ETV Bharat / sports

ಧವನ್​ ಔಟಾಗುತ್ತಿದ್ದಂತೆ ಪಂತ್​-ಅಯ್ಯರ್​ ಒಟ್ಟಿಗೆ ಮೈದಾನಕ್ಕೆ ಬಂದ್ರು! ಈ ಗೊಂದಲಕ್ಕೆ ಕಾರಣವೇನು?

36 ರನ್​ ಗಳಿಸಿದ್ದ ಧವನ್​ ಔಟಾಗುತ್ತಿದ್ದಂತೆ ರಿಷಭ್​ ಪಂತ್​ ಹಾಗೂ ಶ್ರೇಯಸ್​ ಅಯ್ಯರ್​ ಇಬ್ಬರು ಮೈದಾನಕ್ಕೆ ಒಂದೇ ಬಾರಿ ಆಗಮಿಸಿ ನೆರೆದಿದ್ದ ಅಭಿಮಾನಿಗಳ ಜೊತೆಗೆ ಕೊಹ್ಲಿಗೂ ಗೊಂದಲ ಮೂಡಿಸಿದ ಘಟನೆ ನಡೆದಿದೆ.

Rishabh Pant, Shreyas Iyer
author img

By

Published : Sep 23, 2019, 9:31 AM IST

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಆರಂಭಿಕ ಶಿಖರ್​ ಧವನ್​ ಔಟಾಗುತ್ತಿದ್ದಂತೆ ನಾಲ್ಕನೇ ಕ್ರಮಾಂಕಕ್ಕೆ ಒಟ್ಟಿಗೆ ಮೈದಾನಕ್ಕೆ ಎಂಟ್ರಿಕೊಟ್ಟ ತಮಾಷೆಯ ಘಟನೆ ನಡೆದಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್​ಗಳ ಹೀನಾಯ ಸೋಲುಕಂಡಿತು. ಟಾಸ್​ ಗೆದ್ದ ಕೊಹ್ಲಿ ಬ್ಯಾಟಿಂಗ್​ ಆಯ್ದುಕೊಂಡರು. ಆದರೆ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ಕೇವಲ 134 ರನ್ ​ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ದಕ್ಷಿಣ ಆಫ್ರಿಕಾ ಕೇವಲ ಒಂದು ವಿಕೆಟ್​ ಕಳೆದುಕೊಂಡು ತಲುಪಿ ಸರಣಿಯನ್ನು ಸಮಬಲ ಮಾಡಿಕೊಂಡಿತು.

ಈ ಪಂದ್ಯದ ವೇಳೆ ಮೈದಾನದಲ್ಲಿ ತಮಾಷೆಯ ಘಟನೆಗೆ ರಿಷಭ್​ ಪಂತ್​ ಹಾಗೂ ಶ್ರೇಯಸ್​ ಅಯ್ಯರ್​ ಕಾರಣರಾದರು. 36 ರನ್ ​ಗಳಿಸಿದ್ದ ಧವನ್​ ಔಟಾಗುತ್ತಿದ್ದಂತೆ ರಿಷಭ್​ ಪಂತ್​ ಹಾಗೂ ಶ್ರೇಯಸ್​ ಅಯ್ಯರ್​ ಇಬ್ಬರು ಮೈದಾನಕ್ಕೆ ಬಂದಿದ್ದರು. ಇದರಿಂದ ನೆರದಿದ್ದ ಅಭಿಮಾನಿಗಳ ಸಹಿತ ಕ್ರೀಸ್​ನಲ್ಲಿದ್ದ ನಾಯಕ ಕೊಹ್ಲಿಗೂ ಯಾರು 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದರ ಬಗ್ಗೆ ಗೊಂದಲ ಮೂಡುವಂತೆ ಮಾಡಿದ್ದಾರೆ. ಕೊನೆಗೆ ಶ್ರೇಯಸ್​ ಅಯ್ಯರ್​ ವಾಪಸ್​ ಪೆವಿಲಿಯನ್​ಗೆ ತೆರಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.

ಈ ಫನ್ನಿ ಘಟನೆಯ ಬಗ್ಗೆ ವಿವಿರಿಸುವ ಕೊಹ್ಲಿ ಅವರು ಪಂತ್​ ಹಾಗೂ ಅಯ್ಯರ್​ ನಡುವೆ ಸಂವಹನದ ಕೊರತೆಯಿಂದ ಇಬ್ಬರು ಒಟ್ಟಿಗೆ ಮೈದಾನಕ್ಕೆ ಬಂದಿದ್ದರು. ಇದಕ್ಕೆ ಕಾರಣ ಬ್ಯಾಟಿಂಗ್​ ಕೋಚ್​ ಈ ಇಬ್ಬರಿಗೂ ಯಾವ ಸಂದರ್ಭದಲ್ಲಿ ಯಾವ ಕ್ರಮಾಂಕದಲ್ಲಿ ಹೋಗಬೇಕು ಎಂಬುದರ ಬಗ್ಗೆ ಹೇಳಿದ ಮಾತನ್ನು ಇಬ್ಬರೂ ಸರಿಯಾಗಿ ಅರ್ಥಮಾಡಿಕೊಳ್ಳದ ಕಾರಣ ಒಂದೇ ಸಂದರ್ಭದಲ್ಲಿ ಮೂವರು ಬ್ಯಾಟ್ಸ್​ಮನ್​ಗಳನ್ನ ಕ್ರೀಸ್​ನಲ್ಲಿ ನೋಡುವಂತಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ಯೋಜನೆಯ ಪ್ರಕಾರ 10 ಓವರ್​ಗಳ ನಂತರ 2ನೇ ವಿಕೆಟ್​ ಬಿದ್ದರೆ ಪಂತ್​ 4 ಕ್ರಮಾಂಕಕ್ಕೆ ಬರಬೇಕಿತ್ತು. 10 ಓವರ್​ಗಳ ಒಳಗೇನಾದರು 2ನೇ ವಿಕೆಟ್​​ ಬಿದ್ದರೆ ಅಯ್ಯರ್​ ಬರಬೇಕಿತ್ತು. ಆದರೆ ಆ ಇಬ್ಬರು ಗೊಂದಲಕ್ಕೀಡಾಗಿದ್ದರಿಂದ ಮೈದಾನಕ್ಕೆ ಆಗಮಿಸಿದ್ದರು ಎಂದು ಕೊಹ್ಲಿ ಪಂದ್ಯದ ನಂತರ ಸ್ಪಷ್ಟನೆ ನೀಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.