ETV Bharat / sports

ಐಪಿಎಲ್​​​ ಮೂಡ್​ನಿಂದ ಹೊರಬರದ ಪಂತ್, ಧೋನಿ ಸ್ಥಾನ ತುಂಬ್ತಾರಾ? ಕ್ರೀಡಾಭಿಮಾನಿಗಳ ಟೀಕೆ - ವಿಶ್ವಕಪ್​

ಶಿಖರ್​ ಧವನ್​ ಗಾಯದ ಹಿನ್ನೆಲೆಯಲ್ಲಿ ಅವಕಾಶ ಪಡೆದು ವಿಶ್ವಕಪ್​ ಆಡಲು ಟೀಂ ಇಂಡಿಯಾ ಸೇರಿಕೊಂಡ ರಿಷಭ್ ಪಂತ್​ ಯಾವುದೇ ಪಂದ್ಯಗಳಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.ಇಂದಿನ ಪಂದ್ಯದಲ್ಲೂ ತಪ್ಪು ಶಾಟ್​ ಆರಿಸಿಕೊಂಡು ಕೈ ಸುಟ್ಟುಕೊಂಡಿದ್ದಾರೆ.

ರಿಷಭ್​ ಪಂತ್​
author img

By

Published : Jul 10, 2019, 8:03 PM IST

ಮ್ಯಾಂಚೆಸ್ಟರ್​​: ಎಂಎಸ್ ಧೋನಿ ವಿಶ್ವಕ್ರಿಕೆಟ್‌ನಿಂದ ನಿವೃತ್ತಿ ಅಂಚಿನಲ್ಲಿದ್ದು, ಅವರು ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡುತ್ತಿದ್ದಂತೆ ಅವರ ಸ್ಥಾನಕ್ಕೆ ರಿಷಭ್​ ಪಂತ್​ ಫಿಕ್ಸ್​ ಎಂಬ ಮಾತು ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಅವರು ಬ್ಯಾಟಿಂಗ್​ ಮಾಡುವ ರೀತಿ ನೋಡುತ್ತಿದ್ದರೆ ಎಂಎಸ್​ ಸ್ಥಾನ ತುಂಬಬಲ್ಲರಾ? ಎಂಬ ಅನುಮಾನ ಕಾಡೋಕೆ ಶುರುವಾಗಿದೆ.

ಟೀಂ ಇಂಡಿಯಾ ಆಯ್ಕೆ ಸಮಿತಿ ಬೆಟ್ಟದಷ್ಟು ನಿರೀಕ್ಷೆಗಳೊಂದಿಗೆ ಉದಯೋನ್ಮುಖ ವಿಕೆಟ್​ ಕೀಪರ್​ ರಿಷಭ್​ ಪಂತ್​ಗೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಆದರೆ ಪಂತ್‌ ಯಾವುದೇ ಪಂದ್ಯದಲ್ಲೂ ಮ್ಯಾಚ್​ ವಿನ್ನಿಂಗ್​ ಪ್ರದರ್ಶನ ನೀಡದೇ ವಿಕೆಟ್​​ ಒಪ್ಪಿಸುತ್ತಿದ್ದಾರೆ. ಹೀಗಾದರೆ ಬರುವ ದಿನಗಳಲ್ಲಿ ಅವರು ಧೋನಿ ರೀತಿಯ ಪ್ರದರ್ಶನ ನೀಡಬಲ್ಲರಾ ಎಂಬ ಸಂಶಯ ಇದೀಗ ಕಾಡತೊಡಗಿದೆ.

Rishabh Pant
ರಿಷಭ್​ ಪಂತ್​

ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಬ್ಯಾಟ್​ ಮಾಡಲು ಕ್ರೀಸಿಗಿಳಿದ ರಿಷಭ್​ ಪಂತ್​​ 32ರನ್​ಗಳಿಕೆ ಮಾಡಿ ಉತ್ತಮವಾಗಿ ಆಡುತ್ತಿದ್ದರು. ಆದರೆ ಈ ವೇಳೆ ದಿಢೀರ್​ ಆಗಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್​ ನೀಡಬೇಕಾಯಿತು. ತಂಡಕ್ಕೆ ವಿಕೆಟ್​ ಕಾಯ್ದುಕೊಳ್ಳುವ ಅವಶ್ಯಕತೆಯಿದ್ದಾಗ ಇಂತಹ ದೊಡ್ಡ ಹೊಡೆತಕ್ಕೆ ಕೈ ಹಾಕುವ ಅವಶ್ಯಕತೆ ಇರಲಿಲ್ಲ ಎಂಬುದು ಕ್ರೀಡಾಭಿಮಾನಿಗಳ ಮಾತಾಗಿದೆ.

ವಿಶ್ವಕಪ್​​ನಲ್ಲಿ ಅವರು ಆಡಿರುವ ಯಾವುದೇ ಪಂದ್ಯದಲ್ಲೂ 50+ರನ್​ಗಳಿಕೆ ಮಾಡಿಲ್ಲ. 30ರಿಂದ 40ರನ್​ಗಳಿಕೆ ಮಾಡುತ್ತಿದ್ದಂತೆ ವಿಕೆಟ್​ ಒಪ್ಪಿಸುತ್ತಿರುವ ರಿಷಭ್​, ಇನ್ನು ಏಕದಿನ ಮಾದರಿ ಕ್ರಿಕೆಟ್​ಗೆ ಹೊಂದಿಕೊಂಡಿಲ್ಲ ಎಂಬುದು ಕ್ರಿಕೆಟ್​ ವಿಶ್ಲೇಷಕರ ಮಾತು.

ವಿಶ್ವಕಪ್​​ನಲ್ಲಿ ಬಾಂಗ್ಲಾ ವಿರುದ್ಧ 48ರನ್​, ಶ್ರೀಲಂಕಾ ವಿರುದ್ಧ 4ರನ್​​ ಹಾಗೂ ಇಂದಿನ ಪಂದ್ಯದಲ್ಲಿ 32ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದಾರೆ. ಹಾಗಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿ ಪಂತ್ ತಂಡವನ್ನು ಮುನ್ನಡೆಸಿ ಗೆಲವಿನ ದಡ ಸೇರಿಸುವ ಬಗ್ಗೆ ಸಹಜವಾಗೇ ಅನುಮಾನ ಎದ್ದಿದೆ.

Intro:Body:

ಐಪಿಎಲ್​​​ ಮೂಡ್​ನಿಂದ ಹೊರಬಂದಿಲ್ಲ ಪಂತ್​​​... ಹೀಗಾದ್ರೆ ಧೋನಿ ಸ್ಥಾನ ಹೇಗೆ ತುಂಬ್ತಾರೆ!? 

ಮ್ಯಾಂಚೆಸ್ಟರ್​​: ಎಂಎಸ್ ಧೋನಿ ನಿವೃತ್ತಿ ಅಂಚಿನಲ್ಲಿದ್ದು, ಅವರು ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡುತ್ತಿದ್ದಂತೆ ಅವರ ಸ್ಥಾನಕ್ಕೆ ರಿಷಭ್​ ಪಂತ್​ ಫಿಕ್ಸ್​ ಎಂಬ ಮಾತು ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಅವರು ಬ್ಯಾಟಿಂಗ್​ ಮಾಡುವ ರೀತಿ ನೋಡುತ್ತಿದ್ದರೆ ಎಂಎಸ್​ ಸ್ಥಾನ ತುಂಬಬಲ್ಲರಾ ಎಂಬ ಅನುಮಾನ ಮೂಡಲು ಶುರುವಾಗಿದೆ. 

ಟೀಂ ಇಂಡಿಯಾ ಆಯ್ಕೆ ಸಮಿತಿ ಬಹಳಷ್ಟು ನಿರೀಕ್ಷೆಗಳೊಂದಿಗೆ ಉದಯೋನ್ಮುಖ ವಿಕೆಟ್​ ಕೀಪರ್​ ರಿಷಭ್​ ಪಂತ್​ಗೆ ತಂಡದಲ್ಲಿ ಸೇರಿಸಿಕೊಂಡಿದೆ. ಆದರೆ ಯಾವುದೇ ಪಂದ್ಯದಲ್ಲೂ ಮ್ಯಾಚ್​ ವಿನಿಂಗ್​ ಪ್ರದರ್ಶನ ನೀಡದೇ ವಿಕೆಟ್​​ ಒಪ್ಪಿಸುತ್ತಿದ್ದಾರೆ. ಹೀಗಾದರೆ ಬರುವ ದಿನಗಳಲ್ಲಿ ಅವರು ಧೋನಿ ರೀತಿಯ ಪ್ರದರ್ಶನ ನೀಡಬಲ್ಲರಾ ಎಂಬ ಮಾತು ಇದೀಗ ಜೋರಾಗಿ ಕೇಳಿ ಬರುತ್ತಿದೆ. 

ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಬ್ಯಾಟಿಂಗ್​ ಮಾಡಲು ಇಳಿದ ರಿಷಭ್​ ಪಂತ್​​ 32ರನ್​ಗಳಿಕೆ ಮಾಡಿ ಉತ್ತಮವಾಗಿ ಆಡುತ್ತಿದ್ದರು. ಆದರೆ ಈ ವೇಳೆ ದಿಡೀರ್​ ಆಗಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್​ ನೀಡಬೇಕಾಯಿತು. ತಂಡಕ್ಕೆ ವಿಕೆಟ್​ ಕಾಯ್ದುಕೊಳ್ಳುವ ಅವಶ್ಯಕತೆಯಿದ್ದಾಗ ಇಂತಹ ದೊಡ್ಡ ಹೊಡೆತಕ್ಕೆ ಕೈ ಹಾಕುವ ಅವಶ್ಯಕತೆ ಇರಲಿಲ್ಲ ಎಂಬುದು ಕ್ರೀಡಾಭಿಮಾನಿಗಳ ಮಾತಾಗಿದ್ದು, ಇನ್ನು ರಿಷಭ್​ ಪಂತ್​ ಐಪಿಎಲ್​ ಮೂಡ್​​ನಲ್ಲೇ ಇದ್ದಾರೆ ಎಂದಿದ್ದಾರೆ. 

ವಿಶ್ವಕಪ್​​ನಲ್ಲಿ ಅವರು ಆಡಿರುವ ಯಾವುದೇ ಪಂದ್ಯದಲ್ಲೂ 50+ರನ್​ಗಳಿಕೆ ಮಾಡಿಲ್ಲ. 30ರಿಂದ 40ರನ್​ಗಳಿಕೆ ಮಾಡುತ್ತಿದ್ದಂತೆ ವಿಕೆಟ್​ ಒಪ್ಪಿಸುತ್ತಿರುವ ರಿಷಭ್​, ಇನ್ನು ಏಕದಿನ ಮಾದರಿ ಕ್ರಿಕೆಟ್​ಗೆ ಹೊಂದಿಕೊಂಡಿಲ್ಲ ಎಂಬುದು ಕ್ರಿಕೆಟ್​ ವಿಶ್ಲೇಷಕರ ಮಾತು. 

ಪಂತ್​ ವಿಶ್ವಕಪ್​​ನಲ್ಲಿ ಬಾಂಗ್ಲಾ ವಿರುದ್ಧ 48ರನ್​, ಶ್ರೀಲಂಕಾ ವಿರುದ್ಧ 4ರನ್​​ ಹಾಗೂ ಇಂದಿನ ಪಂದ್ಯದಲ್ಲಿ 32ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದಾರೆ. ಇನ್ನು ಹಿಂದೆ 4ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿದ್ದ ಅಂಬಾಟಿ ರಾಯುಡು ಸ್ಥಾನಕ್ಕೆ ಆಯ್ಕೆಯಾಗಿರುವ ಪಂತ್​ ಆತನ ಕ್ರಿಕೆಟ್​ ಬದುಕಿಗೆ ಮುಳ್ಳುವಾಗಿ, ತಂಡದಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇರುವುದು ವಿಪರ್ಯಾಸದ ಸಂಗತಿ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.