ಹೈದರಾಬಾದ್: ಇಂದಿನಿಂದ ಆರಂಭವಾಗಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆ ಮೇಲೆ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಕಣ್ಣಿಟ್ಟಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ 7 ಟಿ-20 ಪಂದ್ಯಗಳನ್ನ ಆಡಿರುವ ಧೋನಿ ಕ್ಯಾಚ್ ಮತ್ತು ಸ್ಟಂಪ್ನಿಂದ ಒಟ್ಟು ಐದು ವಿಕೆಟ್ ಪಡೆದಿದ್ದಾರೆ. ಈ ಮೂಲಕ ವಿಂಡೀಸ್ ವಿರುದ್ಧ ಹೆಚ್ಚು ಆಟಗಾರರನ್ನು ಔಟ್ ಮಾಡಿರುವ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆ ಧೋನಿ ಹೆಸರಲ್ಲಿದೆ.
ಇದೇ ದಾಖಲೆ ಮೇಲೆ ಯುವ ವಿಕೆಟ್ ಕೀಪರ್ ಪಂತ್ ಕಣ್ಣಿಟ್ಟಿದ್ದಾರೆ. ರಿಷಭ್ ಪಂತ್ ಕೂಡ ಕೆರಿಬಿಯನ್ನರ ವಿರುದ್ಧ 7 ಟಿ-20 ಪಂದ್ಯಗಳನ್ನ ಆಡಿದ್ದು, ಮೂವರು ಆಟಗಾರರನ್ನ ಔಟ್ ಮಾಡಿದ್ದಾರೆ. ಇಂದಿನಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಪಂತ್ ಮೂರು ಆಟಗಾರರನ್ನ ಔಟ್ ಮಾಡುವಲ್ಲಿ ಯಶಸ್ವಿಯಾದ್ರೆ ಧೋನಿ ಹೆಸರಲ್ಲಿರುವ ದಾಖಲೆಯನ್ನ ಅಳಿಸಿ ಹಾಕಲಿದ್ದಾರೆ.