ಶಾರ್ಜಾ : ಭಾರತೀಯ ಮಹಿಳಾ ಕ್ರಿಕೆಟಿಗರು ಟಿ20 ಚಾಲೆಂಜ್ ಮೂಲಕ ಮತ್ತೆ ಮೈದಾನ ಪ್ರವೇಶಿಸುತ್ತಿದ್ದಾರೆ. ಮತ್ತೆ ಮೈದಾನದ ಕಣಕ್ಕಿಳಿಯಲು ನಿಜವಾಗಿಯೂ ಉತ್ಸುಕರಾಗಿದ್ದೇವೆ ಎಂದು ಸೂಪರ್ ನೋವಾಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಸಂತಸ ವ್ಯಕ್ತಪಡಿಸಿದ್ದಾರೆ.
ಮಹಿಳಾ ಟಿ20 ಚಾಲೆಂಜ್ ಇಂದಿನಿಂದ ನವೆಂಬರ್ 9ರವರೆಗೆ ಶಾರ್ಜಾದಲ್ಲಿ ನಡೆಯಲಿದ್ದು, ಈ ಟೂರ್ನಿಯಲ್ಲಿ ಟ್ರೈಲ್ ಬ್ಲೇಜರ್ಸ್, ಸೂಪರ್ನೋವಾಸ್ ಹಾಗೂ ವೆಲಾಸಿಟಿ ತಂಡಗಳು ಭಾಗವಹಿಸಲಿವೆ.

ವೆಲಾಸಿಟಿ ಮತ್ತು ಟ್ರೈಲ್ಬ್ಲೇಜರ್ಸ್ ನಡುವಿನ ಪಂದ್ಯವನ್ನು ಹೊರತುಪಡಿಸಿ ಎಲ್ಲಾ ಪಂದ್ಯಗಳು ಸಂಜೆ 7:30 ರಿಂದ ಪ್ರಾರಂಭವಾಗುತ್ತವೆ. ವೆಲಾಸಿಟಿ ಮತ್ತು ಟ್ರೈಲ್ಬ್ಲೇಜರ್ಸ್ ನಡುವಿನ ಪಂದ್ಯ ಮಧ್ಯಾಹ್ನ 3:30ಕ್ಕೆ ನಡೆಯಲಿದೆ.
ಅಕ್ಟೋಬರ್ 11 ರಂದು ಬಿಸಿಸಿಐ ಮಹಿಳಾ ಟಿ20 ಚಾಲೆಂಜ್ ತಂಡಗಳು ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಕಳೆದ ವರ್ಷದ ಫೈನಲಿಸ್ಟ್ ಸೂಪರ್ನೋವಾಸ್ ತಂಡ ಇಂದು ನಡೆಯುವ ಆರಂಭಿಕ ಪಂದ್ಯದಲ್ಲಿ ವೆಲಾಸಿಟಿಯೊಂದಿಗೆ ಸೆಣಸಾಟ ನಡೆಸಲಿದೆ.
ಸೂಪರ್ನೊವಾಸ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್, ಚಮರಿ ಅತಪತ್ತು, ಪ್ರಿಯಾ ಪುನಿಯಾ, ಅನುಜಾ ಪಾಟೀಲ್, ರಾಧಾ ಯಾದವ್, ತಾನಿಯಾ ಭಾಟಿಯಾ, ಶಶಿಕಲಾ ಶ್ರೀವರ್ಧನೆ, ಪೂನಂ ಯಾದವ್, ಶಕೇರಾ ಸೆಲ್ಮಾನ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಆಯುಷಿ ಸೋನಿ, ಆಯಭೋಂಗ ಖಾಕ, ಮುಸ್ಕಾನ್ ಮಲಿಕ್ ಈ ತಂಡದ ಆಟಗಾರ್ತಿಯರು.