ETV Bharat / sports

ಒಂದೇ ದಿನ ಟೆಸ್ಟ್​- ಟಿ20 ಪಂದ್ಯವನ್ನಾಡಲಿದೆ ಟೀಂ ಇಂಡಿಯಾ..  ಏನಿದು ಬಿಸಿಸಿಐ ಹೊಸ ಪ್ಲಾನ್?

ಒಂದೇ ದಿನ ಎರಡು ಪಂದ್ಯಗಳನ್ನು ಆಡಿಸಬೇಕೆಂದು ಬಿಸಿಸಿಐ ಆಲೋಚಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ತನಗಾಗಿರುವ ನಷ್ಟವನ್ನು ಬರಿಸಿಕೊಳ್ಳಲು ಬಿಸಿಸಿಐ ಬಯಸಿದೆ. ಈಗಾಗಲೇ ಬಿಸಿಸಿಐ ಅಧಿಕಾರಿಗಳು, ಕೋಚಿಂಗ್ ಸ್ಟಾಫ್‌ಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದ್ದಾರೆ.

ಒಂದೇ ದಿನ ಎರಡು ಪಂದ್ಯಕ್ಕೆ ಬಿಸಿಸಿಐ ಚಿಂತನೆ
ಒಂದೇ ದಿನ ಎರಡು ಪಂದ್ಯಕ್ಕೆ ಬಿಸಿಸಿಐ ಚಿಂತನೆ
author img

By

Published : May 9, 2020, 3:18 PM IST

ಮುಂಬೈ: ಕಳೆದ ಎರಡು ತಿಂಗಳಿನಿಂದ ಕೊರೊನಾ ವಿಶ್ವದಾದ್ಯಂತ ತಾಂಡವವಾಡುತ್ತಿರುವುದರಿಂದ ಐಪಿಎಲ್​ ಸೇರಿದಂತೆ ಬಹುಪಾಲು ಕ್ರಿಕೆಟ್​ ಟೂರ್ನಿಗಳು ರದ್ದಾಗಿ ಅಪಾರ ನಷ್ಟ ಅನುಭವಿಸಿರು ಬಿಸಿಸಿಐ, ಮುಂದಿನ ಆಸ್ಟ್ರೇಲಿಯಾ ಪ್ರವಾಸದದ ವೇಳೆ ಒಂದೇ ದಿನ ಎರಡು ಪಂದ್ಯಗಳನ್ನುಆಡಿಸುವ ಹೊಸ ಆಲೋಚನೆಗೆ ಮುಂದಾಗಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿ ಮಾರ್ಚ್​ನಲ್ಲಿ ಕೊರೊನಾ ಭೀತಿಯಿಂದ ರದ್ದಾದ ನಂತರ ನಡೆಯಬೇಕಿದ್ದ ಐಪಿಎಲ್​ ಟೂರ್ನಿ ಸೇರಿದಂತೆ ಹಲವು ವಿದೇಶಿ ಟೂರ್ನಿಗಳು ರದ್ದಾಗಿದ್ದವು. ಇದರಿಂದ ಬಿಸಿಸಿಐಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ.

ಇದೀಗ ಕೊರೊನಾದಿಂದ ನಷ್ಟಕ್ಕೊಳಗಾಗಿರುವ ಪ್ರಸಾರಕರು ಸ್ಪಾನ್ಸರ್​ಗಳಿಗೂ ಅನುಕೂಲವಾಗಲು ಹಾಗೂ ಅಭಿಮಾನಿಗಳಿಗೆ ಮನರಂಜೆನೆಯ ರಸದೌತಣ ನೀಡಲು ಬಿಸಿಸಿಐ ಮುಂದಾಗಿದೆ. ಒಂದೇ ದಿನ ಎರಡು ಪಂದ್ಯಗಳನ್ನು ಆಡಿಸಬೇಕೆಂದು ಬಿಸಿಸಿಐ ಆಲೋಚಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ತನಗಾಗಿರುವ ನಷ್ಟವನ್ನು ಬರಿಸಿಕೊಳ್ಳಲು ಬಿಸಿಸಿಐ ಬಯಸಿದೆ. ಈಗಾಗಲೇ ಬಿಸಿಸಿಐ ಅಧಿಕಾರಿಗಳು, ಕೋಚಿಂಗ್ ಸ್ಟಾಫ್‌ಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದ್ದಾರೆ.

ಇನ್ನು ಭಾರತ ತಂಡ ಕೊನೆಯ ಬಾರಿ ಫೆಬ್ರವರಿಯಲ್ಲಿ ಟೆಸ್ಟ್​ ಪಂದ್ಯವನ್ನಾಡಿತ್ತು. ಅದರಲ್ಲಿದ್ದ ಅಜಿಂಕ್ಯಾ ರಹಾನೆ, ಚೇತೇಶ್ವರ್​ ಪೂಜಾರ, ಹನುಮ ವಿಹಾರಿ, ಇಶಾಂತ್​ ಶರ್ಮಾ, ವೃದ್ಧಿಮಾನ್​ ಸಹಾ, ಅಗರ್​ವಾಲ್​ ಹಾಗೂ ಅಶ್ವಿನ್​ ಟೆಸ್ಟ್​ ತಂಡದ ಖಾಯಂ ಸದಸ್ಯರಾಗಿದ್ದಾರೆ. ಇನ್ನು, ಕೆಲವರು ಟಿ20 ತಂಡಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಇದೀಗ ಕೆಲವು ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಕ್ರಿಕೆಟ್​ನಲ್ಲಿ ಹೆಜ್ಜೆಯಿಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.