ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಹೈದರಾಬಾದ್ ತಂಡ ಬೌಲಿಂಗ್ ಆಯ್ದುಕೊಂಡಿದೆ.
ಆಡುವ 11ರ ಬಳಗ
ಹೈದರಾಬಾದ್: ಡೇವಿಡ್ ವಾರ್ನರ್(ಕ್ಯಾ), ಶ್ರೀವಾಸ್ತವ್ ಗೋಸ್ವಾಮಿ(ವಿ.ಕೀ), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಾಂ ಗರ್ಗ್, ಹೋಲ್ಡರ್, ಅಬ್ದುಲ್, ರಾಶೀದ್ ಖಾನ್, ನದೀಂ, ಸಂದೀಪ್ ಶರ್ಮಾ, ಟಿ. ನಟರಾಜನ್
-
#SRH win the toss and elect to bowl first!#SRHvRCB #Dream11IPL pic.twitter.com/UAzZQygnct
— IndianPremierLeague (@IPL) November 6, 2020 " class="align-text-top noRightClick twitterSection" data="
">#SRH win the toss and elect to bowl first!#SRHvRCB #Dream11IPL pic.twitter.com/UAzZQygnct
— IndianPremierLeague (@IPL) November 6, 2020#SRH win the toss and elect to bowl first!#SRHvRCB #Dream11IPL pic.twitter.com/UAzZQygnct
— IndianPremierLeague (@IPL) November 6, 2020
ಬೆಂಗಳೂರು ತಂಡ: ಆರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ(ಕ್ಯಾ), ಎಬಿ ಡಿವಿಲಿಯರ್ಸ್(ವಿ,ಕೀ) ಮೊಯಿನ್ ಅಲಿ, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ನವದೀಪ್ ಸೈನಿ, ಆ್ಯಂಡಂ ಜಂಪಾ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಾಲ್
ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಳ್ಳಲಿದ್ದು, ಮುಂಬೈ ವಿರುದ್ಧ ಸೋತ ಡೆಲ್ಲಿ ವಿರುದ್ಧ ನಾಡಿದ್ದು ಸೆಣಸಾಟ ನಡೆಸಲಿದೆ.ಆರ್ಸಿಬಿ ಬ್ಯಾಟಿಂಗ್ ಹೇಳಿಕೊಳ್ಳುವ ರೀತಿಯಲ್ಲಿ ಇಲ್ಲ. ಆದರೆ ಬೆಂಗಳೂರು ತಂಡದ ಬೌಲರ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಚಹಾಲ್ ತಮ್ಮ ವಿಕೆಟ್ ಅಭಿಯಾನ ಮುಂದುವರೆಸಿದ್ರೆ, ವಾಷಿಂಗ್ಟನ್ ಸುಂದರ್ ರನ್ಗಳಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಕ್ರಿಸ್ ಮೋರಿಸ್ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ. ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದ ಸೈನಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಟೂರ್ನಿ ಆರಂಭದಲ್ಲಿ ಮಂಕಾಗಿದ್ದ ಹೈದರಾಬಾದ್ ತಂಡ ನಂತರ ಭರ್ಜರಿಯಾಗಿ ಕಂಬ್ಯಾಕ್ ಮಾಡಿದೆ. ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡಗಳನ್ನು ಸೋಲಿಸಿ ಪ್ಲೇ-ಆಫ್ ಪ್ರವೇಶಿಸಿದೆ. ಸ್ವತಃ ನಾಯಕ ಡೇವಿಡ್ ವಾರ್ನರ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.