಉತ್ತಮವಾಗಿ ಕಾರ್ಯನಿರ್ವಹಿಸಲು ನನ್ನಂತಹ ಯುವಕರನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ ಎಂದು ಪ್ರಶಸ್ತಿಗೆ ಪಾತ್ರರಾಗಿರುವ ರಿಷಭ್ ಪಂತ್ ಹೇಳಿದ್ದಾರೆ.
-
First South African to take 100 T20I wickets ✅
— ICC (@ICC) February 8, 2021 " class="align-text-top noRightClick twitterSection" data="
First ICC Women’s Player of the Month award winner ✅
Well done on an amazing January, Shabnim Ismail! 🇿🇦
📝 https://t.co/nypfCuQvHg pic.twitter.com/CClKhKrAGP
">First South African to take 100 T20I wickets ✅
— ICC (@ICC) February 8, 2021
First ICC Women’s Player of the Month award winner ✅
Well done on an amazing January, Shabnim Ismail! 🇿🇦
📝 https://t.co/nypfCuQvHg pic.twitter.com/CClKhKrAGPFirst South African to take 100 T20I wickets ✅
— ICC (@ICC) February 8, 2021
First ICC Women’s Player of the Month award winner ✅
Well done on an amazing January, Shabnim Ismail! 🇿🇦
📝 https://t.co/nypfCuQvHg pic.twitter.com/CClKhKrAGP
ಈ ಪ್ರಶಸ್ತಿಯನ್ನು ನಾನು ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುಲು ಕೊಡುಗೆ ನೀಡಿದ ಎಲ್ಲಾ ಭಾರತ ತಂಡದ ಸದಸ್ಯರಿಗೆ ಅರ್ಪಿಸುತ್ತೇನೆ. ಹಾಗೂ ಈ ಪ್ರಶಸ್ತಿಗೆ ಆಯ್ಕೆಯಾಗಲು ತಮಗೆ ವೋಟು ಮಾಡಿದ ಆಭಿಮಾನಿಗಳಿಗೆ ಧನ್ಯವಾದಗಳು ಎಂದು ಪಂತ್ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಶಬ್ನಿಮ್ ಐಸಿಸಿ ಮಹಿಳೆಯರ ವಿಭಾಗದ ಪ್ಲೇಯರ್ ಆಫ್ ದ ಮಂತ್ ಪ್ರಶಸ್ತಿ ಪಡೆದಿದ್ದಾರೆ. ಅವರು ಪಾಕಿಸ್ತಾನ ವನಿತೆಯರ ವಿರುದ್ಧ ಏಕದಿನ ಸರಣಿಯಲ್ಲಿ 7 ವಿಕೆಟ್ ಹಾಗೂ ಟಿ20 ಸರಣಿಯಲ್ಲಿ 5 ವಿಕೆಟ್ ಪಡೆದಿದ್ದರು.
ಇದನ್ನು ಓದಿ:ಹಿಮನದಿ ದುರಂತಕ್ಕೆ ಮಿಡಿದ ಪಂತ್ ಮನ: ರಕ್ಷಣಾ ಕಾರ್ಯಾಚರಣೆಗೆ ಟೆಸ್ಟ್ ಪಂದ್ಯದ ವೇತನ ದೇಣಿಗೆ