ಮುಂಬೈ: ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಹಾಗೂ ಬ್ಯಾಟ್ಸ್ಮನ್ ರಿಕಿ ಪಾಂಟಿಂಗ್ ತಮ್ಮ ದಶಕದ ಟೀಂ ಘೋಷಿಸಿದ್ದು, ಅದರಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.
"ಎಲ್ಲರೂ ತಮ್ಮ ನೆಚ್ಚಿನ ದಶಕದ ತಂಡವನ್ನು ಘೋಷಿಸುತ್ತಿದ್ದಾರೆ. ಅದಕ್ಕೆ ನಾನೂ ಕೂಡ ಸೇರಿಕೊಳ್ಳುತ್ತಿದ್ದೇನೆ" ಎಂದು ವಿರಾಟ್ ಕೊಹ್ಲಿ ನೇತೃತ್ವದ 11 ಆಟಗಾರರ ತಂಡವನ್ನು ತಮ್ಮ ಟ್ವಿಟರ್ನಲ್ಲಿ ಘೋಷಣೆ ಮಾಡಿದ್ದಾರೆ.
ಪಾಂಟಿಂಗ್ ಆಯ್ಕೆ ಮಾಡಿರುವ ತಂಡದಲ್ಲಿ ಮೂವರು ಆಸ್ಟ್ರೇಲಿಯನ್ನರು, ನಾಲ್ವರು ಇಂಗ್ಲೆಂಡ್ ಆಟಗಾರರು ಹಾಗೂ ಭಾರತ, ಶ್ರೀಲಂಕಾ, ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡದಿಂದ ತಲಾ ಒಬ್ಬರನ್ನು ಆಯ್ಕೆ ಮಾಡಿದ್ದಾರೆ.
ಭಾರತದಿಂದ ವಿರಾಟ್ ಕೊಹ್ಲಿಯನ್ನು ಮಾತ್ರ ಆಯ್ಕೆ ಮಾಡಿದ್ದು, ಅವರನ್ನೇ ತಂಡದ ನಾಯಕನನ್ನಾಗಿ ಕೂಡ ಆಯ್ಕೆ ಮಾಡಲಾಗಿದೆ. ಈ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ವಿಸ್ಡನ್ ಆಯ್ಕೆ ಮಾಡಿದ್ದ ದಶಕದ ಟೆಸ್ಟ್ ತಂಡಕ್ಕೂ ಕೊಹ್ಲಿಯೇ ನಾಯಕರಾಗಿದ್ದರು.
ರಿಕಿ ಪಾಂಟಿಂಗ್ ಆಯ್ಕೆ ಮಾಡಿರುವ ದಶಕದ ಟೆಸ್ಟ್ ತಂಡ
- ಡೇವಿಡ್ ವಾರ್ನರ್(ಇಂಗ್ಲೆಂಡ್)
- ಆಲಿಸ್ಟರ್ ಕುಕ್(ಇಂಗ್ಲೆಂಡ್)
- ಕೇನ್ ವಿಲಿಯಮ್ಸನ್(ನ್ಯೂಜಿಲ್ಯಾಂಡ್)
- ಸ್ಟಿವ್ ಸ್ಮಿತ್(ಇಂಗ್ಲೆಂಡ್)
- ವಿರಾಟ್ ಕೊಹ್ಲಿ (ಭಾರತ) ತಂಡದ ನಾಯಕ
- ಕುಮಾರ್ ಸಂಗಾಕ್ಕರ(ಶ್ರೀಲಂಕಾ)
- ಬೆನ್ ಸ್ಟೋಕ್ಸ್(ಇಂಗ್ಲೆಂಡ್)
- ಡೇಲ್ ಸ್ಟೈನ್(ದಕ್ಷಿಣ ಆಫ್ರಿಕಾ)
- ನಥನ್ ಲಿಯಾನ್(ಆಸ್ಟ್ರೇಲಿಯಾ)
- ಸ್ಟುವರ್ಟ್ ಬ್ರಾಡ್(ಇಂಗ್ಲೆಂಡ್)
- ಜೇಮ್ಸ್ ಆ್ಯಂಡರ್ಸನ್(ಇಂಗ್ಲೆಂಡ್)