ಲಂಡನ್: ಇಂಗ್ಲೆಂಡ್ ವಿರುದ್ಧ ಮೂರು ಮಾದರಿಯ ಕ್ರಿಕೆಟ್ನಲ್ಲೂ ಅದ್ಭುತ ಪ್ರದರ್ಶನ ತೋರಿರುವ ರಿಷಭ್ ಪಂತ್ ಒಬ್ಬ 'ಅಪರೂಪದ ಪ್ರತಿಭೆ' ಎಂದು ಕರೆದಿರುವ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಇಯಾನ್ ಬೆಲ್, ಆತನಿಲ್ಲದ ಭಾರತ ತಂಡವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಟೆಸ್ಟ್ ಸರಣಿಯ ನಂತರ ಸೀಮಿತ ಓವರ್ಗಳ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದ ಪಂತ್ ಕೊನೆಯ 2 ಏಕದಿನ ಪಂದ್ಯಗಳಲ್ಲಿ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದರು. ಎರಡೂ ಪಂದ್ಯಗಳಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿ ಅರ್ಧಶತಕ ದಾಖಲಿಸಿ 2-1ರಲ್ಲಿ ಏಕದಿನ ಸರಣಿ ಗೆಲ್ಲಲು ನೆರವಾಗಿದ್ದರು.
"ನಾವು ಪ್ರಬುದ್ಧ ಸರಣಿಯನ್ನು ನೋಡಿದ್ದೇವೆ. ಈ ಕ್ಷಣಗಳಲ್ಲಿ ಪಂತ್ ರೀತಿ ಆಡಿದವರನ್ನು ನೋಡಿದ್ದು ಅಪರೂಪ. ಇದು ಅವರ ಯಶಸ್ವಿ ವೃತ್ತಿಜೀವನದ ಆರಂಭ. ಆತನದು ನಂಬಲಸಾಧ್ಯವಾದ ಆಟ, ನಿಜವಾದ ಮ್ಯಾಚ್ ವಿನ್ನರ್" ಎಂದು ಯುವ ಆಟಗಾರನನ್ನು ಗುಣಗಾನ ಮಾಡಿದ್ದಾರೆ.
ರಿಷಭ್ ಪಂತ್ ಈ ವರ್ಷದ ಎಲ್ಲಾ ಮಾದರಿಯಲ್ಲೂ ವಿಶೇಷ ಫಾರ್ಮ್ನಲ್ಲಿದ್ದಾರೆ. ಅವರು ಬಾರ್ಡರ್ ಗವಾಸ್ಕರ್ ಟ್ರೋಫಿಯ 3ನೇ ಪಂದ್ಯದಲ್ಲಿ ಆಕರ್ಷಕ 97 ಮತ್ತು ಗಬ್ಬಾದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ವೇಳೆ ಅಜೇಯ 89 ರನ್ಗಳಿಸಿದ್ದರು.
ಇಂಗ್ಲೆಂಡ್ ವಿರುದ್ಧವೂ 4ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಆಯ್ಕೆಗಾರರ ಗಮನ ಸೆಳೆದು ಸೀಮಿತ ಓವರ್ಗಳ ಪಂದ್ಯದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದರು. ಕೊನೆಯ ಏಕದಿನ ಪಂದ್ಯದಲ್ಲಿ 62 ಎಸೆತಗಳಲ್ಲಿ 78 ರನ್ಗಳಿಸಿ ತಂಡದ ಟಾಪ್ ಸ್ಕೋರರ್ ಆಗಿದ್ದರು.
ಇದನ್ನೂ ಓದಿ: ಭಾರತ ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಪ್ರಾಬಲ್ಯದ ಯುಗ ಸೃಷ್ಟಿಸಲಿದೆ: ಇಯಾನ್ ಚಾಪೆಲ್ ಭವಿಷ್ಯ