ದುಬೈ: ಐಪಿಎಲ್ನಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ತೀವ್ರ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದು, ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಂದು ಆರ್‌ಸಿಬಿ ಮತ್ತು ಪಂಜಾಬ್ ತಂಡಗಳು ತೋಳಿಗೆ ಕಪ್ಪುಪಟ್ಟಿ ಧರಿಸಿ ಆಡುತ್ತಿವೆ.
-
We are extremely shocked and sad to learn of the untimely demise of Mr. Dean Jones. His energy and enthusiasm for the game will be truly missed. Our thoughts with his family, friends and his followers in this hour of grief. pic.twitter.com/gAAagImKeC
— IndianPremierLeague (@IPL) September 24, 2020 " class="align-text-top noRightClick twitterSection" data="
">We are extremely shocked and sad to learn of the untimely demise of Mr. Dean Jones. His energy and enthusiasm for the game will be truly missed. Our thoughts with his family, friends and his followers in this hour of grief. pic.twitter.com/gAAagImKeC
— IndianPremierLeague (@IPL) September 24, 2020We are extremely shocked and sad to learn of the untimely demise of Mr. Dean Jones. His energy and enthusiasm for the game will be truly missed. Our thoughts with his family, friends and his followers in this hour of grief. pic.twitter.com/gAAagImKeC
— IndianPremierLeague (@IPL) September 24, 2020
59 ವರ್ಷದ ಜೋನ್ಸ್1984 ರಿಂದ 1992ರವರೆಗೂ 8 ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡದಲ್ಲಿ ಆಡಿದ್ದರು. 52 ಟೆಸ್ಟ್ ಪಂದ್ಯಗಳಲ್ಲಿ 3631 ರನ್ಗಳಿಸಿದ್ದರು. 11 ಶತಕ ಮತ್ತು 14 ಅರ್ಧಶತಕಗಳನ್ನು ಬಾರಿಸಿದ್ದರು. ಏಕದಿನ ಕ್ರಿಕೆಟ್ನಲ್ಲಿ 161 ಪಂದ್ಯಗಳಲ್ಲಿ 7 ಶತಕ ಹಾಗೂ 46 ಅರ್ಧಶತಕ ಸಹಿತ 6068 ರನ್ ಗಳಿಸಿದ್ದರು.
-
Shocked to hear about the tragic loss of Dean Jones. Praying for strength and courage to his family and friends. 🙏🏻
— Virat Kohli (@imVkohli) September 24, 2020 " class="align-text-top noRightClick twitterSection" data="
">Shocked to hear about the tragic loss of Dean Jones. Praying for strength and courage to his family and friends. 🙏🏻
— Virat Kohli (@imVkohli) September 24, 2020Shocked to hear about the tragic loss of Dean Jones. Praying for strength and courage to his family and friends. 🙏🏻
— Virat Kohli (@imVkohli) September 24, 2020
ಮಾಧ್ಯಮಗಳೊಂದಿಗೆ ಮಾತನಾಡಿರುವ ಐಪಿಎಲ್ನ ಜನರಲ್ ಸೆಕ್ರೇಟರಿಯೊಬ್ಬರು," ಡೀನ್ ಜೋನ್ಸ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಂದು ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ವೇಳೆ ಆರ್‌ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರು ಕಪ್ಪುಪಟ್ಟಿ ಧರಿಸಿ ಆಡಲು ನಿರ್ಧರಿಸಲಾಗಿದೆ" ಎಂದು ತಿಳಿಸಿದ್ದಾರೆ.
ಸ್ಟಾರ್ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾದ ಹೈಕಮಿಷನ್‌ನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಪಾರ್ಥೀವ ಶರೀರವನ್ನು ತಲುಪಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.