ETV Bharat / sports

ಮೊದಲ ಟೆಸ್ಟ್​ ನಂತರ ಕೊಹ್ಲಿ ಸ್ಥಾನದಲ್ಲಿ ಯಾರು?.. ಅದಕ್ಕೆ ರೋಹಿತ್ ಶರ್ಮಾ ಉತ್ತರ ಹೀಗಿದೆ..

ವಿರಾಟ್ ತಂಡದಿಂದ ಹೊರ ಬಂದ ಬಳಿಕ ತಂಡದಲ್ಲಿನ ಅವರ ಜಾಗಕ್ಕೆ ಸೂಕ್ತ ಆಯ್ಕೆ ಯಾವುದು, ಇನ್ನಿಂಗ್ಸ್ ಆರಂಭಿಸುವವರು ಯಾರು? ಎಂಬ ವಿಚಾರಗಳ ಬಗ್ಗೆ ಈಗಾಗಲೇ ಆಸ್ಟ್ರೇಲಿಯಾದಲ್ಲಿರುವ ತಂಡ ಲೆಕ್ಕಾಚಾರ ಮಾಡಿರುತ್ತಾರೆ ಎಂದು ನನಗೆ ಖಾತ್ರಿಯಿದೆ..

ರೋಹಿತ್ ಶರ್ಮಾ
ರೋಹಿತ್ ಶರ್ಮಾ
author img

By

Published : Nov 22, 2020, 5:30 PM IST

ಬೆಂಗಳೂರು : ಆಸೀಸ್​ ಪ್ರವಾಸದಲ್ಲಿ ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡಲು ನನಗೆ ಖುಷಿಯಿದೆ ಎಂದು ಭಾರತ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ ಹೇಳಿದ್ದಾರೆ.

ಟೆಸ್ಟ್​ ತಂಡಕ್ಕೆ ಮರಳಿದ ನಂತರ ರೋಹಿತ್ ಆರಂಭಿಕನಾಗಿ ಭಾರಿ ಯಶಸ್ಸು ಕಾಣುತ್ತಿದ್ದಾರೆ. ಆದರೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾಯಕ ವಿರಾಟ್ ಕೊಹ್ಲಿ ಕೊನೆಯ ಮೂರು ಪಂದ್ಯಗಳಲ್ಲಿ ಆಡದಿರುವುದರಿಂದ ಅವರ ಜಾಗಕ್ಕೆ ಯಾರು ಸೂಕ್ತ ಎನ್ನುವ ವಿಚಾರ ಭಾರತೀಯ ಕ್ರಿಕೆಟ್​ನಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಆದರೆ, ರೋಹಿತ್ ಶರ್ಮಾ ತಂಡ ಮಾತ್ರ ಯಾವ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಸೂಚಿಸಿದರೂ ತಾವು ಅದಕ್ಕೆ ಸಿದ್ಧರಿರುವುದಾಗಿ ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.

ನಾನು ಈಗಾಗಲೇ ಎಲ್ಲರಿಗೂ ಹೇಳಿರೋದನ್ನೇ ನಿಮಗೂ ಹೇಳುತ್ತಿದ್ದೇನೆ, ತಂಡ ಬಯಸಿದ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ನಾನು ಸಂತೋಷ ಪಡುತ್ತೇನೆ. ಆದರೆ, ನನ್ನನ್ನು ಆರಂಭಿಕನಾಗಿ ಅವರು ಬದಲಾಯಿಸುತ್ತಾರೋ, ಇಲ್ಲವೋ ನನಗೆ ತಿಳಿದಿಲ್ಲ ಎಂದು ಶರ್ಮಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಆಗಿ ಟೆಸ್ಟ್​ ಕ್ರಿಕೆಟ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ವೇಳೆ ಆರಂಭಿಕನಾಗಿ ಬಡ್ತಿ ಪಡೆದು ಯಶಸ್ಸು ಸಾಧಿಸಿದ್ದರು. ಅವರು ಆ ಸರಣಿಯಲ್ಲಿ 3 ಶತಕದ ಸಹಿತ 529 ರನ್​ಗಳಿಸಿದ್ದರು.

ವಿರಾಟ್ ತಂಡದಿಂದ ಹೊರ ಬಂದ ಬಳಿಕ ತಂಡದಲ್ಲಿನ ಅವರ ಜಾಗಕ್ಕೆ ಸೂಕ್ತ ಆಯ್ಕೆ ಯಾವುದು, ಇನ್ನಿಂಗ್ಸ್ ಆರಂಭಿಸುವವರು ಯಾರು? ಎಂಬ ವಿಚಾರಗಳ ಬಗ್ಗೆ ಈಗಾಗಲೇ ಆಸ್ಟ್ರೇಲಿಯಾದಲ್ಲಿರುವ ತಂಡ ಲೆಕ್ಕಾಚಾರ ಮಾಡಿರುತ್ತಾರೆ ಎಂದು ನನಗೆ ಖಾತ್ರಿಯಿದೆ. ಆದರೆ, ನಾನು ಅಲ್ಲಿಗೆ ತೆರಳಿದ ನಂತರ, ಅಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ತಿಳಿಯಲಿದೆ. ಅವರು ಹೇಳಿದ ಜಾಗದಲ್ಲಿ ಆಡಲು ನನ್ನ ಸಹಮತವಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.